‘ದರ್ಬಾರ್’: 23 ವರ್ಷದ ಬಳಿಕ ನಿರ್ದೇಶನಕ್ಕೆ ಬಂದ ವಿ.ಮನೋಹರ್


Team Udayavani, Mar 31, 2023, 4:40 PM IST

v manohar directed movie darbar

ಹಿರಿಯ ಸಂಗೀತ ನಿರ್ದೇಶಕ ಕಂ ನಟ ವಿ. ಮನೋಹರ್‌ ಬಹಳ ದಿನಗಳ ನಂತರ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಈಗಾಗಲೇ ಸದ್ದಿಲ್ಲದೆ “ದರ್ಬಾರ್‌’ ಎಂಬ ತಮ್ಮ ಹೊಸ ಸಿನಿಮಾದ ಚಿತ್ರೀಕರಣ ಪೂರ್ಣಗೊಳಸಿರುವ ವಿ. ಮನೋಹರ್‌, ಇದೇ ಏಪ್ರಿಲ್‌ ವೇಳೆಗೆ ತಮ್ಮ ಸಿನಿಮಾವನ್ನು ಥಿಯೇಟರ್‌ ಗೆ ತರುವ ಯೋಚನೆಯಲ್ಲಿದ್ದಾರೆ. ಇತ್ತೀಚೆಗಷ್ಟೇ “ದರ್ಬಾರ್‌’ ಸಿನಿಮಾದ ಮೇಕಿಂಗ್‌ ವಿಡಿಯೋ ಬಿಡುಗಡೆ ಮಾಡಿರುವ ಚಿತ್ರತಂಡ, ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದೆ.

ಮೊದಲಿಗೆ ತಮ್ಮ ಸಿನಿಮಾದ ಬಗ್ಗೆ ಮಾತಿಗಿಳಿದ ವಿ. ಮನೋಹರ್‌, “ಸುಮಾರು 23 ವರ್ಷಗಳ ನಂತರ ನಾನು ಮತ್ತೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಅದಕ್ಕೆ ಕಾರಣ ಈ ಸಿನಿಮಾದ ನಟ ಸತೀಶ್‌. “ಇಂದ್ರ ಧನುಷ್‌’ ಸಿನಿಮಾದ ನಂತರ ನಾನೂ ಸೀರಿಯಲ್, ಸಂಗೀತ ನಿರ್ದೇಶನ ಅಂತ ಬ್ಯುಸಿಯಾಗುತ್ತಾ ಹೋದೆ. ಹಾಗಾಗಿ ಅಂದುಕೊಂಡಂತೆ ಸಿನಿಮಾ ನಿರ್ದೇ ಶನ ಮಾಡಲು ಸಾಧ್ಯವಾಗಲಿಲ್ಲ. ಇನ್ನು ಸಿನಿಮಾರಂಗಕ್ಕೆ ಬರೋಕೂ ಮುನ್ನ ನಾನು ಕೆಲ ದಿನಪತ್ರಿಕೆಗಳಿಗೆ ಕಾರ್ಟೂನ್‌ ಬರೆಯುತ್ತಿದ್ದೆ. ಆಗಿಂದಲೇ ನಾನು ರಾಜಕೀಯದ ಬಗ್ಗೆ ತಿಳಿದುಕೊಂಡಿದ್ದೆ. ಇದೇ ಕಂಟೆಂಟ್‌ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದುಕೊಡಿದ್ದೆ. ಈಗ ಅದಕ್ಕೆ ಅವಕಾಶ ಸಿಕ್ಕಿದ್ದು, ರಾಜಕೀಯ ವಿಡಂಭನೆಯ ಕಥೆಯನ್ನು “ದರ್ಬಾರ್‌’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂದು ಕಥಾಹಂದರದ ವಿವರಣೆ ನೀಡಿದರು.

“ದರ್ಬಾರ್‌’ ಸಿನಿಮಾ ಶುರುವಾದ ನಂತರ ಕೋವಿಡ್‌ ಹೆಚ್ಚಾಯಿತು. ಆ ಭಯದಲ್ಲಿಯೇ ಸಿನಿಮಾದ ಶೂಟಿಂಗ್‌ ಕಂಪ್ಲೀಟ್‌ ಮಾಡಿದೆವು. ಮದ್ದೂರು ಬಳಿಯ ಹಳ್ಳಿಯೊಂದರಲ್ಲಿ ಸಿನಿಮಾದ ಬಹುತೇಕ ಶೂಟಿಂಗ್‌ ನಡೆಸಲಾಗಿದೆ. ಈ ಹಿಂದೆ “ದಿಲ್ದಾರ್‌’ ಸಮಯದಿಂದಲೂ ಸ್ನೇಹಿತರಾಗಿದ್ದ ಸತೀಶ್‌ ಈ ಕಥೆ ಹೇಳಿದರು. ಅದರಲ್ಲೂ ಪಾಲಿಟಿಟ್ಸ್‌ ಇತ್ತು. ಇವತ್ತಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಸಬ್ಜೆಕ್ಟ್ ಈ ಸಿನಿಮಾದಲ್ಲಿದೆ’ ಎಂದರು ವಿ. ಮನೋಹರ್‌.

ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಹ ನಟನಾಗಿ ಅಭಿನಯಿಸಿದ ಅನುಭವವಿರುವ ಸತೀಶ್‌ “ದರ್ಬಾರ್‌’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. “ನಿಜವಾಗಿಯೂ ನಾವು ಹಾಕುವ ಮತ ಸರಿಯಾಗಿದೆಯೇ, ಸೂಕ್ತ ವ್ಯಕ್ತಿಗೆ ನಾವು ಹಾಕ್ತಿದ್ದೇವಾ ಎಂಬ ಚಿಂತನೆಗೆ ಹಚ್ಚುವ ಕೆಲಸ ಈ ಸಿನಿಮಾ ಮಾಡುತ್ತದೆ. ಮನರಂಜನೆಯ ಜೊತೆಗೊಂದು ಮೆಸೇಜ್‌ ಈ ಸಿನಿಮಾ ದಲ್ಲಿದೆ. ಸದ್ಯ ಸಿನಿಮಾ ಸೆನ್ಸಾರ್‌ ಮುಂದಿದ್ದು, ಆದಷ್ಟು ಬೇಗ ಥಿಯೇಟರ್‌ಗೆ ತರಲಿದ್ದೇವೆ’ ಎಂಬುದು ನಾಯಕ ಸತೀಶ್‌ ಮಾತು.

“ದರ್ಬಾರ್‌’ ಸಿನಿಮಾದಲ್ಲಿ ಜಾಹ್ನವಿ ನಾಯಕಿಯಾಗಿದ್ದು, ಉಳಿದಂತೆ ಕಾರ್ತಿಕ್‌ ಎಂ. ಎನ್‌ ಲಕ್ಷ್ಮೀದೇವಿ, ಅಶೋಕ್‌, ಸಾಧು ಕೋಕಿಲ ಮತ್ತಿತರರು ಇದ್ದಾರೆ.

ಟಾಪ್ ನ್ಯೂಸ್

LAKSHYA SEN

Thailand Open Badminton: ಸೆಮಿಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೇನ್‌; ಕಿರಣ್‌ ಔಟ್‌

CONGRESS GUARENTEE

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ನಾಗರಿಕರ ಸಹಕಾರವೂ ಅಗತ್ಯ

police siren

ಸೋಮೇಶ್ವರ: ನೈತಿಕ ಪೊಲೀಸ್‌ಗಿರಿ; ಆರು ಮಂದಿಯ ಬಂಧನ

death

ಸುಬ್ರಹ್ಮಣ್ಯ: ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

MOBILE FRAUD MONEY

ಬ್ಯಾಂಕ್‌ ಖಾತೆ ವಿವರ ಪಡೆದು 1.21 ಲ.ರೂ. ವಂಚನೆ

power lines

kadaba: ಲೈನ್‌ಮನ್‌ ಸಾವು ಪ್ರಕರಣ: ಇಬ್ಬರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ

arrest 3

17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

ಶೂಟಿಂಗ್ ಮುಗಿಸಿದ ‘ಟಗರು ಪಲ್ಯ’: ಪೋಸ್ಟ್ ಪ್ರೊಡಕ್ಷನ್ ನತ್ತ ಡಾಲಿ ನಿರ್ಮಾಣದ ಚಿತ್ರ

ಶೂಟಿಂಗ್ ಮುಗಿಸಿದ ‘ಟಗರು ಪಲ್ಯ’: ಪೋಸ್ಟ್ ಪ್ರೊಡಕ್ಷನ್ ನತ್ತ ಡಾಲಿ ನಿರ್ಮಾಣದ ಚಿತ್ರ

Naveen shankar spoke about cini journey

ಹೀರೋ- ವಿಲನ್ ಅಂತೇನಿಲ್ಲ, ಪಾತ್ರಗಳಿಗೆ ನ್ಯಾಯ ಕೊಡುವುದೇ ನನ್ನಉದ್ದೇಶ… ನವೀನ್‌ ಶಂಕರ

ತೆರೆಗೆ ಬಂತು ನೈಜ ಘಟನೆಯ ಸುತ್ತ ‘ಪಿಂಕಿ ಎಲ್ಲಿ’?

ತೆರೆಗೆ ಬಂತು ನೈಜ ಘಟನೆಯ ಸುತ್ತ ‘ಪಿಂಕಿ ಎಲ್ಲಿ’?

Kannada film yada yada hi relased

ತೆರೆಗೆ ಬಂತು ಥ್ರಿಲ್ಲರ್‌ ‘ಯದಾ ಯದಾ ಹೀ’

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

LAKSHYA SEN

Thailand Open Badminton: ಸೆಮಿಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೇನ್‌; ಕಿರಣ್‌ ಔಟ್‌

CONGRESS GUARENTEE

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ನಾಗರಿಕರ ಸಹಕಾರವೂ ಅಗತ್ಯ

police siren

ಸೋಮೇಶ್ವರ: ನೈತಿಕ ಪೊಲೀಸ್‌ಗಿರಿ; ಆರು ಮಂದಿಯ ಬಂಧನ

death

ಸುಬ್ರಹ್ಮಣ್ಯ: ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

MOBILE FRAUD MONEY

ಬ್ಯಾಂಕ್‌ ಖಾತೆ ವಿವರ ಪಡೆದು 1.21 ಲ.ರೂ. ವಂಚನೆ