ಶಿವಣ್ಣ ಲಾಂಗ್ ಪಾಠ: ಯುವನಟ ಶ್ರೇಯಸ್ ಖುಷ್
Team Udayavani, Aug 28, 2021, 3:06 PM IST
ಸಿನಿಮಾಗಳಲ್ಲಿ ಶಿವಣ್ಣಕೈ ಲಾಂಗ್ ಹಿಡಿದರೆಂದರೆ ಅಭಿಮಾನಿಗಳ ಕ್ರೇಜ್ ಹೆಚ್ಚುತ್ತದೆ, ಮಾಸ್ ಪ್ರಿಯರ ಜೋಶ್ ಮುಗಿಲುಮುಟ್ಟುತ್ತದೆ. ಅದಕ್ಕೆ ಕಾರಣ ಶಿವಣ್ಣ ಅವರ ಸ್ಟೈಲ್. ಕನ್ನಡ ಚಿತ್ರರಂಗದಲ್ಲಿ ಸ್ಟೈಲಿಶ್ ಆಗಿ ಲಾಂಗ್ ಹಿಡಿಯುವ ಮತ್ತು ಲಾಂಗ್ ತುಂಬಾ ಚೆನ್ನಾಗಿ ಸೂಟ್ ಆಗುವ ಹೀರೋ ಎಂದರೆ ಅದು ಶಿವರಾಜ್‌ಕುಮಾರ್ ಎಂಬ ಮಾತಿದೆ.
ಆದರೆ, ಇತ್ತೀಚೆಗೆ ಶಿವಣ್ಣ “ಲಾಂಗ್’ ಸ್ಟೋರಿಗಳಿಂದ ದೂರ ಉಳಿದಿದ್ದಾರೆ. ಇತ್ತೀಚೆಗೆ ಶಿವಣ್ಣ ಲಾಂಗ್ ಹಿಡಿಯೋದು ಹೇಗೆ ಎಂಬುದನ್ನು ನವನಟನೊಬ್ಬನಿಗೆ ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಾಯಕರಾಗಿ ನಟಿಸುತ್ತಿರುವ “ರಾಣ’ ಚಿತ್ರದ ಶೂಟಿಂಗ್ ಸೆಟ್‌ಗೆ ಭೇಟಿ ನೀಡಿದ್ದ ಶಿವಣ್ಣ, ನಾಯಕ ಶ್ರೇಯಸ್‌ಗೆ ಲಾಂಗ್ ಹಿಡಿಯೋದನ್ನು ಹೇಳಿಕೊಟ್ಟಿದ್ದಾರೆ. ಇದರಿಂದ ಶ್ರೇಯಸ್ ಖುಷಿಯಾಗಿದ್ದಾರೆ.
ಇದನ್ನೂ ಓದಿ:ಕರಿಯನ ಲವ್‌ಸ್ಟೋರಿ!
ಸಾಂಗ್ ರೆಕಾರ್ಡಿಂಗ್: ಶಿವರಾಜ್ ಕುಮಾರ್ ಅವರ 125ನೇ ಚಿತ್ರ ಅವರದ್ದೇ ಬ್ಯಾನರ್ ಆದ ಗೀತಾ ಪಿಕ್ಚರ್ನಲ್ಲಿ ತಯಾರಾಗುತ್ತಿದೆ. ಈಗ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಆರಂಭವಾಗಿದ್ದು, ಇತ್ತೀಚಗೆ ಅರ್ಜುನ್ ಜನ್ಯಾ ಸ್ಟುಡಿಯೋ ದಲ್ಲಿ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಹರ್ಷ ಈ ಚಿತ್ರದ ನಿರ್ದೇಶಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಮೃತಪಾಲ್ ಗಾಗಿ ಶೋಧ; ಐದು ಸಹಚರರರ ವಿರುದ್ಧ NSA ; ಐಎಸ್‌ಐ ಪಾತ್ರ?
ಏನು ಹೇಳಿದರೂ ನಿನದೇ ಸರಿ …ಸಂಕಟ ಕಾಲದಲ್ಲಿ ಮತದಾರನೇ ವೆಂಕಟರಮಣ !
ಮೂಡಿಗೆರೆ JDS ನಲ್ಲಿ ಭಿನ್ನಮತ: ಬಿ.ಬಿ ನಿಂಗಯ್ಯಗೆ ಟಿಕೆಟ್ ನೀಡಲು ಸ್ವಪಕ್ಷದಲ್ಲೇ ವಿರೋಧ
ಮಂಗಳೂರು: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ; ಆರೋಪಿ ಬಂಧನ
ರಾಜ್ಯ ಸರಕಾರಕ್ಕೆ ಇನ್ನು 35 ದಿನ ಮಾತ್ರ ಆಯಸ್ಸು: ಸರಕಾರದ ವಿರುದ್ಧ ಯು.ಟಿ.ಖಾದರ್ ಟೀಕೆ