ಈಗ ಶ್ರೀಲೀಲಾ ಟ್ರೋಲ್ ಸರದಿ! ಕಿಸ್ ಹುಡುಗಿಯ ಫೋಟೋಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿ
Team Udayavani, Jun 25, 2023, 12:22 PM IST
ಕನ್ನಡ ಚಿತ್ರರಂಗಕ್ಕೆ “ಕಿಸ್’ ಸಿನಿಮಾದ ಮೂಲಕ ಪರಿಚಯವಾದ ನಟಿ ಶ್ರೀಲೀಲಾ, ಈಗ ಕನ್ನಡ ಚಿತ್ರರಂಗಕ್ಕಿಂತ ತೆಲುಗು ಚಿತ್ರರಂಗದಲ್ಲೇ ಬಹು ಬೇಡಿಕೆ ಪಡೆದುಕೊಂಡಿರುವ ನಟಿ. ಸದ್ಯ ಟಾಲಿವುಡ್ನಲ್ಲಿ ಹೀರೋಯಿನ್ಸ್ ಆಗಿ ಮಿಂಚುತ್ತಿರುವ ಕರ್ನಾಟಕ ಮೂಲದ ರಶ್ಮಿಕಾ ಮಂದಣ್ಣ, ಕೃತಿ ಶೆಟ್ಟಿ, ಪೂಜಾ ಹೆಗ್ಡೆ ಹೀಗೆ ಸಾಲು ಸಾಲು ಹೀರೋಯಿನ್ ಗಳನ್ನು ಶ್ರೀಲೀಲಾ ಸದ್ದಿಲ್ಲದೆ ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ಸಿನಿಮಾಗಳಿಗೆ ನಾಯಕಿಯಾಗುವ ಮೂಲಕ ಶ್ರೀಲೀಲಾ ಟಾಲಿವುಡ್ನಲ್ಲಿ ಭದ್ರ ನೆಲೆ ಕಂಡುಕೊಳ್ಳುತ್ತಿದ್ದಾರೆ.
ಒಂದೆಡೆ ಸಿನಿಮಾ ಮೂಲಕ ಜನಪ್ರಿಯತೆ ಹೆಚ್ಚಾಗುತ್ತಿರುವಂತೆಯೇ, ಮತ್ತೂಂದೆಡೆ ಶ್ರೀಲೀಲಾ ಟ್ರೋಲ್ಗೆ ಒಳಗಾಗುತ್ತಿರುವುದೂ ಹೆಚ್ಚಾಗುತ್ತಿದೆ. ಕಳೆದ ಕೆಲ ತಿಂಗಳಿನಿಂದ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಬೇರೆ ಬೇರೆ ವಿಷಯಗಳಿಗೆ ಟ್ರೋಲ್ ಆಗುತ್ತಿರುವ ಶ್ರೀಲೀಲಾ, ಇತ್ತೀಚೆಗೆ ತಾವು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಫೋಟೋ ಒಂದಕ್ಕೆ ಮತ್ತೆ ಟ್ರೋಲ್ ಆಗುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಶ್ರೀಲೀಲಾ ಪ್ಯಾಂಟ್ ಇಲ್ಲದೇ ನೈಟ್ ಡ್ರೆಸ್ನಲ್ಲಿರುವ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದರು. ನೈಟ್ ಡ್ರೆಸ್ ಧರಿಸಿ, ಕ್ಯಾಮೆರಾ ಹಿಡಿದು ಪೋಸ್ ಕೊಡುತ್ತಿರುವ ಶ್ರೀಲೀಲಾ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಇದೀಗ ಈ ಫೋಟೋಗಳೇ ಸಾಕಷ್ಟು ಟ್ರೋಲ್ ಆಗುತ್ತಿವೆ.
ಅಂದಹಾಗೆ, ಶ್ರೀಲೀಲಾ ನೈಟ್ ಡ್ರೆಸ್ನಲ್ಲಿ ಪ್ಯಾಂಟ್ ಧರಿಸದೇ ಇರುವುದೇ ಅನೇಕರ ಅಸಮಾಧಾನಕ್ಕೆ ಕಾರಣವಾದಂತಿದೆ! ಸದ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿರುವ ಶ್ರೀಲೀಲಾ ಫೋಟೋಗಳ ಬಗ್ಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಕೇಳಿಬರುತ್ತಿದೆ. ಅನೇಕರು ಪ್ಯಾಂಟ್ ಎಲ್ಲಿ ತಾಯಿ? ಅಂತ ಕೇಳಿದ್ರೆ, ಇನ್ನು ಕೆಲವರು ಕರ್ನಾಟಕ ಮರೆಯಬೇಡಿ, ರಶ್ಮಿಕಾ ಮಂದಣ್ಣ ಥರ ಆಗಬೇಡಿ ಅಂತ ಕಾಮೆಂಟ್ಸ್ ಮಾಡುತ್ತಿದ್ದಾರೆ. ಆದರೆ ಇಷ್ಟೊಂದು ಟ್ರೋಲ್, ಕಾಮೆಂಟ್ಸ್ ಆಗುತ್ತಿದ್ದರೂ, ಶ್ರೀಲೀಲಾ ಮಾತ್ರ ಇದಾವುದಕ್ಕೂ ತಲೆಕೆಡಿಸಿಕೊಳ್ಳದಂತೆ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…