

Team Udayavani, Aug 20, 2018, 12:42 PM IST
“ಹೋಮ್ ಮಿನಿಸ್ಟರ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಿರೂಪಕಿ ಪದೇ ಪದೇ, “ಉಪೇಂದ್ರ ಅವರು ರಾಜಕೀಯಕ್ಕೆ ಬಂದಿದ್ದಾರೆ’ ಎಂದು ಹೇಳುತ್ತಲೇ ಇದ್ದರು. ಅದ್ಯಾಕೋ ಉಪೇಂದ್ರ ಅವರಿಗೆ ಕಿರಿಕಿರಿ ಅನಿಸಿದಂತಿತ್ತು. ಆ ನಂತರ ಮೈಕ್ ಎತ್ತಿಕೊಂಡ ಉಪೇಂದ್ರ, “ನೀವು ಪದೇ ಪದೇ ರಾಜಕೀಯಕ್ಕೆ ಬಂದಿದ್ದೇನೆ ಅನ್ನುತ್ತಿದ್ದೀರಿ. ನಾನು ರಾಜಕೀಯಕ್ಕೆ ಬಂದರೆ ನನ್ನ ಉದ್ದೇಶ ಈಡೇರಲ್ಲ. ಅದೇ ಕಾರಣದಿಂದ ನಾನು ರಾಜಕೀಯಕ್ಕೆ ಬಂದಿಲ್ಲ.
ನಾನು ಬಂದಿರೋದು ಪ್ರಜಾಕೀಯಕ್ಕೆ. ರಾಜಕೀಯ ಹಾಗೂ ಪ್ರಜಾಕೀಯದ ಪದದಲ್ಲಷ್ಟೇ ಬದಲಾವಣೆ ಇಲ್ಲ. ಇಡೀ ಆ ಕಾನ್ಸೆಪ್ಟ್ನಲ್ಲಿ ಬದಲಾವಣೆ ಇದೆ, ಆಲೋಚನೆಯಲ್ಲಿ ಭಿನ್ನತೆ ಇದೆ. ನಾನು ರಾಜಕೀಯಕ್ಕೆ ಬಂದರೆ ನನ್ನ ಉದ್ದೇಶ, ನನ್ನ ತತ್ವಕ್ಕೆ ಅರ್ಥವಿರೋದಿಲ್ಲ. ನಾನು ಬಂದಿರೋದು ಪ್ರಜಾಕೀಯಕ್ಕೆ. ಒಂದಲ್ಲ, ಒಂದು ದಿನ ಪ್ರಜಾಕೀಯಕ್ಕೆ ಮನ್ನಣೆ ಸಿಗುತ್ತದೆ ಎಂದು ಗೊತ್ತು. ಸಮಾನ ಮನಸ್ಕರನ್ನು ಆಹ್ವಾನಿಸುತ್ತಿದ್ದೇನೆ.
ಒಂದು ವೇದಿಕೆ ಇದೆ, ಏನಾದರೂ ಹೊಸದು ಮಾಡೋಣವೆಂದು ಕರೆಯುತ್ತಿದ್ದೇಮ. ಇಲ್ಲಿ ನಾನು, ನನ್ನದು ಅನ್ನೋದು ಏನೂ ಇಲ್ಲ. ಎಲ್ಲರೊಳಗೊಬ್ಬ’ ಎಂದು ರಾಜಕೀಯ ಹಾಗೂ ಪ್ರಜಾಕೀಯದ ಕುರಿತ ವ್ಯತ್ಯಾಸವನ್ನು ಬಿಡಿಸಿ ಹೇಳಿದರು ಉಪೇಂದ್ರ. ಸದ್ಯ ಉಪೇಂದ್ರ ಅವರು “ಹೋಮ್ ಮಿನಿಸ್ಟರ್’ ಚಿತ್ರೀಕರಣ ಮುಗಿಸಿದ್ದು, “ಐ ಲವ್ ಯೂ’ ಚಿತ್ರೀಕರಣ ನಡೆಯುತ್ತಿದೆ. ಈ ನಡುವೆಯೇ ಅವರ ಹೊಸ ಚಿತ್ರ “ರವಿ-ಚಂದ್ರ’ ಇಂದು ಸೆಟ್ಟೇರುತ್ತಿದೆ.
Ad
Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ
ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ಡಾ.ಜಿ. ಪರಮೇಶ್ವರ್
ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾರ್ಯ ಶೀಘ್ರ ಆರಂಭ
ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ
Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್ ಘೋಷಣೆ
You seem to have an Ad Blocker on.
To continue reading, please turn it off or whitelist Udayavani.