ಇಂದು ವಿಕ್ರಾಂತ್ ರೋಣ ಟೀಸರ್ ರಿಲೀಸ್
Team Udayavani, Apr 2, 2022, 9:23 AM IST
ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಟೀಸರ್ ಇಂದು ಬಿಡುಗಡೆಯಾಗುತ್ತಿದ್ದು, ಇದಕ್ಕೆ ಪರಭಾಷಾ ಸ್ಟಾರ್ ನಟರು ಸಾಥ್ ನೀಡುತ್ತಿದ್ದಾರೆ. ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಜೊತೆಗೆ ಇನ್ನೂ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಈಗ ಆಯಾ ಭಾಷೆಯ ಟೀಸರ್ ಅನ್ನು ಅಲ್ಲಿನ ಸ್ಟಾರ್ ನಟರು ರಿಲೀಸ್ ಮಾಡುತ್ತಿದ್ದಾರೆ. ಹಿಂದಿ ಟೀಸರ್ ಅನ್ನು ಸಲ್ಮಾನ್ ಖಾನ್, ತೆಲುಗಿನಲ್ಲಿ ಚಿರಂಜೀವಿ, ತಮಿಳಿನಲ್ಲಿ ಸಿಂಬು ಹಾಗೂ ಮಲ ಯಾಳಂ ಟೀಸರ್ ಅನ್ನು ಮೋಹನ್ ಲಾಲ್ ರಿಲೀಸ್ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
ಅಂದಹಾಗೆ, ಈ ಮೊದಲು ದುಬೈನ ಬುರ್ಜ್ ಖಲೀಫಾದಲ್ಲಿ ಚಿತ್ರದ ಪೋಸ್ಟರ್ ರಿಲೀಸ್ ಮಾಡುವ ಮೂಲ ಕ ದಾಖಲೆ ಬರೆದಿದ್ದ ಚಿತ್ರ, ಕನ್ನಡ, ಹಿಂದಿ, ತೆಲುಗು,ತಮಿಳು ಸೇರಿದಂತೆ ಒಟ್ಟೂ 10ಕ್ಕೂ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿ ಹೊರಹೊಮ್ಮಿರುವ ಈ ಚಿತ್ರ 3ಡಿ ಮೂಲಕವೂ ತೆರೆಗೆ ಬರಲಿದೆ.
ಚಿತ್ರದ ಹಾಡೊಂದರಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಸುದೀಪ್ ಜೊತೆ ಹೆಜ್ಜೆ ಹಾಕಿದ್ದಾರೆ. ಶಾಲಿನಿ ಜಾಕ್ ಮಂಜು ಹಾಗೂ ಅಲಂಕಾರ್ ಪಾಂಡಿಯನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ, ಮಧುಸೂಧನ್ ರಾವ್ ಎಂಬ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ. ಅನೂಪ್ ಭಂಡಾರಿ ನಿರ್ದೇಶನ, ಬಿ. ಅಜನೀಶ್ ಲೋಕ್ ನಾಥ್ ಸಂಗೀತ ಸಂಯೋಜನೆ, ವಿಲಿಯಂ ಡೇವಿಡ್ ಛಾಯಾಗ್ರಹಣ, ಆಶಿಕ್ ಕುಸುಗೊಳ್ಳಿ ಸಂಕಲನ ಚಿತ್ರಕ್ಕಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ