

Team Udayavani, Jul 13, 2024, 12:45 PM IST
ಕೆಜಿಎಫ್ ಸಿನಿಮಾಕ್ಕಾಗಿ ತಮ್ಮ ಲುಕ್ ಬದಲಿಸಿದ್ದ ಯಶ್ ಅಲ್ಲಿಂದ ಇಲ್ಲಿಯವರೆಗೆ ಅದೇ ಲುಕ್‌ನಲ್ಲಿದ್ದಾರೆ. ಉದ್ದನೆಯ ಗಡ್ಡ, ಕೂದಲಿನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದ ಯಶ್ ಈಗ ಗೆಟಪ್ ಬದಲಿಸಿದ್ದಾರೆ. ಅವರ ಹೇರ್ ಸ್ಟೈಲ್ ಬದಲಾಗಿದೆ. ಸದ್ಯ ಯಶ್ ಅವರ ಹೊಸ ಗೆಟಪ್ ಫೋಟೋ ಹೊರಬಿದ್ದಿದ್ದು, ವೈರಲ್ ಆಗಿದೆ.
ಅಂದಹಾಗೆ, ಯಶ್ ಸದ್ಯ “ಟಾಕ್ಸಿಕ್’ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಹಾಗಾಗಿ, ಹೇರ್‌ಸ್ಟೈಲ್ ಬದಲಿಸಿದ್ದಾರೆ. ಉದ್ದನೆಯ ಕೂದಲನ್ನು ಟ್ರಿಮ್, ಹೊಸ ಲುಕ್ ಕೊಟ್ಟಿದ್ದಾರೆ. ಯಶ್ ಅವರಿಗೂ ಮುಕೇಶ್ ಅಂಬಾನಿ ಮಗನ ಮದುವೆಗೆ ಆಮಂತ್ರಣ ಸಿಕ್ಕಿದೆ. ಹೀಗಾಗಿ, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಮದುವೆ ಕಾರ್ಯಕ್ರಮಕ್ಕೆ ಯಶ್ ತೆರಳಿದ್ದಾರೆ. ಈ ವೇಳೆ ಅವರು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಹೇರ್‌ಸ್ಟೈಲ್ ಗಮನ ಸೆಳೆದಿದೆ.
ಯಶ್ ಅವರ ಹೊಸ ಲುಕ್ ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದರ ಜೊತೆಗೆ ಯಶ್ “ಟಾಕ್ಸಿಕ್’ನಲ್ಲಿ ಬಿಝಿಯಾಗಿರು ವುದು ಕೂಡಾ ಗೊತ್ತಾಗಿದೆ.
ಇನ್ನು, ಯಶ್ ಅವರ “ಟಾಕ್ಸಿಕ್’ ಸಿನಿಮಾದಲ್ಲಿ ನಯನಾತಾರಾ ಕೂಡಾ ನಟಿಸುತ್ತಿದ್ದಾರೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಯಶ್ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತ ಹಾಗೂ ಲಂಡನ್ ನಲ್ಲಿ ಒಟ್ಟು 200 ದಿನಗಳ ಕಾಲ ಟಾಕ್ಸಿಕ್ ಚಿತ್ರೀಕರಣ ನಡೆಯಲಿದೆ. ಇದರಲ್ಲಿ ಕನಿಷ್ಠ 150 ದಿನಗಳ ಚಿತ್ರೀಕರಣ ಲಂಡನ್ ಸುತ್ತಮುತ್ತ ನಡೆಯಲಿದೆ.
Ad
Kannada Movies: ಟ್ರೇಲರ್‌ನಲ್ಲಿ ʼಜೂನಿಯರ್ʼ, ʼಎಕ್ಕʼ ಮಿಂಚು
Toxic Movie: ಯಶ್ ʼಟಾಕ್ಸಿಕ್ʼಗೆ ಮ್ಯೂಸಿಕ್ ನೀಡಲು ದೊಡ್ಡ ಸಂಭಾವನೆ ಕೇಳಿದ ಅನಿರುದ್ಧ್?
SarojaDevi;ಯಶಸ್ಸಿನ ಉತ್ತುಂಗದಲ್ಲೇ ಮದುವೆ..ಪತಿ ನಿಧನ,ಕಷ್ಟದಲ್ಲೇ ದಿನ ಕಳೆದ ಗಟ್ಟಿಗಿತ್ತಿ
Veteran actress B.Saroja Devi: ಕನ್ನಡದ ಹಿರಿಯ ನಟಿ ಬಿ.ಸರೋಜಾ ದೇವಿ ವಿಧಿವಶ
Doora Theera Yaana: ಜೊತೆಯಾಗಿ ಹಿತವಾಗಿ…
You seem to have an Ad Blocker on.
To continue reading, please turn it off or whitelist Udayavani.