ಕನ್ನಡದ ಮತ್ತೊಂದು ಗೀತೆಗೆ ಧ್ವನಿಯಾದ ಸಿದ್ ಶ್ರೀರಾಮ್


Team Udayavani, Feb 2, 2023, 4:31 PM IST

sid sriram sung for mancha movie

ಇ.ವಿ. ಗಣೇಶ್‌ ಬಾಬು ನಿರ್ದೇಶನದ “ಮಂಚ’ ಚಿತ್ರದ “ದೇಗುಲದಿ…’ ಎಂಬ ಲಿರಿಕಲ್‌ ಹಾಡು ಇದೀಗ ಯೂ-ಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. “ಜಗವೇ ನೀನು’ ಖ್ಯಾತಿಯ ಸಿದ್‌ ಶ್ರೀರಾಮ್‌ ಈ ಹಾಡಿಗೆ ಧ್ವನಿಯಾಗಿದ್ದು, “ಪುಷ್ಪ’ ಚಿತ್ರದ ಜನಪ್ರಿಯ ಗೀತೆ “ಶ್ರೀವಳ್ಳಿ’ ಹಾಡಿಗೆ ಕನ್ನಡ ಸಾಹಿತ್ಯ ಬರೆದಿದ್ದ ವರದರಾಜ ಚಿಕ್ಕಬಳ್ಳಾಪುರ, ಈ ಹಾಡಿಗೂ ಸಾಹಿತ್ಯ ರಚಿಸಿದ್ದಾರೆ.

“ಮಂಚ’ ಎಂಬ ಹೆಸರೇ ಹೇಳುವಂತೆ, ಈ ಚಿತ್ರವು ಒಂದು ಪ್ರತಿಷ್ಠಿತ ಕುಟುಂಬದ ಮೂರು ತಲೆಮಾರಿನವರು ಉಪಯೋಗಿಸಿದ ಒಂದು ಮಂಚದ ಸುತ್ತ ಸಾಗುತ್ತದೆ. ಜನ ಹೇಗೆ ತಮ್ಮ ಸಂಪ್ರದಾಯ ಮತ್ತು ಗುರುತುಗಳನ್ನು ಕ್ರಮೇಣ ಮರೆಯುತ್ತಿದ್ದಾರೆ ಎಂದು ಹೇಳುವ ಪ್ರಯತ್ನ ಮಾಡಿರುವ ಈ ಚಿತ್ರವು ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಗೊಂಡು, ಕೆಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

“ಮಂಚ’ ಒಂದು ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು ತಮಿಳಿನಲ್ಲಿ ನಿರ್ಮಾಣಗೊಂಡು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಿಗೆ ಡಬ್‌ ಆಗಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಸದ್ಯ ಬಿಡುಗಡೆಯಾಗಿರುವ ಈ ಹಾಡನ್ನು ನಾಲ್ಕೂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಹಿಂದೆ “ಅಮೃತವರ್ಷಿಣಿ’ ಚಿತ್ರದ ಹಾಡುಗಳನ್ನು ಸಂಯೋಜಿಸಿದ್ದ ಸಂಗೀತ ನಿರ್ದೇಶಕ ದೇವ ಅವರ ಪುತ್ರ ಶ್ರೀಕಾಂತ್‌ ದೇವ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇ.ವಿ. ಗಣೇಶ್‌ ಬಾಬು ಈ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುವುದರ ಜತೆಗೆ ನಾಯಕನಾಗಿಯೂ ಕಾಣಿಸಿಕೊಂದ್ದಾರೆ.

ನಾಯಕಿಯಾಗಿ ಸೃಷ್ಟಿ ದಂಗೆ ಅಭಿನಯಿಸಿದ್ದು, ಮಿಕ್ಕಂತೆ ವಿದಾರ್ಥ್ (ಅತಿಥಿ ಪಾತ್ರ), ಮಾಸ್ಟರ್‌ ನಿಧೀಶ್‌, ಗೀತಾ ಕೈಲಾಸಂ, ಇಂದಿರಾ ಸೌಂರ್ದ ರಾಜನ್‌, ಸಂಪತ್‌ ರಾಮ್, ಸಮ್ಮಾಲರ್‌ ಅಣ್ಣಂ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಟಾಪ್ ನ್ಯೂಸ್

KAGODU

ಅಳಿಯನೇ ಪಕ್ಷದ ಅಭ್ಯರ್ಥಿಯಾಗಿರುವಾಗ ಭಿನ್ನಮತದ ಮಾತೆಲ್ಲಿ: ಕಾಗೋಡು ಪ್ರಶ್ನೆ

anjanadri

ಕಿಷ್ಕಿಂಧಾ ಅಂಜನಾದ್ರಿ ಹುಂಡಿ ಎಣಿಕೆ: 10.65 ಲಕ್ಷ ರೂ.ಸಂಗ್ರಹ

1-sadsadadas

ಆಮೆ ಮತ್ತು ಮೊಲದ ಓಟ : ಅತೀ ಉತ್ಸಾಹವೇ ಈತನಿಗೆ ಮುಳುವಾಯ್ತು!!

KAGERI BANNER

ಸಾಹೇಬ್ರು ಹೋದ ಮೇಲೆ ಬಂತು ಬ್ಯಾನರ್!

mahes

ಸಂವಿಧಾನ ಶಿಲ್ಪಿಗೆ ಕಾಂಗ್ರೆಸ್‌ನಿಂದ ಅಪಮಾನ: ಶಾಸಕ ಎನ್.ಮಹೇಶ್

ಚರಂಡಿ ಮೂಲಕ ಸುರಂಗ ತೋಡಿ…ಲಕ್ಷಾಂತರ ರೂಪಾಯಿ ಚಿನ್ನಾಭರಣ ದರೋಡೆ! ಪ್ರತಿಭಟನೆ

ಚರಂಡಿ ಮೂಲಕ ಸುರಂಗ ತೋಡಿ…ಲಕ್ಷಾಂತರ ರೂಪಾಯಿ ಚಿನ್ನಾಭರಣ ದರೋಡೆ! ಪ್ರತಿಭಟನೆ

tdy-20

ಕೋಲಾರ: ಸಿದ್ದು ಸ್ಪರ್ಧೆ ಘೋಷಣೆಗೆ ಏ.5ರ ಗಡುವು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-13

ಯಲಾಕುನ್ನಿಗೆ ಮುಹೂರ್ತ ಸಂಭ್ರಮ

tdy-12

ಹಾರರ್‌ ʼತಾಯ್ತʼದಲ್ಲಿ ಹರ್ಷಿಕಾ ನಟನೆ

ಶಿವಾಜಿ ಸುರತ್ಕಲ್‌ 2 ಟ್ರೇಲರ್‌ ಮಾ.31ಕ್ಕೆ ರಿಲೀಸ್

ಶಿವಾಜಿ ಸುರತ್ಕಲ್‌ 2 ಟ್ರೇಲರ್‌ ಮಾ.31ಕ್ಕೆ ರಿಲೀಸ್

part 3 trend in sandalwood

ಪಾರ್ಟ್‌-2 ಆಯ್ತು ಈಗ ಪಾರ್ಟ್‌-3 ಟ್ರೆಂಡ್

Ravichandran gave green signal for new movie

ಹೊಸ ಸಿನಿಮಾಗೆ ರವಿಚಂದ್ರನ್‌ ಗ್ರೀನ್‌ ಸಿಗ್ನಲ್‌

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

KAGODU

ಅಳಿಯನೇ ಪಕ್ಷದ ಅಭ್ಯರ್ಥಿಯಾಗಿರುವಾಗ ಭಿನ್ನಮತದ ಮಾತೆಲ್ಲಿ: ಕಾಗೋಡು ಪ್ರಶ್ನೆ

anjanadri

ಕಿಷ್ಕಿಂಧಾ ಅಂಜನಾದ್ರಿ ಹುಂಡಿ ಎಣಿಕೆ: 10.65 ಲಕ್ಷ ರೂ.ಸಂಗ್ರಹ

1-sadsadadas

ಆಮೆ ಮತ್ತು ಮೊಲದ ಓಟ : ಅತೀ ಉತ್ಸಾಹವೇ ಈತನಿಗೆ ಮುಳುವಾಯ್ತು!!

tdy-21

ರಾಮನಾಥಪುರದಲ್ಲಿ ಮತ್ಸ್ಯ ಸಂಕುಲಕ್ಕೆ ಕಂಟಕ

KAGERI BANNER

ಸಾಹೇಬ್ರು ಹೋದ ಮೇಲೆ ಬಂತು ಬ್ಯಾನರ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.