
SS Rajamouli: ಇಂಡಿಯನ್ ಸಿನಿಮಾದ ಬಯೋಪಿಕ್ ಹೇಳಲು ಹೊರಟ ರಾಜಮೌಳಿ; ಹೊಸ ಸಿನಿಮಾ ಅನೌನ್ಸ್
Team Udayavani, Sep 19, 2023, 11:01 AM IST

ಹೈದರಾಬಾದ್: ಭಾರತೀಯ ಸಿನಿಮಾರಂಗದ ಖ್ಯಾತ ನಿರ್ದೇಶಕ ಎಸ್. ಎಸ್ ರಾಜಮೌಳಿ ಮಂಗಳವಾರ(ಸೆ.19 ರಂದು) ಹೊಸ ಸಿನಿಮಾವೊಂದನ್ನು ಘೋಷಿಸಿದ್ದಾರೆ.
ʼಬಾಹುಬಲಿʼ, ʼಆರ್ ಆರ್ ಆರ್ʼ ಬಳಿಕ ಗ್ಲೋಬಲ್ ಮಟ್ಟದಲ್ಲಿ ಸಿನಿ ಮಂದಿಯ ಅಭಿಮಾನವನ್ನು ಗಳಿಸಿರುವ ರಾಜಮೌಳಿ ಅವರ ಸಿನಿಮಾ ಆಸ್ಕರ್ ಗೆದ್ದು ತಂದುಕೊಟ್ಟ ಹೆಮ್ಮೆ ಭಾರತಕ್ಕಿದೆ. ʼಆರ್ ಆರ್ ಆರ್ʼ ಸಿನಿಮಾದ ಬಳಿಕ ಅವರು ಮಹೇಶ್ ಬಾಬು ಅವರ ‘SSMB 29’ ಸಿನಿಮಾದ ತಯಾರಿಯಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಈ ಸಿನಿಮಾ ಹಾಲಿವುಡ್ ರೇಂಜ್ ನಲ್ಲಿ ಬರುತ್ತಿರುವುದರಿಂದ ಅದರ ತಯಾರಿ ಜೋರಾಗಿ ನಡೆಯುತ್ತಿದೆ.
ಈ ನಡುವೆ ಅವರು ಗಣೇಶ ಹಬ್ಬದಂದು ಹೊಸ ಸಿನಿಮಾವೊಂದನ್ನು ಅನೌನ್ಸ್ ಮಾಡಿದ್ದಾರೆ. ಭಾರತೀಯ ಸಿನಿಮಾರಂಗದ ಇತಿಹಾಸವನ್ನು ಹೇಳುವ ಕುರಿತಾದ ʼಮೇಡ್ ಇನ್ ಇಂಡಿಯಾʼ ಎನ್ನುವ ಬಯೋಪಿಕ್ ಸಿನಿಮಾವನ್ನು ರಾಜಮೌಳಿ ಅವರು ಘೋಷಿಸಿದ್ದಾರೆ.
ಅಂದಹಾಗೆ ಈ ಸಿನಿಮಾವನ್ನು ರಾಜಮೌಳಿ ಅವರು ನಿರ್ದೇಶನ ಮಾಡುತ್ತಿಲ್ಲ. ಈ ಸಿನಿಮಾವನ್ನು ನಿತಿನ್ ಕಕ್ಕರ್ ನಿರ್ದೇಶನ ಮಾಡುತ್ತಿದ್ದು, ರಾಜಮೌಳಿ ಅವರ ಮಗ ಎಸ್ ಎಸ್ ಕಾರ್ತಿಕೇಯ ಮತ್ತು ವರುಣ್ ಗುಪ್ತಾ ಎನ್ನುವವರು ಈ ಸಿನಿಮಾಕ್ಕೆ ಬಂಡವಾಳ ಹಾಕಲಿದ್ದಾರೆ. ಇದನ್ನು ರಾಜಮೌಳಿ ಅವರು ಅರ್ಪಿಸಲಿದ್ದಾರೆ.
ʼಮೇಡ್ ಇನ್ ಇಂಡಿಯಾʼ ‘ಭಾರತೀಯ ಸಿನಿಮಾದ ಹುಟ್ಟು ಮತ್ತು ಉದಯ’ದ ಕಥೆಯನ್ನು ಹೇಳಲಿದೆ.
“ನಾನು ಮೊದಲು ನಿರೂಪಣೆಯನ್ನು ಕೇಳಿದಾಗ, ಅದು ನನ್ನನು ಭಾವನಾತ್ಮಕವಾಗಿ ಸೆಳೆಯಿತು. ಬಯೋಪಿಕ್ ಮಾಡುವುದು ಕಠಿಣವಾಗಿದೆ. ಅದು ಭಾರತೀಯ ಸಿನಿಮಾದ ಪಿತಾಮಹನ ಬಗೆಗಿನ ಸಿನಿಮಾ ಇನ್ನು ಹೆಚ್ಚಿನ ಸವಾಲಿನ ಕೆಲಸವಾಗಿದೆ.ಇದನ್ನು ಹೇಳಲು ನಮ್ಮ ಹುಡುಗರು ಸಿದ್ಧರಾಗಿದ್ದಾರೆ. ಅಪಾರ ಹೆಮ್ಮೆಯಿಂದ ಅರ್ಪಿಸುತ್ತಿದ್ದೇನೆ” ಎಂದು ರಾಜಮೌಳಿ ಅವರು ಟ್ವಿಟರ್ ನಲ್ಲಿ ಬರೆದುಕೊಂಡು ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.
ಎಸ್ ಎಸ್ ರಾಜಮೌಳಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಅವರು ಶೀಘ್ರದಲ್ಲೇ ಮಹೇಶ್ ಬಾಬು ಅವರ ಮುಂಬರುವ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸವನ್ನು ಪ್ರಾರಂಭಿಸಲಿದ್ದಾರೆ.
ಈ ನಡುವೆ ಅವರು ಪ್ರಭಾಸ್ ಅವರ ʼಕಲ್ಕಿ 2898 ಎಡಿ’ ಚಿತ್ರದಲ್ಲಿ ಅತಿಥಿ ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅದು ಅಧಿಕೃತವಾಗಿಲ್ಲ.
When I first heard the narration, it moved me emotionally like nothing else.
Making a biopic is tough in itself, but conceiving one about the FATHER OF INDIAN CINEMA is even more challenging. Our boys are ready and up for it..:)
With immense pride,
Presenting MADE IN INDIA… pic.twitter.com/nsd0F7nHAJ— rajamouli ss (@ssrajamouli) September 19, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CBFC ವಿರುದ್ಧ ನಟ ವಿಶಾಲ್ ಲಂಚ ಆರೋಪ: ತನಿಖೆಗೆ I&B ಸಚಿವಾಲಯ ಆದೇಶ

Leo 2nd Song ರಿಲೀಸ್: “Badass” ಮೂಲಕ ಹೈಪ್ ಹೆಚ್ಚಿಸಿದ ʼಲಿಯೋದಾಸ್ʼ

Vivek Agnihotri ಅವರ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾಕ್ಕೆ ಪೈರಸಿ ಕಾಟ; HD ಕಾಪಿ ಲೀಕ್

Animal teaser ರಿಲೀಸ್: ʼಡಾರ್ಲಿಂಗ್ʼ ಎಂದು ರಶ್ಮಿಕಾಗೆ ಶುಭಕೋರಿದ ದೇವರಕೊಂಡ

Jawan ತಂಡದಿಂದ ಪ್ರೇಕ್ಷಕರಿಗೆ ʼಬೈ1 ಗೆಟ್ 1 ಫ್ರೀʼ ಟಿಕೆಟ್ ಆಫರ್ ಘೋಷಿಸಿದ ಶಾರುಖ್ ಖಾನ್
MUST WATCH
ಹೊಸ ಸೇರ್ಪಡೆ

World Cup; ಲೆಗ್ ಸ್ಪಿನ್ನರ್ ಚಾಹಲ್ ಕಡೆಗಣಿಸಿರುವುದು ತಪ್ಪು : ಯುವರಾಜ್ ಸಿಂಗ್

Mangaluru ಪ್ರತಿ ಟನ್ ಗೆ 150 ರೂ. ಬಾಡಿಗೆ ಏರಿಕೆ ಭರವಸೆ: ಮುಷ್ಕರ ಹಿಂತೆಗೆದ ಲಾರಿ ಯೂನಿಯನ್

ICC World Cup 2023; ಎಲ್ಲಾ ಹತ್ತು ತಂಡಗಳ ಆಟಗಾರರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Theft: ಶೂ ಬಾಕ್‌ನಲ್ಲಿದ್ದ ಮನೆ ಕೀ ಕದ್ದು ಆಭರಣ ದೋಚಿದ್ದ ಮಹಿಳೆ ಸೆರೆ

Cop In Trouble: ರೀಲ್ಸ್ ಮಾಡಲು ಡ್ಯೂಟಿ ವಾಹನ ನೀಡಿ ತೊಂದರೆಗೆ ಸಿಲುಕಿದ ಪೊಲೀಸ್ ಅಧಿಕಾರಿ