
ದೇಗುಲದ ಮುಂದೆ ʼಆದಿಪುರುಷ್ʼ ನಟಿಗೆ ಮುತ್ತು ಕೊಟ್ಟ ನಿರ್ದೇಶಕ: ಬಿಜೆಪಿ ನಾಯಕ ಕೆಂಡಾಮಂಡಲ
Team Udayavani, Jun 7, 2023, 2:33 PM IST

ಆಂಧ್ರ ಪ್ರದೇಶ: ಇದೇ ತಿಂಗಳ 16 ರಂದು ರಿಲೀಸ್ ಆಗಲಿರುವ ʼಆದಿಪುರುಷ್ʼ ಸಿನಿಮಾ ಸದ್ಯ ಬಿಟೌನ್ ನಲ್ಲಿ ಹಾಟ್ ಟಾಪಿಕ್. ಸಿನಿಮಾ ರಿಲೀಸ್ ಗೆ ದಿನಗಣನೆ ಬಾಕಿ ಉಳಿದಿದ್ದು ತಿರುಪತಿಯಲ್ಲಿ ಮಂಗಳವಾರ ರಾತ್ರಿ ಅದ್ಧೂರಿಯಾಗಿ ಪ್ರೀ – ರಿಲೀಸ್ ಇವೆಂಟ್ ನಡೆದಿದೆ.
ಪ್ರೀ – ರಿಲೀಸ್ ಇವೆಂಟ್ ನಲ್ಲಿ ʼಆದಿಪುರುಷ್ʼ ಸಿನಿಮಾದ ಅಂತಿಮ ಟ್ರೇಲರ್ ರಿಲೀಸ್ ಮಾಡಲಾಗಿದೆ. ಸದ್ಯ ಈ ಟ್ರೇಲರ್ ಸದ್ದು ಮಾಡುತ್ತಿದೆ. ಇದಾದ ಬಳಿಕ ಬುಧವಾರ ಮುಂಜಾನೆ (ಜೂ. 7 ರಂದು) ಸಿನಿಮಾ ತಂಡ ತಿರುಪತಿ ದೇವಸ್ಥಾನದ ದರ್ಶನವನ್ನು ಮಾಡಿದೆ.
ಸಿನಿಮಾದ ನಿರ್ದೇಶಕ ಓಂ ರಾವತ್ ಸಿನಿಮಾದ ನಾಯಕಿ ಕೃತಿ ಸೆನೋನ್ ಅವರಿಗೆ ವೆಂಕಟೇಶ್ವರ ದೇವಸ್ಥಾನದ ದರ್ಶನವನ್ನು ಮಾಡಿ ದೇಗುಲದ ಹೊರಗೆ ಬರುವಾಗ ಒಂದು ಅಪ್ಪುಗೆ ಕೊಟ್ಟು, ಸೆಲೆಬ್ರಿಟಿ ಸ್ಟೈಲ್ ನಂತೆ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಕೆಲವೊಂದು ಚರ್ಚೆಗೆ ಗ್ರಾಸವಾಗಿದೆ.
ಮುಖ್ಯವಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿ ರಮೇಶ್ ನಾಯ್ಡು ಈ ವಿಡಿಯೋ ಬಗ್ಗೆ “ಇಂತಹ ಪವಿತ್ರ ಸ್ಥಳದಲ್ಲಿ ನಿಮ್ಮ ಈ ಚೇಷ್ಟೆ ಬೇಕಿತ್ತಾ? ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮುಂದೆ ಚುಂಬಿಸುವುದು ಮತ್ತು ಅಪ್ಪಿಕೊಳ್ಳುವುದು ಅಗೌರವ ಮತ್ತು ಸ್ವೀಕಾರಾರ್ಹವಲ್ಲ ಎಂದು ಟ್ವೀಟ್ ಮಾಡಿದ್ದರು.
ಕೆಲ ಸಮಯದ ಬಳಿಕ ಈ ಟ್ವೀಟ್ ನ್ನು ಅವರು ಡಿಲೀಟ್ ಮಾಡಿದ್ದು, ಆ ಸಂಬಂಧ ಸ್ಕ್ರೀನ್ ಶಾಟ್ ವಿಡಿಯೋದೊಂದಿಗೆ ಶೇರ್ ಆಗುತ್ತಿದೆ.
Actress #KritiSanon and Director #OmRaut visited #Tirumala this morning to seek blessings.#Adipurush #AdipurushOnJune16th#ShreyasMedia #ShreyasGroup pic.twitter.com/qXs4IJGqni
— Shreyas Media (@shreyasgroup) June 7, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CBFC ವಿರುದ್ಧ ನಟ ವಿಶಾಲ್ ಲಂಚ ಆರೋಪ: ತನಿಖೆಗೆ I&B ಸಚಿವಾಲಯ ಆದೇಶ

Leo 2nd Song ರಿಲೀಸ್: “Badass” ಮೂಲಕ ಹೈಪ್ ಹೆಚ್ಚಿಸಿದ ʼಲಿಯೋದಾಸ್ʼ

Vivek Agnihotri ಅವರ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾಕ್ಕೆ ಪೈರಸಿ ಕಾಟ; HD ಕಾಪಿ ಲೀಕ್

Animal teaser ರಿಲೀಸ್: ʼಡಾರ್ಲಿಂಗ್ʼ ಎಂದು ರಶ್ಮಿಕಾಗೆ ಶುಭಕೋರಿದ ದೇವರಕೊಂಡ

Jawan ತಂಡದಿಂದ ಪ್ರೇಕ್ಷಕರಿಗೆ ʼಬೈ1 ಗೆಟ್ 1 ಫ್ರೀʼ ಟಿಕೆಟ್ ಆಫರ್ ಘೋಷಿಸಿದ ಶಾರುಖ್ ಖಾನ್