ವರ್ಷಾಂತ್ಯದಲ್ಲೂ ಅದಿತಿ ಹವಾ: ಒಂದೇ ದಿನ ಎರಡು ಚಿತ್ರ ರಿಲೀಸ್
Team Udayavani, Dec 29, 2022, 9:21 AM IST
ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಅದಿತಿ ಪ್ರಭುದೇವ, ಸದ್ಯ ತಮ್ಮ ಹೊಸ ಪರಿವಾರದ ಜೊತೆಗೆ ಹೊಸವರ್ಷಕ್ಕೆ ಸಂಭ್ರಮಕ್ಕೆ ರೆಡಿಯಾಗುತ್ತಿದ್ದಾರೆ. ಇದರ ನಡುವೆಯೇ ಈ ವರ್ಷಾಂತ್ಯದಲ್ಲಿ ಒಂದೇ ದಿನ ಅದಿತಿ ಪ್ರಭುದೇವ ಅಭಿನಯದ ಎರಡು ಸಿನಿಮಾಗಳು ಏಕಕಾಲಕ್ಕೆ ತೆರೆ ಕಾಣುತ್ತಿದೆ.
ಹೌದು, ಈ ವರ್ಷ ಚಂದನವದನಲ್ಲಿ ಅತಿಹೆಚ್ಚು ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವ ನಾಯಕ ನಟಿಯರ ಪೈಕಿ ಅದಿತಿ ಪ್ರಭುದೇವ ಕೂಡ ಒಬ್ಬರು. ಈಗಾಗಲೇ “ಒಂಬತ್ತನೇ ದಿಕ್ಕು’, “ಓಲ್ಡ್ ಮಾಂಕ್’, “ಗಜಾನನ ಆ್ಯಂಡ್ ಗ್ಯಾಂಗ್’, “ಚಾಂಪಿಯನ್’, “ತೋತಾಪುರಿ’, “ತ್ರಿಬಲ್ ರೈಡಿಂಗ್’ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಗ್ಸ್ಕ್ರೀನ್ನಲ್ಲಿ ಎಂಟ್ರಿ ಕೊಟ್ಟಿದ್ದ ಅದಿತಿ ಪ್ರಭುದೇವ ಈಗ ವರ್ಷಾಂತ್ಯದಲ್ಲಿ ಡಿ. 30ರಂದು ಒಂದೇ ದಿನ ಎರಡು ಸಿನಿಮಾಗಳಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡುತ್ತಿದ್ದಾರೆ.
ಡಾಲಿ ಧನಂಜಯ್ ಅಭಿನಯದ “ಜಮಾಲಿಗುಡ್ಡ’ ಸಿನಿಮಾದಲ್ಲಿ ಅದಿತಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದು, ಈ ಸಿನಿಮಾ ಡಿ. 30ಕ್ಕೆ ತೆರೆ ಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ “ಜಮಾಲಿಗುಡ್ಡ’ ಸಿನಿಮಾದ ಟೀಸರ್, ಟ್ರೇಲರ್ನಲ್ಲಿ ಅದಿತಿ ಪ್ರಭುದೇವ ಅವರ ಪಾತ್ರ ಒಂದಷ್ಟು ಕುತೂಹಲ ಮೂಡಿಸಿದ್ದು, ಅದಿತಿ ಗೆಟಪ್ ಸಿನಿಪ್ರಿಯರನ್ನು ಸೆಳೆಯಲು ಯಶಸ್ವಿಯಾಗಿದೆ.
ಇದರ ಜೊತೆಗೆ ಬಹುತೇಕ ಹೊಸ ಪ್ರತಿಭೆಗಳೇ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ “ಪದವಿ ಪೂರ್ವ’ ಸಿನಿಮಾ ಕೂಡ ಇದೇ ಡಿ. 30ಕ್ಕೆ ತೆರೆ ಕಾಣುತ್ತಿದೆ. ಈ ಸಿನಿಮಾದಲ್ಲೂ ಅದಿತಿ ಪ್ರಭುದೇವ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ “ಪದವಿ ಪೂರ್ವ’ ಚಿತ್ರತಂಡ ಸಿನಿಮಾದಲ್ಲಿ ಅದಿತಿ ಪ್ರಭುದೇವ ನಿರ್ವಹಿಸಿರುವ ಪಾತ್ರದ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಡದಿರುವುದರಿಂದ, ಅದಿತಿ ಪಾತ್ರ ಹೇಗಿದೆ ಎಂಬುದು “ಪದವಿ ಪೂರ್ವ’ ಸಿನಿಮಾ ತೆರೆಗೆ ಕಂಡ ಬಳಿಕವಷ್ಟೇ ಗೊತ್ತಾಗಲಿದೆ.
ಒಟ್ಟಾರೆ ಒಂದೇ ದಿನ ಅದಿತಿ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಅದಿತಿ ಕೂಡ ತೆರೆ ಕಾಣಲಿರುವ ತಮ್ಮ ಸಿನಿಮಾಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ