ಶ್ರೇಯಸ್ ಭರ್ಜರಿ ಸಾಹಸ
Team Udayavani, Aug 28, 2018, 12:08 PM IST
ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಾಯಕರಾಗಿರುವ “ಪಡ್ಡೆಹುಲಿ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯ ದಾವಣಗೆರೆ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದ್ದು, ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ನಾಯಕ ಶ್ರೇಯಸ್ ಯಾವುದೇ ಡ್ಯೂಪ್ ಇಲ್ಲದೇ ಸಾಹಸ ದೃಶ್ಯಗಳಲ್ಲಿ ಭಾಗವಹಿಸಿ, ಮೊದಲ ಚಿತ್ರದಲ್ಲೇ ತಮ್ಮ ಆ್ಯಕ್ಷನ್ ಪ್ರೀತಿ ತೋರಿಸಿದ್ದಾರೆ.
ದಾವಣಗೆರೆಯ ಜಿಎಂಐಟಿ ಕಾಲೇಜಿನಲ್ಲಿ ನಡೆದ ಸಿನಿಮಾದ ದೃಶ್ಯವೊಂದಕ್ಕಾಗಿ ಶ್ರೇಯಸ್ ತಮ್ಮ ಮೈಗೆ ಅನೇಕ ಟ್ಯೂಬ್‌ಲೈಟ್‌ಗಳಿಂದ ಹೊಡೆಸಿಕೊಂಡಿದ್ದು, ಇದರಿಂದ ಅವರ ಕೈ ಹಾಗೂ ಭುಜಕ್ಕೆ ಗಾಯಗಳಾಗಿವೆ. ದೃಶ್ಯ ನೈಜವಾಗಿ ಮೂಡಿಬರಬೇಕೆಂಬ ಕಾರಣಕ್ಕೆ ಮೊದಲ ಚಿತ್ರದಲ್ಲೇ ಶ್ರೇಯಸ್ ಯಾವುದೇ ಡ್ಯೂಪ್ ಇಲ್ಲದೇ ನಟಿಸಿದ್ದಾರೆ.
“ಪಡ್ಡೆಹುಲಿ’ ಚಿತ್ರವನ್ನು ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿದ್ದು, ಗುರು ದೇಶಪಾಂಡೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ರವಿಚಂದ್ರನ್ ಕೂಡಾ ನಟಿಸಿದ್ದಾರೆ. ಚಿತ್ರದಲ್ಲಿ ಶ್ರೇಯಶ್‌ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani
ಹೊಸ ಸೇರ್ಪಡೆ
ಮಣಿಪಾಲ: ಅಪಾರ್ಟ್ ಮೆಂಟ್ ನಲ್ಲಿ ಲಕ್ಷಾಂತರ ರೂ. ಸೊತ್ತುಗಳ ಕಳವು
ಷೇರುಗಳ ಮೌಲ್ಯ ಕುಸಿತ; ಎಸ್ ಬಿಐ, ಪಿಎನ್ ಬಿ ಬ್ಯಾಂಕ್ ಗಳಿಂದ ಅದಾನಿ ಪಡೆದ ಸಾಲದ ಮೊತ್ತ ಎಷ್ಟು ಗೊತ್ತಾ?
ಮಾರಿಗುಡ್ಡದಲ್ಲಿ ಗಡ್ಡಧಾರಿಗಳ ಅಬ್ಬರ
ಮಂಗಳೂರು : ಜ್ಯುವೆಲ್ಲರಿ ಶಾಪ್ ನಲ್ಲಿ ಸಿಬಂದಿಗೆ ಚೂರಿ ಇರಿತ
ಬಸವ ಕಲ್ಯಾಣದಲ್ಲಿ ಸಿದ್ದರಾಮಯ್ಯ,ಕೋಲಾರದಲ್ಲಿ ಡಿಕೆಶಿ: ಪ್ರಜಾಧ್ವನಿ ಯಾತ್ರೆಗೆ ಚಾಲನೆ