ರಜಿನಿ ಪುತ್ರಿ ಐಶ್ವರ್ಯಾ ಲಾಕರ್‌ನಿಂದ ಚಿನ್ನಾಭರಣ ಕಳವು: ಕೆಲಸದಾಳು, ಚಾಲಕನ ಮೇಲೆ ಸಂಶಯ

Team Udayavani, Mar 20, 2023, 10:34 AM IST

tdy-4

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ಹಿರಿಯ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ಲಾಕರ್‌ ನಿಂದ ಚಿನ್ನಾಭರಣ ಕಳುವುವಾದ ಬಗ್ಗೆ ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2019 ರಲ್ಲಿ ಸಹೋದರಿ ಸೌಂದರ್ಯ ಅವರ ಮದುವೆಗೆಂದು ಬಳಸಿದ್ದ ಸುಮಾರು 3.60 ಲಕ್ಷ ರೂ. ಮೌಲ್ಯದ 60 ಪವನ್‌ ಚಿನ್ನಾಭರಣ ಕಳ್ಳತನವಾಗಿದೆ.

ಸಹೋದರಿಯ ಮದುವೆಗೆ ಚಿನ್ನಾಭರಣವನ್ನು ಧರಿಸಿದ ಬಳಿಕ ಅದನ್ನು ಬೇರೆ ಬೇರೆ ನಿವಾಸದಲ್ಲಿ ಐಶ್ವರ್ಯಾ ಅವರು ಲಾಕರ್‌ ನಲ್ಲಿ ಇಟ್ಟಿದ್ದಾರೆ. ಆಗಸ್ಟ್ 21, 2021 ರಲ್ಲಿ ಮಾಜಿ ಪತಿ ಧನುಷ್‌ ಅವರ ನಿವಾಸದಲ್ಲಿ ಲಾಕರ್‌ ಇಟ್ಟಿದ್ದರು. ಸೆಪ್ಟೆಂಬರ್ 2021 ರಲ್ಲಿ ಅದನ್ನು ಚೆನ್ನೈನ ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ಗೆ ಸ್ಥಳಾಂತರಿಸಿದ್ದಾರೆ. ಇದಾದ ನಂತರ ಏಪ್ರಿಲ್ 2022 ರಲ್ಲಿ ತಮ್ಮ ಪೋಯಸ್ ಗಾರ್ಡನ್ ನಿವಾಸದಲ್ಲಿ ಲಾಕರ್‌ ನ್ನು ಇಟ್ಟಿದ್ದಾರೆ. ಲಾಕರ್‌ನ ಕೀಗಳು ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅವರ ಫ್ಲಾಟ್‌ನಲ್ಲಿ ಉಳಿದಿತ್ತು. ಲಾಕರ್‌ ನಲ್ಲಿ ಬೆಲೆಬಾಳುವ ಚಿನ್ನಾಭರಣಗಳು ಇರುವುದು ಮತ್ತು ಅದನ್ನು ಯಾವೆಲ್ಲಾ ಮನೆಯಲ್ಲಿ ಇಟ್ಟಿದ್ದಾರೆ ಎನ್ನುವುದರ ಬಗ್ಗೆ ಚಾಲಕ ಹಾಗೂ ಮನೆಯ ಕೆಲ ಕೆಲಸದಾಳುಗಳಿಗೆ ತಿಳಿದಿತ್ತು ಎಂದು ಐಶ್ವರ್ಯಾ ಎಫ್‌ ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಫೆ. 10,2023 ರಂದು ಐಶ್ವರ್ಯಾ ಲಾಕರ್‌ ತೆರೆದು ನೋಡಿದಾಗ ಅವರಿಗೆ ಶಾಕ್‌ ಆಗಿದೆ. ವಜ್ರದ ಸೆಟ್, ಪುರಾತನ ಕಾಲದ ಚಿನ್ನಾಭರಣಗಳು, ನವರತ್ನಂ ಸೆಟ್‌ಗಳು, ಬಳೆಗಳು ಸೇರಿದಂತೆ ಸುಮಾರು 3.60 ಲಕ್ಷ ರೂ.ಮೌಲ್ಯದ  60 ಪವನ್ ಚಿನ್ನಾಭರಣ ಕಳ್ಳತನವಾಗಿರುವುದನ್ನು ನೋಡಿದ್ದಾರೆ.

ತಾನು ಮನೆಯಿಂದ ದೂರವಿದ್ದಾಗ ಆಗಾಗ ತನ್ನ ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅವರ ಅಪಾರ್ಟ್ಮೆಂಟ್ ಗೆ ಭೇಟಿ ನೀಡುತ್ತಿದ್ದ ಕೆಲಸದಾಳು ಈಶ್ವರಿ, ಲಕ್ಷ್ಮಿ ಮತ್ತು ಚಾಲಕ ವೆಂಕಟ್, ಅವರ ಮೇಲೆ ತನಗೆ ಸಂಶಯವಿದೆ ಎಂದು ದೂರಿನಲ್ಲಿ ಹೇಳಿದ್ದು,ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಐಶ್ವರ್ಯಾ ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

lok adalat

ನ್ಯಾಯಾಧೀಶರ ಘನತೆ, ಗೌರವಕ್ಕೆ ಧಕ್ಕೆ ಸರಿಯಲ್ಲ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ… ಹೊಡೆದಾಟ

police crime

Goa ; ಅಪಹರಣಕ್ಕೊಳಗಾದ ಬಾಲಕಿಯರಿಬ್ಬರ ರಕ್ಷಣೆ; ಹುಬ್ಬಳ್ಳಿಯ ಇಬ್ಬರು ಅರೆಸ್ಟ್

1-wwwwqe

Congress Guarantees ದೇಶವನ್ನು ದಿವಾಳಿಯಾಗಿಸುತ್ತದೆ: ಪ್ರಧಾನಿ ಮೋದಿ

smi irani

Missing: ಕಾಂಗ್ರೆಸ್ ಟ್ವೀಟ್ ಗೆ ಕಟುವಾಗಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam actor: ಮಲಯಾಳಂನ ಖ್ಯಾತ ಪೋಷಕ ನಟ ಹರೀಶ್ ಪೆಂಗನ್ ನಿಧನ

Malayalam actor: ಮಲಯಾಳಂನ ಖ್ಯಾತ ಪೋಷಕ ನಟ ಹರೀಶ್ ಪೆಂಗನ್ ನಿಧನ

TDY-10

83ರ ದಿಗ್ಗಜ ನಟನ 29ರ ಪ್ರೇಯಸಿ ಗರ್ಭಿಣಿ: 4ನೇ ಬಾರಿ ತಂದೆಯಾಗಲಿದ್ದಾರೆ Al Pacino

ಮೊದಲ ಪತ್ನಿಯಿಂದ ವಿಚ್ಛೇದನ, 2ನೇ ಪತ್ನಿಯ ಭೇಟಿ.. ಮುಕ್ತವಾಗಿ ಮಾತನಾಡಿದ Ashish Vidyarthi

ಮೊದಲ ಪತ್ನಿಯಿಂದ ವಿಚ್ಛೇದನ, 2ನೇ ಪತ್ನಿಯ ಭೇಟಿ.. ಮುಕ್ತವಾಗಿ ಮಾತನಾಡಿದ Ashish Vidyarthi

ನಟಿ Akanksha Dubey Case: ನಟಿಯ ಒಳ ಉಡುಪಿನಲ್ಲಿ ವೀರ್ಯ ಪತ್ತೆ; ತನಿಖೆ ಚುರುಕು

ನಟಿ Akanksha Dubey Case: ನಟಿಯ ಒಳ ಉಡುಪಿನಲ್ಲಿ ವೀರ್ಯ ಪತ್ತೆ; ತನಿಖೆ ಚುರುಕು

tdy-4

Ira Khan: ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ಆಮಿರ್‌ ಪುತ್ರಿ; ಫ್ಯಾನ್ಸ್‌ ಖುಷ್

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

lok adalat

ನ್ಯಾಯಾಧೀಶರ ಘನತೆ, ಗೌರವಕ್ಕೆ ಧಕ್ಕೆ ಸರಿಯಲ್ಲ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ… ಹೊಡೆದಾಟ

1-sad-dsa

Bhimanna T Naik ದುಃಖ ತಪ್ತ ಕುಟುಂಬಕ್ಕೆ‌ ಸಕಾಲಿಕ ನೆರವಾದ ಶಾಸಕ

police crime

Goa ; ಅಪಹರಣಕ್ಕೊಳಗಾದ ಬಾಲಕಿಯರಿಬ್ಬರ ರಕ್ಷಣೆ; ಹುಬ್ಬಳ್ಳಿಯ ಇಬ್ಬರು ಅರೆಸ್ಟ್