KGF 3 ದಿನದ ಕಲೆಕ್ಷನ್ ಎಷ್ಟು? ಸಿನಿಮಾ ವೀಕ್ಷಿಸಿದ ಸುಮಲತಾ ಟ್ವೀಟ್!

Team Udayavani, Dec 24, 2018, 5:02 PM IST

kgf-new.jpg

ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಗಲ್ಲಾಪೆಟ್ಟಿಗೆಯಲ್ಲಿಯೂ ಭರ್ಜರಿ ಸದ್ದು ಮಾಡಿದೆ. ಏತನ್ಮಧ್ಯೆ ಸುಮಲತಾ ಅಂಬರೀಶ್ ಕೂಡಾ ಸಿನಿಮಾ ವೀಕ್ಷಿಸಿ ಬಹುಪರಾಕ್ ಹೇಳಿದ್ದಾರೆ.

ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ ಸಿನಿಮಾ ಬಿಡುಗಡೆಗೊಂಡ ದಿನ ಒಟ್ಟಾರೆ 15 ಕೋಟಿ ರೂಪಾಯಿ ಸೇರಿದಂತೆ ಕರ್ನಾಟಕದಲ್ಲಿ ಮೂರು ದಿನಗಳಲ್ಲಿ 30 ಕೋಟಿ ಗಳಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.

ಬಿ ಮತ್ತು ಸಿ ಸೆಂಟರ್ ಗಳಲ್ಲಿ ಶನಿವಾರ ಮತ್ತು ಭಾನುವಾರ ಕೆಜಿಎಫ್ ತುಂಬಿದ ಪ್ರದರ್ಶನ ಕಂಡಿದೆ. ತೆಲುಗು ಭಾಷಾ ಪ್ರದೇಶದಲ್ಲಿ ಕೆಜಿಎಫ್ ಮೂರು ದಿನಗಳಲ್ಲಿ 3.08 ಕೋಟಿ ಗಳಿಕೆ ಕಂಡಿದ್ದರೆ. ನೆರೆಯ ತಮಿಳುನಾಡು ಹಾಗೂ ಕೇರಳದಲ್ಲಿ ವಾರಾಂತ್ಯಕ್ಕೆ 1.08 ಕೋಟಿ ರೂ. ಬಾಚಿಕೊಂಡಿದೆ ಎಂದು ವರದಿ ವಿವರಿಸಿದೆ.

ಹಿಂದಿಯಲ್ಲಿ ಕಳೆದ ಮೂರು ದಿನಗಳಲ್ಲಿ ಕೆಜಿಎಫ್ ಗಲ್ಲಾಪೆಟ್ಟಿಗೆಯಲ್ಲಿ 12.05 ಕೋಟಿ ರೂ. ಗಳಿಸಿದೆ. ಕೆಜಿಎಫ್ ಬಿಡುಗಡೆಯಾದ ದಿನದಿಂದ ಈವರೆಗೆ ಗಳಿಕೆಯಲ್ಲಿ ನಾಗಾಲೋಟ ಕಾಣತೊಡಗಿದೆ ಎಂದು ವರದಿ ತಿಳಿಸಿದೆ.

ಸಿನಿಮಾ ನೋಡಿ ಸುಮಲತಾ ಅಂಬರೀಶ್ ಟ್ವೀಟ್ !

ಕೆಜಿಎಫ್ ಸಿನಿಮಾ ವೀಕ್ಷಿಸಿದ ಸುಮಲತಾ ಅಂಬರೀಶ್ ಅವರು, ಕೆಜಿಎಫ್ ಅಪ್ಪಟ ಚಿನ್ನ. ನಾನು ಹಿಂದೆಂದೂ ಕನ್ನಡ ಚಿತ್ರರಂಗದಲ್ಲಿ ಇಂತಹ ಸಿನಿಮಾವನ್ನು ಕಂಡಿಲ್ಲ. ಕೊನೆಗೂ ಎರಡು ವರ್ಷಗಳ ಕಠಿಣ ಶ್ರಮದಿಂದಾಗಿಯೇ ಯಶ್ ಅದ್ಭುತ ನಟನೆ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಇಂತಹ ಸಿನಿಮಾಗಳು ಒಂದು ವೇಳೆ ಆರು ತಿಂಗಳಲ್ಲಿ ನಿರ್ಮಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿ ಶಹಬ್ಬಾಸ್ ಗಿರಿ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಯಶ್, ಥ್ಯಾಂಕ್ ಯು ಸೋ ಮಚ್ ಅಕ್ಕಾ ಎಂದು ತಿಳಿಸಿದ್ದಾರೆ. ನೀವು ಸಿನಿಮಾ ನೋಡಿರುವುದೇ ನನಗೆ ಎಲ್ಲದಕ್ಕಿಂತ ಹೆಚ್ಚಿನ ಸಂತೋಷ. ಈ ವೇಳೆ ಅಣ್ಣಾ(ಅಂಬಿ) ಇದ್ದಿದ್ದರೆ ಸಿನಿಮಾ ನೋಡಿ ಖುಷಿ ಹಂಚಿಕೊಳ್ಳುತ್ತಿದ್ದರು. ಆದರೂ ಅವರು ಅಲ್ಲಿಂದಲೇ ನೋಡಿ ನನ್ನ ಯಾವತ್ತೂ ಹರಿಸುತ್ತಿರುತ್ತಾರೆ ಎಂದು ಉತ್ತರಿಸಿದ್ದಾರೆ.

ಟಾಪ್ ನ್ಯೂಸ್

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

ಎದೆನೋವು: ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಆಸ್ಪತ್ರೆಗೆ ದಾಖಲು

ಎದೆನೋವು: ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಆಸ್ಪತ್ರೆಗೆ ದಾಖಲು

ವಿಶ್ವಕಪ್ 2022: ಪೋರ್ಚುಗಲ್‌ಗೆ ದಕ್ಷಿಣ ಕೊರಿಯಾಘಾತ!

ವಿಶ್ವಕಪ್ 2022: ಪೋರ್ಚುಗಲ್‌ಗೆ ದಕ್ಷಿಣ ಕೊರಿಯಾಘಾತ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thugs

ಪೋಸ್ಟರ್ ನಲ್ಲಿ ಕಂಡ ‘ಥಗ್ಸ್‌ ಆಫ್ ರಾಮಘಡ’

dharani mandala madhyadolage

ಬಿಡುಗಡೆಯಾಯ್ತು ಧರಣಿ ಮಂಡಲ ಮಧ್ಯದೊಳಗೆ…

thimmaiah and thimmaiah kannada movie

ತೆರಗೆ ಬಂತು ದಿಗಂತ್- ಅನಂತ್ ನಾಗ್ ಅಭಿನಯದ “ತಿಮ್ಮಯ್ಯ ಅಂಡ್‌ ತಿಮ್ಮಯ್ಯ”

4

ಹಿರಿಯ ಚಲನಚಿತ್ರ ನಿರ್ಮಾಪಕ ಕೆ. ಮುರಳೀಧರನ್ ನಿಧನ

TDY-1

ಕೆಜಿಎಫ್‌ ʼತಾತʼ ಕೃಷ್ಣಾಜಿ ರಾವ್‌ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.