
ಕಪೂರ್ ಕುಟುಂಬದಲ್ಲಿ ಸಂಭ್ರಮ: ತಂದೆ – ತಾಯಿಯಾದ ರಣ್ಬೀರ್ – ಆಲಿಯಾ
Team Udayavani, Nov 6, 2022, 1:04 PM IST

ಮುಂಬಯಿ: ರಣ್ ಬೀರ್ ಕಪೂರ್ – ಆಲಿಯಾ ಭಟ್ ದಾಂಪತ್ಯ ಜೀವನದಲ್ಲಿ ಅತ್ಯಂತ ಸಂತಸದ ದಿನ ಬಂದಿದೆ. ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಕಪೂರ್ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ.
ಇಂದು ಬೆಳಗ್ಗೆ 7:30ಕ್ಕೆ ( ನ.6 ರಂದು ) ಹೆಚ್.ಎನ್. ರಿಲಯನ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು – ಇಬ್ಬರು ಆರೋಗ್ಯವಾಗಿದ್ದು, ದಂಪತಿಗೆ ಎಲ್ಲೆಡೆಯಿಂದ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಇದೇ ವರ್ಷದ ಜೂನ್ ನಲ್ಲಿ ಆಲಿಯಾ – ರಣ್ಬೀರ್ ತಾವು ತಂದೆ – ತಾಯಿಯಾಗಲಿದ್ದೇವೆ ಎನ್ನುವ ಸಂತಸದ ವಿಷಯವನ್ನು ಫೋಟೋ ಹಂಚಿಕೊಂಡು ಹೇಳಿದ್ದರು. ನಮ್ಮ ಮಗು ಶೀಘ್ರದಲ್ಲಿ ಬರಲಿದೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದರು.
2022 ರ ಏ.22 ರಂದು ಬಾಂದ್ರಾದ ತಮ್ಮ ನಿವಾಸದಲ್ಲಿ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇತ್ತೀಚೆಗೆ ʼಬ್ರಹ್ಮಾಸ್ತ್ರʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 450 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು

10 ಕೋಟಿ ಮೌಲ್ಯದ ಕಾರು ಖರೀದಿಸಿದ ಶಾರುಖ್: ಡ್ರೈವ್ ಮಾಡಿಕೊಂಡು ಹೋಗುವ ವಿಡಿಯೋ ವೈರಲ್

ಪ್ರಿಯಾಂಕಾ ಬಾಲಿವುಡ್ ತೊರೆಯಲು ಕರಣ್ ಜೋಹರ್ ಕಾರಣ! ಕಂಗನಾ V/S ಪ್ರಿಯಾಂಕಾ ಚೋಪ್ರಾ

ಆ ದಿನಗಳು.. ಹೃದಯಾಘಾತವಾದ ಕರಾಳ ದಿನಗಳ ಬಗ್ಗೆ ಮೌನ ಮುರಿದ ನಟ ಸುನಿಲ್ ಗ್ರೋವರ್

ಚೇತರಿಕೆಯ ಹಾದಿಯಲ್ಲಿ ಅಮಿತಾಭ್: ಗಾಯದ ಬಳಿಕ ಮೊದಲ ಬಾರಿ ಅಭಿಮಾನಿಗಳ ಮುಂದೆ ಬಂದ ಬಿಗ್ ಬಿ
MUST WATCH
ಹೊಸ ಸೇರ್ಪಡೆ

ಮಂಗಳೂರು: ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಗಳನ್ನು ತೆರವುಗೊಳಿಸಲು ಸೂಚನೆ

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

ನೀರಿನಲ್ಲಿ ಮುಳುಗುತ್ತಿದ್ದ ಮೂವರ ಪ್ರಾಣ ಉಳಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿ

ಐಸಿಸಿ ಏಕದಿನ ರ‍್ಯಾಂಕಿಂಗ್ : ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಪ್ರಗತಿ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ