
‘ಟ್ರೋಲ್ ಮಾಡ್ಬೇಡಿ ಪ್ಲೀಸ್’… ಟ್ರೋಲಿಗರಿಗೆ ಪರಿಪರಿಯಾಗಿ ಕೇಳಿಕೊಂಡ ನಟಿ
Team Udayavani, Feb 17, 2021, 2:04 PM IST

ಹೈದರಾಬಾದ್ : ಟಾಲಿವುಡ್ ಚಿತ್ರನಟಿ ಮೊನಾಲ್ ಗಜ್ಜರ್ ಸೋಷಿಯಲ್ ಮೀಡಿಯಾಗಳಲ್ಲಿಯ ಟ್ರೋಲ್ ಗಳಿಗೆ ಹೈರಾಣಾಗಿದ್ದಾರೆ. ದಯವಿಟ್ಟು ನನ್ನನ್ನು ಟ್ರೋಲ್ ಮಾಡಬೇಡಿ ಎಂದು ಟೀಕಾಕಾರರಿಗೆ ಮನವಿ ಮಾಡಿದ್ದಾರೆ.
ತೆಲುಗು ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೊನಾಲ್ ಅವರಿಗೆ ಸಾಕಷ್ಟು ಸಿನಿಮಾಗಳ ಆಫರ್ ಬಂದಿವೆ. ಅವುಗಳಿಗೆ ತಮಗೆ ಇಷ್ಟವಾದವುಗಳನ್ನು ಮೊನಾಲ್ ಆಯ್ದುಕೊಂಡು ನಟಿಸುತ್ತಿದ್ದಾರೆ. ಇತ್ತ ಕೆಲವು ವೆಬ್ ಸೀರಿಸ್ ಗಳಲ್ಲಿಯೂ ಅಭಿನಯಿಸಿದ್ದಾರೆ. ಆದರೆ, ಇವರ ಚಿತ್ರಗಳ ಆಯ್ಕೆ ಕುರಿತು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟೀಕೆ ಮಾಡ್ತಿದ್ದಾರೆ. ಬಾಯಿಗೆ ಬಂದ ಹಾಗೆ ಟ್ರೋಲ್ ಮಾಡಿದ್ದಾರೆ.
ಪ್ರಾರಂಭದಲ್ಲಿ ಮೊನಾಲ್ ಟೀಕೆಗಳಿಗೆ ಕಿವಿಗೊಡದೆ ಸುಮ್ಮನಿದ್ದರು. ಈಗ ಅವರ ಸಹನೆಯ ಕಟ್ಟೆ ಒಡೆದಿದೆ. ಇನ್ಮುಂದೆ ಸುಮ್ಮನಿದ್ದರೆ ಪ್ರಯೋಜನವಿಲ್ಲ ಎಂದು ಅರಿತ ನಟಿಮಣಿ, ತಾವೇ ಅಂಗಳಕ್ಕೆ ಇಳಿದು, ಟ್ರೋಲಿಗರಿಗೆ ಮನವಿ ಮಾಡಿದ್ದಾರೆ. ದಯವಿಟ್ಟು ಯಾರನ್ನೂ ಟ್ರೋಲ್ ಮಾಡಬೇಡಿ. ‘ನನ್ನ ಸಿನಿಮಾ ನನ್ನ ಆಯ್ಕೆ’ ಎಂದಿದ್ದಾರೆ.
‘ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಿ ಅಂತಾ ನಂಗೆ ಗೊತ್ತು. ನನ್ನ ಹಾಗೂ ನನ್ನ ಲೈಫ್ ಬಗ್ಗೆ ನೀವು ತುಂಬಾ ಕಾಳಜಿ ತೆಗೆದುಕೊಳ್ಳುತ್ತೀರಿ. ನಾನು ಏನು ಮಾಡುತ್ತಿದ್ದೇನೆ ಅಂತಾ ನಂಗೆ ಗೊತ್ತು. ಅದಕ್ಕಾಗಿ ನನ್ನನ್ನು ಗೌರವಿಸಿ, ನಾನೂ ಕೂಡ ನಿಮಗೆ ಗೌರವ ನೀಡುತ್ತೇನೆ. ದಯವಿಟ್ಟು ಟ್ರೋಲ್ ಮಾಡಬೇಡಿ, ನಂಗೆ ಜಗಳ ಮಾಡಲು ಇಷ್ಟವಿಲ್ಲ’ ಎಂದಿದ್ದಾರೆ.
ಇನ್ನು ನಟಿ ಮೊನಾಲ್ ‘ತೆಲುಗು ಅಬ್ಬಾಯಿ ಗುಜರಾತ್ ಅಮ್ಮಾಯಿ ’ ವೆಬ್ ಸಿರಿಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ತುಂಬಾ ಹೆಸರು ಮಾಡಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sreeleela: ಪ್ರಭಾಸ್‌ಗೆ ಶ್ರೀಲೀಲಾ ನಾಯಕಿ!

Academy Awards: ಭಾರತದಿಂದ ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದ ಮಲಯಾಳಂನ “2018”

‘Leo’ ಆಡಿಯೋ ಬಿಡುಗಡೆ ಕಾರ್ಯಕ್ರಮ ರದ್ದು; ರಾಜಕೀಯ ಒತ್ತಡವೇ ಕಾರಣವೆಂದ ದಳಪತಿ ಫ್ಯಾನ್ಸ್

MM Keeravani: “ಭಾರತದಲ್ಲಿ ಸಂಗೀತ ತಾರೆಯರಿಲ್ಲ…” ಆಸ್ಕರ್ ವಿಜೇತ ಎಂಎಂ ಕೀರವಾಣಿ

Dadasaheb Phalke: ಹಿರಿಯ ನಟಿ ವಹೀದಾ ರೆಹಮಾನ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ