ನಿರ್ದೇಶನದತ್ತ ವಿಜಯ್‌

ಸಲಗ ಚಿತ್ರಕ್ಕೆ ಆ್ಯಕ್ಷನ್‌-ಕಟ್‌

Team Udayavani, May 14, 2019, 3:00 AM IST

ದುನಿಯಾ ವಿಜಯ್‌ ಮತ್ತೆ ಟ್ರ್ಯಾಕ್‌ಗೆ ಮರಳಿದ್ದಾರೆ. ಇತ್ತೀಚೆಗೆ ನಾನಾ ಕಾರಣಗಳಿಗಾಗಿ ಸುದ್ದಿಯಾಗಿದ್ದ ವಿಜಯ ಈ ಬಾರಿ ಸಿನಿಮಾದಿಂದಲೇ ಸುದ್ದಿಯಲ್ಲಿದ್ದಾರೆ. ಅದು ಸಿನಿಮಾದಲ್ಲೇ ಹೊಸ ಆಯಾಮಕ್ಕೆ ತೆರೆದುಕೊಳ್ಳುವ ಮೂಲಕ. ಹೌದು, ವಿಜಯ್‌ ಈಗ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಹಾಗಂತ ಬೇರೆಯವರಿಗೆ ಅವರು ನಿರ್ದೇಶನ ಮಾಡುತ್ತಿಲ್ಲ.

ತಾವೇ ನಾಯಕರಾಗಿ ನಟಿಸುತ್ತಿರುವ “ಸಲಗ’ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಲು ಮುಂದಾಗಿದ್ದಾರೆ. ಈ ಮೂಲಕ ಚಿತ್ರರಂಗದ ಮತ್ತೂಂದು ಮಗ್ಗುಲಿಗೆ ವಿಜಯ್‌ ತೆರೆದುಕೊಂಡಿದ್ದಾರೆ. ಈಗಾಗಲೇ ಕಥೆ, ಚಿತ್ರಕಥೆ ಎಲ್ಲವನ್ನು ಪಕ್ಕಾ ಮಾಡಿಕೊಂಡಿರುವ ವಿಜಯ್‌, ನಿರ್ದೇಶನದ ತಯಾರಿಯಲ್ಲಿ ತೊಡಗಿದ್ದಾರೆ. ಆರಂಭದಲ್ಲಿ ವಿಜಯ್‌ “ಕುಸ್ತಿ’ ಚಿತ್ರದಲ್ಲಿ ನಟಿಸಲು ಮುಂದಾಗಿದ್ದು, ಈ ಚಿತ್ರವನ್ನು ರಾಘು ಶಿವಮೊಗ್ಗ ನಿರ್ದೇಶಿಸುತ್ತಾರೆನ್ನಲಾಗಿತ್ತು.

ಆ ನಂತರ “ಸಲಗ’ ಅನೌನ್ಸ್‌ ಆದಾಗಲೂ ರಾಘು ಅವರ ಹೆಸರೇ ಕೇಳಿಬಂದಿತ್ತು. ನಂತರ ಆ ಚಿತ್ರದಿಂದ ರಾಘು ಹೊರಬಂದಾಗ ಎದ್ದ ಪ್ರಶ್ನೆ ಎಂದರೆ “ಸಲಗ’ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆಂಬುದು. ಸಾಕಷ್ಟು ಚರ್ಚೆಗಳ ಬಳಿಕ ಸ್ವತಃ ವಿಜಯ್‌ ಈ ಸಿನಿಮಾವನ್ನು ನಿರ್ದೇಶಿಸುವ ಮನಸ್ಸು ಮಾಡಿದ್ದಾರೆ.

ಆರಂಭದಲ್ಲಿ ಈ ಚಿತ್ರದ ನಿರ್ಮಾಣದ ಹೊಣೆಯನ್ನು ವಿಜಯ್‌ ಹೊತ್ತುಕೊಂಡಿದ್ದರು. ಆದರೆ, ಈಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ “ಸಲಗ’ ನಿರ್ಮಿಸಲು ಮುಂದಾಗಿರುವುದರಿಂದ ವಿಜಯ್‌, ನಿರ್ದೇಶನದತ್ತ ವಾಲಿದ್ದಾರೆ. “ಸಲಗ’ ಒಂದು ಔಟ್‌ ಅಂಡ್‌ ಔಟ್‌ ಮಾಸ್‌ ಸಬ್ಜೆಕ್ಟ್ ಆಗಿದ್ದು, ಈ ಮೂಲಕ ವಿಜಯ್‌ ಮತ್ತೂಮ್ಮೆ ಮಾಸ್‌ ಹೀರೋ ಆಗಿ ಮಿಂಚಲಿದ್ದಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.

ಈ ಚಿತ್ರದಲ್ಲಿ ವಿಜಯ್‌ ಗೆಟಪ್‌ ಕೂಡಾ ಭಿನ್ನವಾಗಿರಲಿದೆಯಂತೆ. ವಿಭಿನ್ನ ಶೇಡ್‌ನ‌ಲ್ಲಿ ಕಾಣಿಸಿಕೊಳ್ಳಲಿರುವ ವಿಜಯ್‌, ನಿರ್ದೇಶನದ ಜೊತೆಗೆ ಪಾತ್ರ ಪೋಷಣೆಗೂಹೆಚ್ಚಿನ ತಯಾರಿ ನಡೆಸುತ್ತಿದ್ದಾರಂತೆ. ಚಿತ್ರಕ್ಕೆ ನಾಯಕಿ ಇನ್ನಷ್ಟೇ ಆಯ್ಕೆಯಾಗಬೇಕಿದೆ. ಉಳಿದಂತೆ ಚಿತ್ರದಲ್ಲಿ ಧನಂಜಯ್‌ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. “ಟಗರು’ ಚಿತ್ರಕ್ಕೆ ಸಂಗೀತ ನೀಡಿದ ಚರಣ್‌ರಾಜ್‌ ಅವರ ಸಂಗೀತ ಚಿತ್ರಕ್ಕಿದೆ. ಜೂನ್‌ನಿಂದ “ಸಲಗ’ ಚಿತ್ರೀಕರಣಕ್ಕೆ ಹೊರಡಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ