ಶಿವಣ್ಣನ “ಯೂ ಆರ್​ ಮೈ ಪೊಲೀಸ್ ಬೇಬಿ’ ಹಾಡು ಬಂತು: Watch

Team Udayavani, May 15, 2019, 8:45 PM IST

ರವಿವರ್ಮ ನಿರ್ದೇಶನದ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ಅಭಿನಯದ “ರುಸ್ತುಂ’ ಚಿತ್ರದ ಪೋಸ್ಟರ್ ಹಾಗೂ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿ, ಸಿನಿರಸಿಕರಿಂದ ಒಳ್ಳೆಯ ಮೆಚ್ಚುಗೆ ಪಡೆದಿತ್ತು.

ಈ ನಡುವೆ ಚಿತ್ರತಂಡ ಚಿತ್ರದ ಮೊದಲ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಿದೆ. ಹೌದು! “ಯೂ ಆರ್​ ಮೈ ಪೊಲೀಸ್ ಬೇಬಿ’ ಎಂಬ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದ್ದು, ಹಾಡಿನಲ್ಲಿ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಜೊತೆಯಾಗಿ ಸೆಂಚುರಿ ಸ್ಟಾರ್ ಶಿವಣ್ಣ, ವಯಸ್ಸು 50 ದಾಟಿದರೂ ಯುವಕರೂ ನಾಚುವಂತೆ ಸ್ಟೆಪ್ ಹಾಕಿ ಅಭಿಮಾನಿಗಳು ಕುಣಿದು ಕುಪ್ಪಳಿಸುವಂತೆ ಕುಣಿದಿದ್ದಾರೆ.

ಅಲ್ಲದೇ ಕಣ್ಣಲ್ಲಿ ಕನ್ನಡಕ, ರಂಗು ರಂಗಿನ ಡ್ರೆಸ್, ಅದ್ಧೂರಿ ಸೆಟ್‍ನಲ್ಲಿ ಶಿವಣ್ಣ ಹಾಗೂ ಶ್ರದ್ಧಾ ಮಿಂಚಿದ್ದಾರೆ. ಈ ಹಾಡಿಗೆ ಎ.ಪಿ ಅರ್ಜುನ್ ಸಾಹಿತ್ಯವಿದ್ದು, ರಘು ದೀಕ್ಷಿತ್ ಹಾಗೂ ಅಪೂರ್ವ ಶ್ರೀಧರ್ ಕಂಠದಲ್ಲಿ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಜೊತೆಗೆ ಇಮ್ರಾನ್ ಸರ್ದಾರಿಯ ನೃತ್ಯ ಸಂಯೋಜನೆಯಿದೆ.

ಸದ್ಯ ಈ ಹಾಡು ಭಾರೀ ಜನಮೆಚ್ಚುಗೆ ಗಳಿಸಿದ್ದು, 5 ಲಕ್ಷಕ್ಕೂ ಹೆಚ್ಚು ಸಿನಿರಸಿಕರು ವೀಕ್ಷಿಸುವ ಮೂಲಕ ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿದೆ. ಇನ್ನು ಚಿತ್ರದಲ್ಲಿ ಶಿವಣ್ಣ ರಗಡ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ವಿವೇಕ್ ಒಬೇರಾಯ್, ಮಯೂರಿ, ಶಿವರಾಜ್ ಕೆ. ಆರ್ ಪೇಟೆ ಸೇರಿದಂತೆ ಬಹುತೇಕರು ನಟಿಸಿದ್ದಾರೆ. ಜೂನ್ 14 ರಂದು ಚಿತ್ರವು ಬಿಡುಗಡೆಯಾಗಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ