ಒಂಟೆ ಮೇಲೆ ವಿಕ್ರಮ್‌ ಫೈಟು

ಮರುಭೂಮಿಯಲ್ಲಿ ತ್ರಿವಿಕ್ರಮನ ಸಾಹಸ

Team Udayavani, Dec 31, 2019, 7:04 AM IST

vikram

ರವಿಚಂದ್ರನ್‌ ಪುತ್ರ ವಿಕ್ರಮ್‌ ಅಭಿನಯದ “ತ್ರಿವಿಕ್ರಮ’ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆರಂಭದಿಂದಲೂ ಒಂದಲ್ಲ, ಒಂದು ವಿಶೇಷ ಸುದ್ದಿ ಮಾಡುತ್ತಲೇ ಬಂದಿರುವ “ತ್ರಿವಿಕ್ರಮ’ ಈಗ ಮತ್ತೂಂದು ಹೊಸ ಸುದ್ದಿಗೆ ಕಾರಣವಾಗಿದೆ. ಹೌದು, ರಾಜಸ್ತಾನದಲ್ಲಿ ಚಿತ್ರೀಕರಣಗೊಂಡ “ತ್ರಿವಿಕ್ರಮ’ ಅಲ್ಲೊಂದು ವಿಶೇಷವಾದ ಸಾಹಸ ಮಾಡುವ ಮೂಲಕ ಸದ್ದು ಮಾಡಿದೆ. ಅದು ಒಂಟೆ ಮೇಲೆ ನಡೆಯೋ ಸಾಹಸ. ಚಿತ್ರಗಳಲ್ಲಿ ಸಾಂಗ್‌ ಮೇಕಿಂಗ್‌ಗೆ ಹೆಚ್ಚು ಆದ್ಯತೆ ಸಹಜ.

ಆದರೆ, “ತ್ರಿವಿಕ್ರಮ’ ಹಾಡುಗಳಷ್ಟೇ ಅಲ್ಲ, ಸಾಹಸ ದೃಶ್ಯದಲ್ಲೂ ಸಾಹಸ ಮೆರೆದಿದೆ ಎಂಬುದು ವಿಶೇಷ. ಒಂಟೆ ಮೇಲಿನ ಫೈಟ್‌ ಮತ್ತು ಒಂಟೆಗಳ ಮೂಲಕ ನಡೆಯುವ ಚೇಸಿಂಗ್‌ ದೃಶ್ಯಗಳು ಚಿತ್ರದ ಹೈಲೈಟ್‌ಗಳಲ್ಲೊಂದು. ಸಾಮಾನ್ಯವಾಗಿ ಬೈಕ್‌, ಜೀಪ್‌, ವಾಟರ್‌, ಸ್ಕೈ, ಕುದುರೆ, ಆನೆ ಹೀಗೆ ನಾನಾ ರೀತಿಯಲ್ಲಿ ಸ್ಟಂಟ್‌, ಚೇಸಿಂಗ್‌ ಕಾಮನ್‌ ಆಗಿರುತ್ತೆ. ಆದರೆ, ಇವೆಲ್ಲವುಗಳಿಗಿಂತ ಭಿನ್ನವಾಗಿಯೇ ಇರಬೇಕೆಂಬ ಕಾರಣದಿಂದ ನಿರ್ದೇಶಕ ಸಹನಾ ಮೂರ್ತಿ ಅವರು, ತಮ್ಮ ಚಿತ್ರದಲ್ಲಿ ಒಂಟೆಗಳ ಮೇಲೆ ಫೈಟ್‌ ಸೀನ್‌ ಮಾಡಿಸಿದ್ದಾರೆ.

ಅಂದಹಾಗೆ, ಇದು ಕನ್ನಡದಲ್ಲಿ ಮೊದಲ ಪ್ರಯತ್ನ ಎನ್ನಬಹುದು. ಫೈಟ್‌ ಜೊತೆಯಲ್ಲಿ ಒಂಟೆಗಳನ್ನು ಬಳಸಿಕೊಂಡು ಚೇಸಿಂಗ್‌ ದೃಶ್ಯಗಳನ್ನೂ ಸೆರೆ ಹಿಡಿಯಲಾಗಿದೆ. ಅಷ್ಟಕ್ಕೂ ಒಂಟೆಗಳನ್ನು ಬಳಸಿಕೊಂಡು ಸಾಹಸ ದೃಶ್ಯಗಳನ್ನು ಸಂಯೋಜಿಸಿರೋದು ವಿಜಿ ಮಾಸ್ಟರ್‌. “ಸೈರಾ’, “ದಬಾಂಗ್‌’, “ಬಾಡಿಗಾರ್ಡ್‌’, “ಪೋಕಿರಿ’ ಸೇರಿದಂತೆ ಹಲವು ಸೂಪರ್‌ ಹಿಟ್‌ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ಖ್ಯಾತಿ ವಿಜಿ ಮಾಸ್ಟರ್‌ ಅವರದ್ದು.

ಒಂಟೆ ಮೇಲೆ ಕೂತು ಸಾಗುವುದೇ ಕಷ್ಟ ಇರುವಾಗ, ಅವುಗಳ ಮೇಲೆ ಕುಳಿತು ಫೈಟ್‌ ಮಾಡೋದು ಸುಲಭದ ಕೆಲಸವಲ್ಲ. ನಾಯಕ ವಿಕ್ರಮ್‌ ಹಾಗು ಖಳನಟರು ಒಂಟೆಗಳ ಮೇಲೆ ಗಂಟೆಗಟ್ಟಲೆ ಕುಳಿತುಕೊಂಡು ಸಾಹಸ ಮಾಡಿದ್ದಾರೆ. ಈ ಸಾಹಸ ಚಿತ್ರೀಕರಣಕ್ಕೆ ಸುಮಾರು 15 ದಿನಗಳ ಕಾಲ ನಟಿ ಆಕಾಂಕ್ಷ ಶರ್ಮಾ, ಸಾಧು ಕೋಕಿಲ, ಬಾಲಿವುಡ್‌ ನಟ ರೋಹಿತ್‌ ರಾಯ್‌ ಸೇರಿದಂತೆ ಚಿತ್ರತಂಡ ರಾಜಸ್ಥಾನದಲ್ಲಿ ಕೆಲಸ ಮಾಡಿದೆ.

ಚಿತ್ರೀಕರಣ ವೇಳೆ ಒಂಟೆಗಳಿಗೆ ಯಾವುದೇ ತೊಂದರೆ ಆ ಗದಂತೆ ನೋಡಿಕೊಂಡಿರುವುದು ಚಿತ್ರತಂಡದ ಕಾಳಜಿ ತೋರಿಸುತ್ತದೆ. ಗೌರಿ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ಸೋಮಣ್ಣ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತವಿದೆ. ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದೆ. ರಾಜು ಸುಂದರಂ, ಪ್ರಭುದೇವ, ಕಲೈ ನೃತ್ಯ ನಿರ್ದೇಶನವಿದೆ.

Ad

ಟಾಪ್ ನ್ಯೂಸ್

Feed stray dogs at home: Supreme Court

Stray Dogs: ಬೀದಿ ನಾಯಿಗೆ ಮನೆಯಲ್ಲೇ ಆಹಾರ ನೀಡಿ: ಸುಪ್ರೀಂ ಕೋರ್ಟ್

Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ

Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ

1-aa-aa-bll

Bollywood;ಮೊದಲ ಮಗುವಿನ ಸಂಭ್ರಮದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ದಂಪತಿ

baby 2

Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!

Rcb-highcourt

ಐಪಿಎಲ್‌ ಕಾಲ್ತುಳಿತ ಪ್ರಕರಣ: ಸ್ಥಿತಿಗತಿ ವರದಿ ಆರ್‌ಸಿಬಿ, ಕೆಎಸ್‌ಸಿಎ ಜತೆ ಹಂಚಲು ನಿರ್ದೇಶನ

Surya-Tejasvi-MP

ರಾಜ್ಯ ಸರ್ಕಾರ ಭೂಸ್ವಾಧೀನ ಕೈ ಬಿಟ್ಟಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ಅಸಮಾಧಾನ 

drowned

ಗಂಗೊಳ್ಳಿ ದೋಣಿ ದುರಂತ; ಓರ್ವ ಮೀನುಗಾರನ ಶ*ವ ಪತ್ತೆ: ಮುಂದುವರಿದ ಹುಡುಕಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sarojaDevi–Funeral

Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ

ʼKantara Chapter-1ʼ ಪ್ರಚಾರಕ್ಕೆ ಕೌಂಟ್‌ಡೌನ್ ಶುರು.. ಅಪ್ಡೇಟ್‌ ಕೊಟ್ಟ ಹೊಂಬಾಳೆ

ʼKantara Chapter-1ʼ ಪ್ರಚಾರಕ್ಕೆ ಕೌಂಟ್‌ಡೌನ್ ಶುರು.. ಅಪ್ಡೇಟ್‌ ಕೊಟ್ಟ ಹೊಂಬಾಳೆ

Sarojadevi-1

ಬೆಳ್ಳಿಪರದೆಯ ಬೆರಗು ಕರುನಾಡಿನ ಮಹಿಳಾ ಸೂಪರ್‌ಸ್ಟಾರ್‌ ಬಿ.ಸರೋಜಾ ದೇವಿ

Sarojadevi-Funeral

ಅಭಿನಯ ಸರಸ್ವತಿ, ಹಿರಿಯ ನಟಿ ಬಿ.ಸರೋಜಾದೇವಿ ನಿಧನಕ್ಕೆ ಗಣ್ಯರ ಕಂಬನಿ, ಇಂದು ಅಂತ್ಯಕ್ರಿಯೆ 

1-aa-aa-aa

ಸರೋಜಾದೇವಿ ಕನ್ನಡದ ಪ್ರಥಮ ಲೇಡಿ ಸೂಪರ್‌ಸ್ಟಾರ್‌

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Feed stray dogs at home: Supreme Court

Stray Dogs: ಬೀದಿ ನಾಯಿಗೆ ಮನೆಯಲ್ಲೇ ಆಹಾರ ನೀಡಿ: ಸುಪ್ರೀಂ ಕೋರ್ಟ್

Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ

Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ

1-aa-aa-bll

Bollywood;ಮೊದಲ ಮಗುವಿನ ಸಂಭ್ರಮದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ದಂಪತಿ

baby 2

Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!

police

Bengaluru;ವಿಮಾನ, ಬಸ್‌ನಲ್ಲಿ ಮಾದಕ ವಸ್ತು ತರಿಸುತ್ತಿದ್ದ 3 ಮಹಿಳೆಯರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.