
ದೈವ ಸಂಘರ್ಷದ ಸುತ್ತ ‘ಆರ’; ಹೊಸಬರ ಸ್ಪಿರಿಚ್ಯುಯಲ್ ಡ್ರಾಮಾ
Team Udayavani, Mar 27, 2023, 2:35 PM IST

ಹೊಸಬರೇ ಸೇರಿಕೊಂಡು ಮಾಡಿರುವ “ಆರ’ ಸಿನಿಮಾದ ಟೀಸರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ದೈವ ಹಾಗೂ ದುಷ್ಟ ಶಕ್ತಿಯ ಸಂಘರ್ಷದ ಕಥಾಹಂದರ ಒಳಗೊಂಡ ಸ್ಪಿರಿಚ್ಯುಯಲ್ ಡ್ರಾಮಾ ಮತ್ತು ಥ್ರಿಲ್ಲರ್ ಜಾನರ್ ಸಿನಿಮಾ “ಆರ’.
ಅಶ್ವಿನ್ ವಿಜಯ ಮೂರ್ತಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸಂಪೂರ್ಣ ಹೊಸ ಪ್ರತಿಭೆಗಳಿಂದ ಕೂಡಿದೆ. ರೋಹಿತ್ ಹಾಗೂ ದೀಪಿಕಾ ಆರಾಧ್ಯ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಚಿತ್ರದ ನಾಯಕ ನಟ ರೋಹಿತ್ ಬರೆದಿದ್ದು. ಆನಂದ್ ನೀನಾಸಂ ಸತ್ಯ ರಾಜ್ ನಿಖೀಲ್ ಶ್ರೀಪಾದ್ ಪ್ರತೀಕ್ ಲೋಕೇಶ್ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
“ಆರ’ ಎಂಬ ಹುಡುಗನ ಜರ್ನಿ ಸುತ್ತ ಹೆಣೆದ ಕಥೆಯಿದು. ವಿಧಿಯ ಜೊತೆ ಸೇರಿ ಸಂರಕ್ಷಣೆಗಾಗಿ ಹೋರಾಡುವ ಹುಡುಗನ ಕಹಾನಿ ಚಿತ್ರದಲ್ಲಿದೆ. ಚಿತ್ರದ ಬಹುತೇಕ ಚಿತ್ರೀಕರಣ ಉಡುಪಿಯಲ್ಲಿ ಆಗಿದ್ದು. ಚಿತ್ರವು ಉಡುಪಿಯ ಕನ್ನಡ ಹೊಂದಿದೆ. ವಾಸ್ತವ ಅನುಗುಣವಾಗಿ ದೈವಿಕ ಅಂಶ ಗಳ ಕಥೆ ಬೇರೆ ಬೇರೆ ಆಯಾಮಗಳನ್ನು ಪಡೆದು ಕೊಳ್ಳುತ್ತದೆ ಎಆರ್ ಫಿಲಂಸ್ ಬ್ಯಾನರ್‌ನಡಿ ಸುಜಾತ ಚಡಗ, ಚಂದ್ರಶೇಖರ್ ಸಿ ಜಂಬಿಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಯುವ ಪ್ರತಿಭೆ ಶ್ರೀಹರಿ ಛಾಯಾಗ್ರಾಹಣ, ಗಿರೀಶ್ ಹೊತ್ತೂರ್ ಸಂಗೀತ ನಿರ್ದೇಶನ, ಮಾದೇಶ್ ಸಂಕಲನ, ದೇವಿ ಪ್ರಕಾಶ್ ಕಲಾ ನಿರ್ದೇಶನ “ಆರ’ ಚಿತ್ರಕ್ಕಿದೆ. ಜೂನ್ ನಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
