

Team Udayavani, Nov 28, 2023, 5:03 PM IST
ಕೊಚ್ಚಿ: ʼಲಾಲ್ ಸಿಂಗ್ ಚಡ್ಡಾʼ ಸಿನಿಮಾದ ಬಳಿಕ ಬಾಲಿವುಡ್ ನಟ ಆಮಿರ್ ಖಾನ್ ಅವರು ನಟನೆಗೆ ಬ್ರೇಕ್ ಕೊಟ್ಟಿದ್ದಾರೆ. ಅವರು ನಿರ್ಮಾಣದತ್ತ ಮುಖ ಮಾಡಿದ್ದಾರೆ. ಸದ್ಯ ಅವರ ನಟನೆ ಬಗ್ಗೆ ಮತ್ತೊಂದು ಅಪ್ಡೇಟ್ ವೊಂದು ಹೊರಬಿದ್ದಿದೆ.
2022 ರಲ್ಲಿ ಮಾಲಿವುಡ್ ನಲ್ಲಿ ಬಂದ ಬಾಸಿಲ್ ಜೋಸೆಫ್ – ದರ್ಶನ ರಾಜೇಂದ್ರನ್ ಅಭಿನಯದ ʼʼಜಯ ಜಯ ಜಯ ಜಯ ಹೇ” ಹಿಟ್ ಆಗಿತ್ತು. ಮಹಿಳಾ ಪ್ರಧಾನ ಕಥಾಹಂದರದ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಸಿಡುಕ ಗಂಡನ ಪಾತ್ರದಲ್ಲಿ ಬಾಸಿಲ್ ಜೋಸೆಫ್ ಕಾಣಿಸಿಕೊಂಡಿದ್ದರು. ಕರಾಟೆ ಕಲಿಯುವ ಹೆಂಡತಿಯಾಗಿ ದರ್ಶನ ಕಾಣಿಸಿಕೊಂಡಿದ್ದರು.
ಕಾಮಿಡಿ ಹಾಗೂ ಸಾಮಾಜಿಕ ಸಂದೇಶವನ್ನು ಸಾರುವ ಈ ಸಿನಿಮಾಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಇದೇ ಸಿನಿಮಾದ ಬಾಲಿವುಡ್ ನಲ್ಲಿ ರಿಮೇಕ್ ಆಗಲಿದೆ ಎನ್ನಲಾಗಿದೆ. ಬಾಲಿವುಡ್ ಆಮಿರ್ ಖಾನ್ ಅವರು ಈ ಸಿನಿಮಾವನ್ನು ನೋಡಿ ಬಾಸಿಲ್ ಹಾಗೂ ದರ್ಶನ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದರು.
ಬಾಲಿವುಡ್ ಗೆ ʼʼಜಯ ಜಯ ಜಯ ಜಯ ಹೇ” ರಿಮೇಕ್ ಆಗಲಿದ್ದು, ಈ ಸಿನಿಮಾದಲ್ಲಿ ಆಮಿರ್ ಖಾನ್ ಬಾಸಿಲ್ ಅವರ ಸಿಡುಕ ಗಂಡನ ಪಾತ್ರವನ್ನು ಮಾಡಲಿದ್ದಾರೆ ಎನ್ನುವ ಗಾಸಿಪ್ ಸಿನಿವಲಯದಲ್ಲಿ ಹರಿದಾಡಿದೆ.
ಈ ಬಗ್ಗೆ ಮಾತನಾಡುವ ಸಿನಿಮಾದ ನಿರ್ಮಾಪಕರಾದ ಲಕ್ಷ್ಮಿ ವಾರಿಯರ್ ಮತ್ತು ಗಣೇಶ್ ಮೆನನ್ “ಆಮಿರ್ ಅವರ ತಂಡವು ಚಿತ್ರದ ರೀಮೇಕ್ ಹಕ್ಕುಗಳನ್ನು ಪಡೆದುಕೊಳ್ಳುವ ಅಂತಿಮ ಹಂತದಲ್ಲಿದೆ. ಅವರು ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ನಿರ್ಮಾಪಕರಾಗಿರುತ್ತಾರೆ. ಸಿನಿಮಾದಲ್ಲಿ ಯುವ ಪಾತ್ರವರ್ಗವಿರಲಿದೆ” ಎಂದಿದ್ದಾರೆ.
“ಉತ್ತರ ಪ್ರದೇಶದಲ್ಲಿ ಸಿನಿಮಾ ಸಾಗಲಿದೆ. ಇದರ ಕಥಾವಸ್ತುವಿನಲ್ಲಿ ಕೊಂಚ ಬದಲಾವಣೆ ಇರಲಿದೆ” ಎಂದು ಅವರು ಹೇಳಿದ್ದಾರೆ.
ಸದ್ಯ ʼʼಜಯ ಜಯ ಜಯ ಜಯ ಹೇ” ಸಿನಿಮಾ ಡಿಸ್ನಿ+ ಹಾಟ್ ಸ್ಟರ್ ನಲ್ಲಿ ಸ್ಟ್ರೀಮ್ ಆಗುತ್ತಿದೆ.
Ad
ಆ ನಟಿ ʼಬಿಗ್ ಬಾಸ್ʼ ಮನೆಯಲ್ಲೇ ಆತ್ಮಹ*ತ್ಯೆಗೆ ಯತ್ನಿಸಿದ್ದರು- ಶಾಕಿಂಗ್ ಸಂಗತಿ ರಿವೀಲ್
Actress: ಕೊಳೆತ ಸ್ಥಿತಿಯಲ್ಲಿ ಖ್ಯಾತ ನಟಿ, ಮಾಡೆಲ್‌ನ ಶವ ಪತ್ತೆ – ಫ್ಯಾನ್ಸ್ ಶಾಕ್
ನಟಿ ಆಲಿಯಾ ಭಟ್ಗೆ 77 ಲಕ್ಷ ರೂಪಾಯಿ ವಂಚನೆ; ಬೆಂಗಳೂರಿನಲ್ಲಿ ಮಾಜಿ ಆಪ್ತ ಕಾರ್ಯದರ್ಶಿ ಬಂಧನ
Ramayana Movie: ʼರಾಮಾಯಣʼ ಪಾರ್ಟ್ 1,2 ಗೆ ರಣ್ಬೀರ್ ಪಡೆಯುವ ಸಂಭಾವನೆ ಎಷ್ಟು?
Sardaar Ji 3; ದಿಲ್ಜಿತ್ ದೋಸಾಂಜ್ ಗೆ ಪಂಜಾಬ್‌ನ ವಿವಿಧ ಪಕ್ಷಗಳ ಸಿಖ್ ನಾಯಕರ ಬೆಂಬಲ
You seem to have an Ad Blocker on.
To continue reading, please turn it off or whitelist Udayavani.