

Team Udayavani, May 18, 2024, 4:27 PM IST
ಚಿತ್ರೀಕರಣ ಮುಗಿಸಿರುವ ವಿಕಾಸ ಪರ್ವ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ತೆರೆ ಕಾಣಲಿದೆ.
ವಿಕಾಸ ಪರ್ವ ಸಾಮಾಜಿಕ ಕಳಕಳಿಯುಳ್ಳ ಚಿತ್ರ. ಉತ್ತಮ ಸಂದೇಶವುಳ್ಳ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಿರುತೆರೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ರೋಹಿತ್ ನಾಗೇಶ್ ಅಭಿನಯಿಸಿದ್ದಾರೆ. ಸ್ವಾತಿ, ನಿಶಿತಾ ಗೌಡ, ಅಶ್ವಿನ್ ಹಾಸನ್, ಬಾಲ ರಾಜವಾಡಿ, ಕುರಿ ರಂಗ, ಸಮೀರ್ ನಗರದ್, ವಿಘ್ನೇಶ್, ಬೇಬಿ ಬಿಲ್ವ, ಮಾಸ್ಟರ್ ಅಭಯ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಮೈಂಡ್ ಥಾಟ್ಸ್ ಮೀಡಿಯಾ ಲಾಂಛನದಲ್ಲಿ ಸಮೀರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅನ್ಬು ಅರಸ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ವಿಶೃತ್ ನಾಯಕ್ ಬರೆದಿದ್ದಾರೆ. ಜೊತೆಗೆ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ನವೀನ್ ಸುವರ್ಣ ಛಾಯಾಗ್ರಹಣ, ಎಪಿಓ ಸಂಗೀತ ನಿರ್ದೇಶನ, ಶ್ರೀನಿವಾಸ್ ಕಲಾಲ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಧನುಕುಮಾರ್, ಜೈ ಮಾಸ್ಟರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
Ad
Virata Bilwa- Sonal Monteiro: ಲವ್ ಮ್ಯಾಟ್ರು ತೆರೆಗೆ ಸಿದ್ದ
Veshagalu Movie: ಜೋಗತಿ ವೇಷದಲ್ಲಿ ಕಿಟ್ಟಿ ; ಟೈಟಲ್ ಟೀಸರ್ ರಿಲೀಸ್
Elumale: ಆರು ತಿಂಗಳಲ್ಲಿ ಒಂದೊಳ್ಳೆ ಸಿನಿಮಾ ಮಾಡೋದು ಹೇಗೆ?: ತರುಣ್ ಸುಧೀರ್
ಸಿನಿಮಾ ತಯಾರಿ: ಎಲ್ಲಾ ವಿಭಾಗಗಳು ಕೈ ಜೋಡಿಸಿದಾಗ ಮಾತ್ರ ಸಾಧ್ಯ: ರೋಹಿತ್ ಪದಕಿ
Sandalwood: ಇಂದು ‘ಫಸ್ಟ್ ಡೇ ಫಸ್ಟ್ ಶೋ’ ತೆರೆಗೆ
You seem to have an Ad Blocker on.
To continue reading, please turn it off or whitelist Udayavani.