ಸೂರಿ ನಿರ್ದೇಶನದಲ್ಲಿ ಸುದೀಪ್‌ ಸಿನಿಮಾ

ಕೆ.ಪಿ.ಶ್ರೀಕಾಂತ್‌ ನಿರ್ಮಾಣ

Team Udayavani, Apr 17, 2019, 3:00 AM IST

ನಟ ಸುದೀಪ್‌ ಕನ್ನಡದ “ಕೋಟಿಗೊಬ್ಬ-3′ ಹಾಗೂ ಹಿಂದಿ ಚಿತ್ರ “ದಭಾಂಗ್‌-3’ನಲ್ಲಿ ಬಿಝಿ. ಇತ್ತ ಕಡೆ ನಿರ್ದೇಶಕ ಸೂರಿ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರೀಕರಣದಲ್ಲಿದ್ದಾರೆ. ಈಗ ಈ ಇಬ್ಬರ ಕುರಿತಾದ ಸುದ್ದಿಯೊಂದು ಗಾಂಧಿನಗರದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಅದು ಈ ಇಬ್ಬರು ಒಟ್ಟಾಗಿ ಸಿನಿಮಾ ಮಾಡುತ್ತಿರೋದು.

ಹೌದು, ಕಿಚ್ಚ ಸುದೀಪ್‌ ಹಾಗೂ ನಿರ್ದೇಶಕ ಸೂರಿ ಜೊತೆಯಾಗಿ ಸಿನಿಮಾ ಮಾಡಲಿದ್ದಾರಂತೆ. ಈ ಮೂಲಕ ಮತ್ತೂಂದು ದೊಡ್ಡ ನಿರೀಕ್ಷೆಗೆ ಕಾರಣರಾಗುತ್ತಿದ್ದಾರೆ. ಸುದೀಪ್‌ ಹಾಗೂ ಸೂರಿ ಈ ಇಬ್ಬರೂ ತಮ್ಮದೇ ಶೈಲಿ ಹಾಗೂ ಕೆಲಸದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ಹಾಗೂ ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿದವರು.

ಈಗ ಸಿನಿಮಾವೊಂದಕ್ಕಾಗಿ ಇಬ್ಬರು ಒಟ್ಟಾಗುತ್ತಿದ್ದು, ಸೂರಿ ನಿರ್ದೇಶನದ ಚಿತ್ರದಲ್ಲಿ ಸುದೀಪ್‌ ನಟಿಸಲಿದ್ದಾರೆ. ಸುದೀಪ್‌ ಅವರ ಮ್ಯಾನರೀಸಂ ಹಾಗೂ ಸೂರಿ ಶೈಲಿಗೆ ಹೊಂದುವಂತಹ ಸಿನಿಮಾ ಇದಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

ಎಲ್ಲಾ ಓಕೆ, ಹಾಗಾದರೆ ಈ ಸಿನಿಮಾವನ್ನು ನಿರ್ಮಿಸುತ್ತಿರುವವರು ಯಾರು ಎಂಬ ಪ್ರಶ್ನೆಗೆ ಉತ್ತರ, ಕೆ.ಪಿ.ಶ್ರೀಕಾಂತ್‌. ಈಗಾಗಲೇ ಸೂರಿ ಜೊತೆ “ಟಗರು’ ಚಿತ್ರ ಮಾಡಿದ ಶ್ರೀಕಾಂತ್‌, ಈಗ ಮತ್ತೂಂದು ಸಿನಿಮಾ ಮಾಡಲು ಮುಂದಾಗಿದ್ದಾರೆ.

ಸುದೀಪ್‌ ಹಾಗೂ ಸೂರಿ ಕಾಂಬಿನೇಶನ್‌ನ ಬಿಗ್‌ ಬಜೆಟ್‌ ಚಿತ್ರವನ್ನು ಕೆ.ಪಿ.ಶ್ರೀಕಾಂತ್‌ ನಿರ್ಮಿಸುತ್ತಿದ್ದಾರೆ. ಆರಂಭದಲ್ಲಿ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರಕ್ಕೆ ನಿರ್ಮಾಪಕರಾಗಿದ್ದ ಶ್ರೀಕಾಂತ್‌, “ನಾವಿಬ್ಬರು ದೊಡ್ಡ ಪ್ರಾಜೆಕ್ಟ್ವೊಂದನ್ನು ಮಾಡಲಿದ್ದೇವೆ’ ಎಂದಿದ್ದರು.

ಈಗ ಆ ದೊಡ್ಡ ಪ್ರಾಜೆಕ್ಟ್ ಸುದ್ದಿ ಹೊರಬಿದ್ದಿದೆ. ಹಾಗಾದರೆ ಸಿನಿಮಾ ಯಾವಾಗ ಎಂದು ನೀವು ಕೇಳಬಹುದು. ಸದ್ಯಕ್ಕೆ ಅದಕ್ಕೆ ಉತ್ತರವಿಲ್ಲ. ಸುದೀಪ್‌ ಹಾಗೂ ಸೂರಿ ತಮ್ಮ ಕಮಿಟ್‌ಮೆಂಟ್‌ಗಳನ್ನು ಮುಗಿಸಿಕೊಂಡ ನಂತರ ಈ ಸಿನಿಮಾ ಆರಂಭವಾಗಬಹುದು.


ಈ ವಿಭಾಗದಿಂದ ಇನ್ನಷ್ಟು

  • ಜಗ್ಗೇಶ್‌ ಅಭಿನಯದ "ಪ್ರೀಮಿಯರ್‌ ಪದ್ಮಿನಿ' ಚಿತ್ರಕ್ಕೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು ಗೊತ್ತೇ ಇದೆ. ಆ ಚಿತ್ರ ಈಗ 25ದಿನ ಪೂರೈಸಿ ಮುನ್ನುಗ್ಗುತ್ತಿದೆ....

  • ಶಿವರಾಜಕುಮಾರ್‌ ದೊಡ್ಡ ಗ್ಯಾಪ್‌ನ ಬಳಿಕ ಒಪ್ಪಿಕೊಂಡ ರೀಮೇಕ್‌ ಚಿತ್ರ "ಕವಚ'. ಈ ಚಿತ್ರದಲ್ಲಿ ಅಂಧನಾಗಿ ಕಾಣಿಸಿಕೊಂಡಿದ್ದಲ್ಲದೇ, ಪಾತ್ರಕ್ಕೆ ನ್ಯಾಯ ಒದಗಿಸಿದ್ದರು....

  • -ಕುರುಕ್ಷೇತ್ರ ಕನ್ನಡ ವರ್ಶನ್‌ ಟಿವಿ ರೈಟ್ಸ್‌ - 9 ಕೋಟಿ -ಹಿಂದಿ ಡಬ್ಬಿಂಗ್‌ ರೈಟ್ಸ್‌ -9.5 ಕೋಟಿ -ಕುರುಕ್ಷೇತ್ರ ಕನ್ನಡ ವರ್ಶನ್‌ ಆಡಿಯೋ ರೈಟ್ಸ್‌ -1.5 ಕೋಟಿ ಇದು...

  • ಯುವ ನಿರ್ದೇಶಕ ವಿಠಲ್‌ ಭಟ್‌ ನಿರ್ದೇಶನದ "ಹ್ಯಾಂಗೋವರ್‌' ಈಗ ಮತ್ತೆ ಸದ್ದು ಮಾಡುತ್ತಿದೆ. ಇಲ್ಲಿಯವರೆಗೆ ಚಿತ್ರ ಬಿಡುಗಡೆ ತಯಾರಿಯಲ್ಲಿದ್ದ ಚಿತ್ರತಂಡ, ಈಗ ಪ್ರೇಕ್ಷಕರ...

  • ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಸುದ್ದಿ ಮಾಡುತ್ತಿರುವ ಬಹು ನಿರೀಕ್ಷಿತ ಮುನಿರತ್ನ "ಕುರುಕ್ಷೇತ್ರ' ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. "ಕುರುಕ್ಷೇತ್ರ'...

ಹೊಸ ಸೇರ್ಪಡೆ