ಅಲ್ಲಮ ಕುರಿತು ಮತ್ತೂಂದು ಚಿತ್ರ
Team Udayavani, Dec 23, 2020, 1:41 PM IST
ಅಲ್ಲಮಕುರಿತು ಮತ್ತೂಂದು ಚಿತ್ರ ಮೂರು ವರ್ಷದ ಹಿಂದಷ್ಟೇ ಹಿರಿಯ ನಿರ್ದೇಶಕ ನಾಗಭರಣ ನಿರ್ದೇಶನದಲ್ಲಿ”ಅಲ್ಲಮ’ ಚಿತ್ರ ತೆರೆಗೆ ಬಂದಿದ್ದು, ನಿಮಗೆ ಗೊತ್ತಿರಬಹುದು. ಈಗ ಅಲ್ಲಮ ಪ್ರಭು ಕುರಿತು ಮತ್ತೂಂದು ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ.
ಡಿ.ಕೆ ಶಿವರಾಜ್ ನಿರ್ದೇಶನದಲ್ಲಿ “ಶ್ರೀ ಅಲ್ಲಮಪ್ರಭು’ ಚಿತ್ರ ಇತ್ತೀಚೆಗೆ ಸೆಟ್ಟೇರಿದೆ. “ಅಮರಜ್ಯೋತಿ ಪಿಕ್ಚರ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮಾಧವಾನಂದ ಕಥೆ, ಚಿತ್ರಕಥೆ ಬರೆದಿದ್ದಾರೆ. “ಇದು ಕಾಳಗದ ಕಥೆಯಲ್ಲ, ಪ್ರೇಮದ ವ್ಯಥೆಯಲ್ಲ, ದಾಯಾದಿಗಳಮತ್ಸರವಲ್ಲ’ ಎಂದು ಚಿತ್ರದ ಪೋಸ್ಟರ್‌ದಲ್ಲಿ ಹೇಳಿಕೊಂಡಿದೆ ಚಿತ್ರತಂಡ.
ಚಿತ್ರದ ಶೀರ್ಷಿಕೆಗೆ “ಶೂನ್ಯ ಸಿಂಹಾಸನಾಧೀಶ್ವರ’ ಎಂದು ಅಡಿಬರಹವಿದೆ. ವ್ಯೋಮಕಾಯ ಸಿದ್ದ ಶ್ರೀ ಅಲ್ಲಮಪ್ರಭುರವರ ಬಾಲ್ಯ, ಯೌವ್ವನ, ಮುಂದೆಕಲ್ಯಾಣಕ್ಕೆ ಹೋಗಿ, ಕಲ್ಯಾಣ ಕ್ರಾಂತಿ ಶುರುವಾಗುವ ತನಕ ವಿವಿಧ ಕಾಲಘಟ್ಟವನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ ಎಂದಿದೆ ಚಿತ್ರತಂಡ.
ಇದನ್ನೂ ಓದಿ : ಶಶಾಂಕ್ ಕಥೆಯಲ್ಲಿ ಅಜೇಯ್ ನಟನೆ
“ಎನ್‌ಕೌಂಟರ್ ದಯಾನಾಯಕ್’ ಚಿತ್ರದ ಖ್ಯಾತಿ ಸಚ್ಚಿನ್ ಸುವರ್ಣ ಈ ಚಿತ್ರದಲ್ಲಿ ಅಲ್ಲಮ ಪ್ರಭು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಾಮಕೃಷ್ಣ, ಮೂಗು ಸುರೇಶ್, ಅರವಿಂದ್ ರಾವ್ ಕೇಸರ್‌ಕರ್, ಅರವಿಂದ ಜತ್ತಿ ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಹಾಡುಗಳ ಬದಲಾಗಿ ಅಲ್ಲಮರ ಹದಿನೈದು, ಬಸವಣ್ಣನವರ ಮೂರು ವಚನಗಳನ್ನು ಬಳಸಿಕೊಳ್ಳಲಾಗುತ್ತಿದೆಯಂತೆ.
ಚಿತ್ರಕ್ಕೆ ಕುಮಾರ್ ಈಶ್ವರ್ ಸಂಗೀತ, ಮಂಜುನಾಥ್.ಆರ್ ಛಾಯಾಗ್ರಹಣ, ಬಿ. ಎಸ್ ಕೆಂಪರಾಜು ಸಂಕಲನ, ರಾಜಾರವಿ ಸಂಭಾಷಣೆ ಇದೆ. ಬನವಾಸಿ, ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಚಿತ್ರತಂಡದ ಯೋಜನೆಯಂತೆ ನಡೆದರೆ, ಮಾರ್ಚ್ ವೇಳೆಗೆ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.