ಸಾವರ್ಕರ್‌ ಫ‌ಸ್ಟ್‌ ಲುಕ್‌ ಬಂತು


Team Udayavani, Mar 11, 2023, 1:31 PM IST

tdy-14

ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಅವರ ಜೀವನಗಾಥೆ ಈಗ ಕನ್ನಡದಲ್ಲೂ ತೆರೆಗೆ ಬರುತ್ತಿರುವುದು ನಿಮಗೆ ಗೊತ್ತಿರಬಹುದು.

ಕೆಲ ದಿನಗಳ ಹಿಂದಷ್ಟೇ ವೀರ ಸಾವರ್ಕರ್‌ ಅವರ ಬಯೋಪಿಕ್‌ನಲ್ಲಿ ನಟ ಸುನೀಲ್‌ ರಾವ್‌ ಸಾವರ್ಕರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯನ್ನು ಚಿತ್ರತಂಡ ಹಂಚಿಕೊಂಡಿತ್ತು. ಇದೀಗ ಈ ಸಿನಿಮಾದಲ್ಲಿ ಸುನೀಲ್‌ ರಾವ್‌ ಕಾಣಿಸಿಕೊಳ್ಳುತ್ತಿರುವ ಸಾವರ್ಕರ್‌ ಪಾತ್ರದ ಫ‌ಸ್ಟ್‌ಲುಕ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಈಗಾಗಲೇ ಈ ಸಿನಿಮಾದ ಬಹುತೇಕ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ರಾಧಾಕೃಷ್ಣ ಪಲ್ಲಕ್ಕಿ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ. ಸಿನಿಮಾದಲ್ಲಿ ವೀರ ಸಾವರ್ಕರ್‌ ಪಾತ್ರವನ್ನು ಸುನೀಲ್‌ ರಾವ್‌ ನಿರ್ವಹಿಸಿದರೆ, ಮಹಾತ್ಮ ಗಾಂಧಿ ಪಾತ್ರದಲ್ಲಿ ಹಿಂದಿಯ ನಟ ಶರ್ಮಾ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್‌ ನಟ ಅನುಪಮ್‌ ಖೇರ್‌ ಅವರನ್ನು ಕರೆತರುವ ಪ್ರಯತ್ನ ನಡೆದಿದ್ದು, ಉಳಿದಂತೆ ಸಾಯಿ ಕುಮಾರ್‌, ರಂಗಾಯಣ ರಘು, ರವಿಶಂಕರ್‌, ಅನು ಪ್ರಭಾಕರ್‌ ಹೀಗೆ ಸಿನಿಮಾದ ಇತರ ಪಾತ್ರಗಳಲ್ಲಿ ಬಹುತೇಕ ಕನ್ನಡದ ಕಲಾವಿದರೆ ಅಭಿನಯಿಸಲಿದ್ದಾರೆ.

ಬಿಗ್‌ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಚಿತ್ರೀಕರಣ, ಇದೇ ಮಾರ್ಚ್‌ 25 ರಿಂದ ಆರಂಭವಾಗಲಿದೆ ಎಂಬುದು ಚಿತ್ರತಂಡದ ಮೂಲಗಳ ಮಾಹಿತಿ. ಇನ್ನು ಹಿಂದಿಯಲ್ಲಿ ಈಗಾಗಲೇ ಸಾವರ್ಕರ್‌ ಬಯೋಪಿಕ್‌ ರೆಡಿ ಆಗುತ್ತಿದ್ದು, ಬಹುತೇಕ ಚಿತ್ರೀಕರಣ ಮುಗಿದಿದೆ. ಈ ಹೊತ್ತಿನಲ್ಲಿ ಸ್ಯಾಂಡಲ್‌ವುಡ್‌ನ‌ಲ್ಲೂ ಸಾವರ್ಕರ್‌ ಬಯೋಪಿಕ್‌ ನಿರ್ಮಾಣವಾಗುತ್ತಿದೆ. ಹಿಂದಿಯಲ್ಲಿ ಬರುತ್ತಿರುವ ಬಯೋಪಿಕ್‌ಗೂ ಈ ಸಿನಿಮಾಗೂ ನಮಗೂ ಸಂಬಂಧವಿಲ್ಲ ಎಂಬುದು ಚಿತ್ರತಂಡದ ಮಾತು.

ಸಿನಿಮಾಕ್ಕೆ ಕೆ. ಎಸ್‌. ಚಂದ್ರಶೇಖರ್‌ ಛಾಯಾಗ್ರಹಣ, ಥ್ರಿಲ್ಲರ್‌ ಮಂಜು ಸಾಹಸವಿದೆ. ಸಿನಿಮಾದ ಹಾಡುಗಳಿಗೆ ಸ್ಯಾಮ್‌ ಸಂಗೀತ ಸಂಯೋಜಿಸುತ್ತಿದ್ದು, ಕೆ. ಎನ್‌. ಚಕ್ರಪಾಣಿ ಈ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.

ಸದ್ಯ ಬಿಡುಗಡೆಯಾಗಿರುವ ಸಾವರ್ಕರ್‌ ಸಿನಿಮಾದ ಫ‌ಸ್ಟ್‌ಲುಕ್‌ನಲ್ಲಿ ನಟ ಸುನೀಲ್‌ ರಾವ್‌ ಅವರ ಲುಕ್‌ ಗಮನ ಸೆಳೆಯುತ್ತಿದ್ದು, ಸೋಶಿಯಲ್‌ ಮೀಡಿಯಾಗಳಲ್ಲಿ ಸಾವರ್ಕರ್‌ ಫ‌ಸ್ಟ್‌ಲುಕ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಟಾಪ್ ನ್ಯೂಸ್

Udupi ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ; 3 ಮಂದಿ ವಶಕ್ಕೆ

Udupi ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ; 3 ಮಂದಿ ವಶಕ್ಕೆ

1-sadasd

Manali; ದಟ್ಟಾರಣ್ಯದಲ್ಲಿ ನಾಪತ್ತೆಯಾದ ಬೆಂಗಳೂರಿನ ಚಾರಣಿಗ; ತೀವ್ರ ಶೋಧ

Mangaluru 18 ವರ್ಷದ ಯುವತಿ ನಾಪತ್ತೆ, ದೂರು ದಾಖಲು

Mangaluru 18 ವರ್ಷದ ಯುವತಿ ನಾಪತ್ತೆ, ದೂರು ದಾಖಲು

Udupi ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

Udupi ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

Fraud Case ಕ್ರೆಡಿಟ್‌ ಕಾರ್ಡ್‌ನಿಂದ 1.55 ಲಕ್ಷ ರೂ. ವರ್ಗಾಯಿಸಿ ವಂಚನೆ

Fraud Case ಕ್ರೆಡಿಟ್‌ ಕಾರ್ಡ್‌ನಿಂದ 1.55 ಲಕ್ಷ ರೂ. ವರ್ಗಾಯಿಸಿ ವಂಚನೆ

1-sasa-dsa

Asian Games ಹಾಕಿ: ಭಾರತ ಸೆಮಿಫೈನಲ್‌ಗೆ; ಬಾಂಗ್ಲಾ ವಿರುದ್ಧ ಡಜನ್‌ ಗೋಲು

ಗ್ಯಾರಂಟಿ ಹಿಂದೆ ಗಾಂಧಿ ಪ್ರೇರಣೆ: ಸಿಎಂ ಸಿದ್ದರಾಮಯ್ಯ

Gandhi Jayanti ಗ್ಯಾರಂಟಿ ಹಿಂದೆ ಗಾಂಧಿ ಪ್ರೇರಣೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಬ್ಬಿಂಗ್ ಮುಗಿಸಿದ ಮಾಫಿಯಾ

Sandalwood; ಡಬ್ಬಿಂಗ್ ಮುಗಿಸಿದ ‘ಮಾಫಿಯಾ’

ಪ್ರೀತಿ ಕಥೆ ‘ಅವನು ಮತ್ತೆ ಶ್ರಾವಣಿ’; ಮುಖ್ಯ ಪಾತ್ರದಲ್ಲಿ ಶ್ವಾನ

Kannada Serial; ಪ್ರೀತಿ ಕಥೆ ‘ಅವನು ಮತ್ತೆ ಶ್ರಾವಣಿ’; ಮುಖ್ಯ ಪಾತ್ರದಲ್ಲಿ ಶ್ವಾನ

ಅಮರಾವತಿ ಪೊಲೀಸ್‌ ಸ್ಟೇಷನ್‌ನಲ್ಲಿ ಧರ್ಮ!

Sandalwood; ಅಮರಾವತಿ ಪೊಲೀಸ್‌ ಸ್ಟೇಷನ್‌ನಲ್ಲಿ ಧರ್ಮ!

bigg

Bigg Boss ಕನ್ನಡ ಸೀಸನ್‌ 10ಗೆ ಕೌಂಟ್‌ ಡೌನ್‌

1-sasdasd

Actor; ‘ದೇಸಾಯಿ’ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಅಥಣಿ ಶಾಸಕ ಲಕ್ಷ್ಮಣ ಸವದಿ

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

Udupi ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ; 3 ಮಂದಿ ವಶಕ್ಕೆ

Udupi ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ; 3 ಮಂದಿ ವಶಕ್ಕೆ

1-sadasd

Manali; ದಟ್ಟಾರಣ್ಯದಲ್ಲಿ ನಾಪತ್ತೆಯಾದ ಬೆಂಗಳೂರಿನ ಚಾರಣಿಗ; ತೀವ್ರ ಶೋಧ

Mangaluru 18 ವರ್ಷದ ಯುವತಿ ನಾಪತ್ತೆ, ದೂರು ದಾಖಲು

Mangaluru 18 ವರ್ಷದ ಯುವತಿ ನಾಪತ್ತೆ, ದೂರು ದಾಖಲು

Udupi ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

Udupi ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

Guttigaru ವಳಲಂಬೆ: ಕ್ಷುಲ್ಲಕ ಕಾರಣಕ್ಕೆ ಮಹಿಳೆ ಆತ್ಮಹತ್ಯೆ

Guttigaru ವಳಲಂಬೆ: ಕ್ಷುಲ್ಲಕ ಕಾರಣಕ್ಕೆ ಮಹಿಳೆ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.