ವಿಷ್ಣುವರ್ಧನ್ ವೀರಪ್ಪ ನಾಯಕ ಪಾತ್ರಕ್ಕೆ ಪುತ್ಥಳಿ ರೂಪ
Team Udayavani, Jan 13, 2022, 11:31 AM IST
ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ “ವೀರಪ್ಪನಾಯಕ’ ಸಿನಿಮಾವನ್ನು ಬಹುತೇಕರು ನೋಡಿರುತ್ತೀರಿ. ಈ ಸಿನಿಮಾದಲ್ಲಿ ವಿಷ್ಣುವರ್ಧನ್ ನಿರ್ವಹಿಸಿರುವ “ವೀರಪ್ಪನಾಯಕ’ ಪಾತ್ರ ಅನೇಕರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದಿದೆ. ಡಾ.ವಿಷ್ಣುವರ್ಧನ್ ಅವರ ಈ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಸಹ ಒಲಿದು ಬಂದಿತ್ತು. ಭಾರತ ಕ್ರಿಕೆಟ್ ತಂಡದ ವಿದೇಶ ಪ್ರವಾಸಕ್ಕೂ ಮುನ್ನ ಅಂದಿನ ಪ್ರಧಾನಿ ವಾಜಪೇಯಿ ಅವರು ನಮ್ಮ ಕ್ರಿಕೆಟಿಗರಿಗೆ ಈ ಸಿನಿಮಾ ತೋರಿಸಿ ಅವರಲ್ಲಿ ದೇಶಪ್ರೇಮದ ಉತ್ಸಾಹವನ್ನು ತುಂಬಿ ಕಳುಹಿಸಿದ್ದನ್ನು ಕನ್ನಡಿಗರು ಮರೆಯುವಂತಿಲ್ಲ.
ದೇಶಪ್ರೇಮವನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿದ ಸಿನಿಮಾ ಇಂದಿಗೂ ಸಿನಿಪ್ರಿಯರಿಗೆ ಅಚ್ಚುಮೆಚ್ಚು. ಇದೀಗ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ “ವೀರಪ್ಪನಾಯಕ’ ಪಾತ್ರವನ್ನು ಅವರ ಅಭಿಮಾನಿಗಳು ಪುತ್ಥಳಿ ರೂಪದಲ್ಲಿ ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ. ವರ್ಣಸಿಂಧು ಎಂಬ ಶಿಲ್ಪಿಯು ಈ ಪುತ್ಥಳಿಗೆ ಜೀವ ತುಂಬಿದ್ದಾ. ಈ “ವೀರಪ್ಪನಾಯಕ’ ಪಾತ್ರವನ್ನು ಪುತ್ಥಳಿ ರೂಪದಲ್ಲಿಯೂ ಜೀವಂತವಾಗಿಡುವ ಪ್ರಯತ್ನಕ್ಕೆ ಡಾ.ವಿಷ್ಣು ಸೇನಾ ಸಮಿತಿ ಅಗತ್ಯ ಹಣಕಾಸು ನೆರವು ನೀಡಿದೆ.
ಅಂದಹಾಗೆ, ಈಗಾಗಲೇ ಸಿದ್ಧವಾಗಿರುವ ವಿಷ್ಣುವರ್ಧನ್ ಅವರ “ವೀರಪ್ಪನಾಯಕ’ ಪಾತ್ರದ ಪುತ್ಥಳಿ, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬ್ರಹ್ಮಸಂದ್ರದಲ್ಲಿ ಇದೇ ಜ. 19ರಂದು ಬೆಳಿಗ್ಗೆ ಅನಾವರಣವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಾ.ನಗರದಲ್ಲಿ ʼಬೈರಾಗಿʼ ವೀಕ್ಷಿಸಿದ ಶಿವಣ್ಣ: ಚಿತ್ರ ಪ್ರದರ್ಶನ ಯಾತ್ರೆಗೆ ಅದ್ದೂರಿ ಸ್ವಾಗತ
ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು
ಸಾಯಿ ಪಲ್ಲವಿ ‘ಗಾರ್ಗಿ’ಗೆ ಸಾಥ್ ನೀಡಿದ ರಕ್ಷಿತ್ ಶೆಟ್ಟಿ
ಚಾರ್ಲಿ ಕಲೆಕ್ಷನ್ 150 ಕೋಟಿ!: ಲಾಭದಲ್ಲಿ ಶ್ವಾನಗಳಿಗೂ ಪಾಲು
ಕಿಚ್ಚ ಸುದೀಪ್ ವಿರುದ್ಧ ಅವಹೇಳನಕಾರಿ ವಿಡಿಯೋ: ನಿರ್ದೇಶಕ ನಂದಕಿಶೋರ್ ಆಕ್ರೋಶ