
Kollywood: ಅನಾರೋಗ್ಯ: ಹಿರಿಯ ನಟ ವಿಜಯಕಾಂತ್ ಆಸ್ಪತ್ರೆಗೆ ದಾಖಲು; ಐಸಿಯುನಲ್ಲಿ ಚಿಕಿತ್ಸೆ
Team Udayavani, Nov 20, 2023, 5:07 PM IST

ಚೆನ್ನೈ: ಕಾಲವುಡ್ ಸಿನಿಮಾರಂಗದ ಹಿರಿಯ ನಟ – ರಾಜಕಾರಣಿ ವಿಜಯಕಾಂತ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ನಿರಂತರ ಕೆಮ್ಮು ಮತ್ತು ಗಂಟಲು ನೋವಿನಿಂದಾಗಿ 71 ವರ್ಷದ ವಿಜಯಕಾಂತ್ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಇದು ಸುಳ್ಳೆಂದು ಅವರ ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ.
ಇದನ್ನೂ ಓದಿ: ಎತ್ತಿನ ಗಾಡಿಯಲ್ಲಿ ಸುದೀಪ್ ಮನೆಗೆ ಬಂದು Bigg Boss ಗೆ ನನ್ನನ್ನೂ ಕಳುಹಿಸಿ ಎಂದ ವ್ಯಕ್ತಿ.!
ವಿಜಯಕಾಂತ್ ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದ್ದರೂ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಮಿಳುನಾಡಿನ ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ ಎಂದು ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ತಿಳಿಸಿದೆ.
ಶೀಘ್ರದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿದೆ.
ಕಾಲಿವುಡ್ ನಲ್ಲಿ 150 ಕ್ಕೂ ಹೆಚ್ಚಿನ ಸಿನಿಮಾಗಳನ್ನು ಮಾಡಿರುವ ಅವರು, 2005 ರಲ್ಲಿ ತಮ್ಮ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಪಕ್ಷದ ಮೂಲಕ ರಾಜಕೀಯವಾಗಿಯೂ ಗುರುತಿಸಿಕೊಂಡಿರುವ ಅವರು, 2011-2016 ರವರೆಗೆ ರಾಜ್ಯದ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
ʼಹೋನೆಸ್ಟ್ ರಾಜ್ʼ, ʼ ತ್ಯಾಗಂʼ,ʼ ತಮಿಜ್ ಸೆಲ್ವನ್ʼ, ಕ್ಯಾಪ್ಟನ್ ಪ್ರಭಾಕರನ್’, ʼ ಪುಲನ್ ವಿಸಾರಣೈʼ..ಹೀಗೆ ಸುಮಾರು 150 ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fighter Teaser ಔಟ್: ಇಂಟರ್‌ನೆಟ್ ನಲ್ಲಿ ಬೆಂಕಿ ಹಚ್ಚಿದ ಹೃತಿಕ್ – ದೀಪಿಕಾ ಕೆಮೆಸ್ಟ್ರಿ

Tollywood: ಗೆಳತಿ ಆತ್ಮಹತ್ಯೆ ಪ್ರಕರಣದಲ್ಲಿ ʼಪುಷ್ಪʼ ನಟನ ಬಂಧನ; ಚಿತ್ರೀಕರಣಕ್ಕೆ ಅಡ್ಡಿ

Welcome to ‘Toxic’ World: ರಾಕಿಭಾಯ್ ಹೊಸ ಸಿನಿಮಾದ ಟೈಟಲ್ ಬಿಡುಗಡೆ

Mumbai: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನ ಹಿರಿಯ ನಟ ʻಜೂನಿಯರ್ ಮೆಹಮೂದ್ʼ ನಿಧನ

Viral ‘drunk’ video; ವದಂತಿಗಳಿಗೆ ತೆರೆ ಎಳೆದ ಸನ್ನಿ ಡಿಯೋಲ್