ಶಿವಾಜಿ ಸುರತ್ಕಲ್ 2: ಏಪ್ರಿಲ್ 14 ಕ್ಕೆ ರಿಲೀಸ್
Team Udayavani, Mar 9, 2023, 1:52 PM IST
ರಮೇಶ್ ಅರವಿಂದ್ ನಟನೆಯ “ಶಿವಾಜಿ ಸುರತ್ಕಲ್-2′ ಚಿತ್ರ ಚಿತ್ರೀಕರಣ ಪೂರೈಸಿದ್ದು, ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ. ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದು, ಸಂಕಲನ ಮಾಡಿ, ನಿರ್ದೇಶನ ಮಾಡಿರುವ ಈ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ಮೂಲಕ ಅನೂಪ್ ಗೌಡ ಮತ್ತು ರೇಖಾ ಕೆ ಎನ್ ನಿರ್ಮಾಣ ಮಾಡಿದ್ದಾರೆ.
ಚಿತ್ರದ ಕೊನೆಯ ಒಂದು ಹಾಡಿನ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಚಿತ್ರತಂಡ ಮುಗಿಸಿದೆ. ಈ ಹಾಡಿನಲ್ಲಿ ಸಂಗೀತಾ ಶೃಂಗೇರಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ, ಆರಾಧ್ಯ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ.
“ಶಿವಾಜಿ ಸುರತ್ಕಲ್-2′ ಒಂದು ಪತ್ತೆದಾರಿ ಸಿನಿಮಾ. ಹಾಗಂತ ಕೇವಲ ಅಷ್ಟಕ್ಕೇ ಸೀಮಿತವಾಗಿಲ್ಲ. ಸ್ಕ್ರಿಪ್ಟ್ ನಲ್ಲಿ ಸಾಕಷ್ಟು ಹೊಸ ಅಂಶಗಳನ್ನು ಸೇರಿಸಿದ್ದಾರಂತೆ.
ಈ ಬಗ್ಗೆ ಮಾತನಾಡುವ ನಿರ್ದೇಶಕರು, “ಶಿವಾಜಿ ಸುರತ್ಕಲ್ 2 ರೆಗ್ಯುಲರ್ ಸ್ಕ್ರಿಪ್ಟ್ ಅಲ್ಲ. ಇಲ್ಲಿ ಮನುಷ್ಯನ ಮನಸ್ಸಿನೊಳಗೆ ಏನಾಗುತ್ತದೆ, ಆತನ ಆಲೋಚನೆಗಳು … ಹೀಗೆ ಹಲವು ಅಂಶಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ನಾವು ಮೊದಲ ಭಾಗ ಬಿಡುಗಡೆಯಾ ದಾಗ ಥಿಯೇಟರ್ ಮಾಡಿದ್ದೆವು. ಆಗ ಅನೇಕರು, ಚಿತ್ರದ ಕೊನೆಯಲ್ಲಿ ರಮೇಶ್ ಹಾಗೂ ರಾಧಿಕಾ ಅವರ ಫೋಟೋ ತೋರಿಸಿದ್ದು ಯಾಕೆ ಹಾಗೂ ಸುರತ್ಕಲ್ಗೂ ಚಿತ್ರಕ್ಕೂ ಸಂಬಂಧವೇನು ಎಂದು ಕೇಳಿದ್ದರು. ಅವೆಲ್ಲದಕ್ಕೂ ಉತ್ತರ ಈ ಚಿತ್ರದಲ್ಲಿದೆ. ಇಲ್ಲಿ ಪತ್ತೆದಾರಿಯಾಗಿ ಕಥೆ ಮುಂದೆ ಸಾಗುವುದಿಲ್ಲ. ಶಿವಾಜಿಯ ಎಮೋಶನಲ್ ಜರ್ನಿ ಕೂಡಾ ಇಲ್ಲಿ ಸಾಗಿಬರಲಿದೆ’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ