ದಕ್ಷಿಣ ಭಾರತದ ಹಿಟ್ ಸಿನಿಮಾಗಳ ಜತೆ ಸೋಲನ್ನೂ ಕಂಡ ಬಿಗ್ ಬಜೆಟ್ ಸಿನಿಮಾಗಳಿವು!

ಕಮಲ್‌ ಹಾಸನ್‌ ಗೆ ಇತ್ತೀಚೆಗೆ ದೊಡ್ಡ ಗೆಲುವು ತಂದು ಕೊಟ್ಟ ಸಿನಿಮಾವಾಯಿತು.

Team Udayavani, Aug 29, 2022, 6:08 PM IST

tdy-19

ಮುಂಬಯಿ/ ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಳೆದ ಕೆಲ ವರ್ಷಗಳಿಂದ ಮುಟ್ಟಿದೆಲ್ಲವೂ ಚಿನ್ನವಾಗುತ್ತಿದೆ. ಸಾಲು ಸಾಲು ಹಿಟ್‌ ಸಿನಿಮಾಗಳ ಹೊರತಾಗಿಯೂ, ಸೌತ್‌ ನಲ್ಲಿ ಅಷ್ಟೇ ದೊಡ್ಡ ಮಟ್ಟದಲ್ಲಿ ಚಿತ್ರಗಳು ಮುಗ್ಗರಿಸುತ್ತಿದೆ. ಸೋಲು – ಗೆಲುವಿನ ಕುರಿತಾದ ಒಂದು ವರದಿ ಇಲ್ಲಿದೆ.

2021‌ ರ ಡಿಸೆಂಬರ್ ನಲ್ಲಿ ತೆರೆಗೆ ಬಂದ ಅಲ್ಲು ಅರ್ಜುನ್‌ ಅವರ ʼಪುಷ್ಪʼ ರಿಲೀಸ್‌ ಗೂ ಮುನ್ನ ಪ್ಯಾನ್‌ ಇಂಡಿಯಾದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಚಿತ್ರ ಬಿಡುಗಡೆಯಾದ ಬಳಿಕ ಮೊದಲಿದ್ದ ಹೈಪ್‌ ಹೆಚ್ಚಾಯಿತು. ಮಾಸ್‌ ಪ್ರೇಕ್ಷಕರನ್ನು ಚಿತ್ರ ಗಮನ ಸೆಳೆಯಿತು.

ಎಸ್.ಎಸ್.‌ ರಾಜಾಮೌಳಿ ಅವರ “ಆರ್‌ ಆರ್‌ ಆರ್‌” ಗ್ಲೋಬಲ್‌ ಲೆವೆಲ್‌ ನಲ್ಲಿ ಮಿಂಚಿದ ಸಿನಿಮಾ. 2022 ರ ಮಾರ್ಚ್‌ 24 ರಂದು ತೆರೆಗೆ ಬಂದ ಸಿನಿಮಾದಲ್ಲಿ ಮಲ್ಟಿಸ್ಟಾರ್‌ ಗಳಿದ್ದರು. ಜೂ.ಎನ್.ಟಿ.ಆರ್‌, ರಾಮ್‌ ಚರಣ್‌ ಜೋಡಿಯನ್ನು ಸಿನಿಮಂದಿ ಪ್ರೀತಿಯಿಂದ ಅಪ್ಪಿಕೊಂಡಿದ್ದರು.

ಪ್ರಶಾಂತ್‌ ನೀಲ್‌ ಅವರ “ಕೆಜಿಎಫ್‌ ಚಾಪ್ಟರ್‌ -2” ಮೊದಲ ಸ್ವೀಕ್ವೆಲ್‌ ಗಿಂತ ಹೆಚ್ಚಾಗಿಯೇ ಪ್ರೇಕ್ಷಕರನ್ನು ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿತ್ತು. ಕನ್ನಡ ಮಾತ್ರವಲ್ಲದೆ ಇತರ ದೇಶ,ರಾಜ್ಯದಲ್ಲಿ ರಾಕಿಭಾಯ್‌ ಹವಾ ಜೋರಾಗಿಯೇ ಬೀಸಿತ್ತು.

ಬಳಿಕ ಬಂದ ದೊಡ್ಡ ಸಿನಿಮಾ ಅಂದರೆ ಅದು ಕಮಲ್‌ ಹಾಸನ್‌ ಅವರ “ವಿಕ್ರಮ್‌”. ಚಿತ್ರದಲ್ಲಿನ ಕಮಲ್‌ ಹಾಸನ್‌ ಮಾಸ್‌ ಲುಕ್‌,ಸೆಂಟಿಮೆಂಟ್‌, ಭರ್ಜರಿ ಫೈಟ್‌ ಗಳಿಂದಾಗಿ ಸಿನಿಮಾ ಕಮಲ್‌ ಹಾಸನ್‌ ಗೆ ಇತ್ತೀಚೆಗೆ ದೊಡ್ಡ ಗೆಲುವು ತಂದು ಕೊಟ್ಟ ಸಿನಿಮಾವಾಯಿತು.

ಈ ಸಾಲಿಗೆ ಇತ್ತೀಚೆಗೆ ಬಂದ ಕನ್ನಡದ “777 ಚಾರ್ಲಿ”,“ಜೇಮ್ಸ್” ಮಲಯಾಳಂನ “ಹೃದ್ಯಂ”, “ಜನಗಣಮನ”, ತಮಿಳಿನ “ವಲಿಮೈ”, “ಬೀಸ್ಟ್” ಟಾಲಿವುಡ್‌ ನ “ಸರ್ಕಾರು ವಾರಿ ಪಾಟ”, “ಬೀಮ್ಲಾ ನಾಯಕ್” ಸಿನಿಮಾಗಳು ಸೇರುತ್ತವೆ. ಆರ್‌ ಆರ್‌ ಆರ್‌, ಕೆಜಿಎಫ್‌ ನಷ್ಟು ದೊಡ್ಡ ಮಟ್ಟದ ಕಲೆಕ್ಷನ್‌ ಮಾಡದಿದ್ದರೂ ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ಹಾಕಿದ ಹಣಕ್ಕಿಂತ ಹೆಚ್ಚಿನದನ್ನು ಪಡೆದುಕೊಳ್ಳುವಲ್ಲಿ ಯಶಸ್ಸಾಗಿದೆ.

ದೊಡ್ಡ ಸಿನಿಮಾಗಳು ಗಳಿಸಿದ್ದೆಷ್ಟು? : 2021  ರ ಅಂತ್ಯ ಹಾಗೂ ಈ ವರ್ಷ ಬಂದ ಸೌತ್‌ ಸಿನಿಮಾಗಳು ಬರೀ ಸೂಪರ್‌ ಹಿಟ್‌ ಮಾತ್ರವಾಗಿಲ್ಲ. ಬಾಕ್ಸ್‌ ಆಫೀಸ್‌ ನಲ್ಲಿ ಕೋಟಿಗಟ್ಟಲೇ ಬಾಚಿಕೊಂಡ ಸಿನಿಮಾಗಳು ಕೂಡ ಆಗಿವೆ. “ಆರ್‌ ಆರ್‌ ಆರ್”‌ ವಿಶ್ವದ್ಯಂತ 1 ಸಾವಿರ ಕೋಟಿಯನ್ನು ಗಳಿಸಿತ್ತು. ಹಾಗೆಯೇ ಯಶ್‌ ಅವರ “ಕೆಜಿಎಫ್‌  -2” 1,200 ಕೋಟಿಯನ್ನು ಬಾಚಿಕೊಂಡಿತ್ತು. “ವಿಕ್ರಮ್‌” ಚಿತ್ರ 400 ಕೋಟಿ ಕಲೆಕ್ಷನ್‌ ಮಾಡಿದೆ.

ಮಕಾಡೆ ಮಲಗಿದ ಬಾಲಿವುಡ್‌ : ನೆಪೋಟಿಸಂ, ಬಾಯ್ಕಾಟ್‌ ಹೀಗೆ ವಿವಾದಕ್ಕೆ ಸಿಲುಕಿದ ಬಾಲಿವುಡ್‌ ಸಿನಿಮಾಗಳು ಏನೇ ಮಾಡಿದರೂ, ಪ್ರೇಕ್ಷಕರಿಂದ ಶಹಬ್ಬಾಸ್‌ ಪಡೆದುಕೊಳ್ಳುತ್ತಿಲ್ಲ. ಹಾಗಂತ ಬಾಲಿವುಡ್‌ ನಲ್ಲಿ ಸಿನಿಮಾಗಳೇ ಬರುತ್ತಿಲ್ಲ ಎಂದಲ್ಲ. ಯಾವ ಸಿನಿಮಾಗಳ ಹಿಟ್‌ ಆಗಲೇ ಇಲ್ಲ ಎಂದರ್ಥ ಅರ್ಥವಲ್ಲ, ಕಾರ್ತಿಕ್‌ ಆರ್ಯನ್‌ ಅವರ ‘ಭೂಲ್​ ಭುಲಯ್ಯ 2’ ಹಾಗೂ ಅನಿಲ್‌ ಕಪೂರ್‌ ಮುಖ್ಯ ಭೂಮಿಕೆಯ “ಜುಗ್​ಜುಗ್​ ಜಿಯೋʼ ಸಿನಿಮಾಗಳು 100 ಕೋಟಿ ಕ್ಲಬ್‌ ಸೇರಿದವು.

ಆದರೆ ಬೆರಳಣಿಕೆಯ ಎರಡೇ ಎರಡು ಸಿನಿಮಾಗಳು ಮಾತ್ರ ಗಮನ ಸೆಳೆದದ್ದು ಬಿಟ್ಟರೆ ಉಳಿದ ಸಿನಿಮಾಗಳು ಸೌತ್‌ ಚಿತ್ರಗಳ ಮುಂದೆ ಮಕಾಡೆ ಮಲಗಿದೆ.

ಸೂಪರ್‌ ಹಿಟ್‌ ನಡುವೆ ಫ್ಲಾಪ್‌ ಸಾಲಿಗೆ ಸೇರಿದ ಸೌತ್‌ ಸಿನಿಮಾಗಳು:  

ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್‌ ಸಿನಿರಂಗದ ಮೇಲೆ ಸವಾರಿ ಮಾಡಲು ಆರಂಭಿಸಿದೆ. ಆದರೆ ಸಾಲು ಸಾಲು ಸಿನಿಮಾಗಳು ನಡುವೆಯೂ ದಕ್ಷಿಣ ಭಾರತದ ಸಿನಿಮಾಗಳಿಗೂ ದೊಡ್ಡ ಮಟ್ಟದ ಸೋಲುಗಳಾಗಿವೆ. ಬಿಗ್‌ ಸ್ಟಾರ್‌ ಚಿತ್ರಗಳೂ ಸೋತಿವೆ.

ಮೆಗಾಸ್ಟಾರ್‌ ಚಿರಂಜೀವಿ, ರಾಮ್‌ ಚರಣ್‌ ಇಬ್ಬರು ಜೊತೆಯಾಗಿ ಕಾಣಸಿಕೊಂಡರೆ ಸಿನಿಮಾ ಖಂಡಿತ ಹಿಟ್‌ ಅಂದುಕೊಳ್ಳಬಹುದು ಆದರೆ ಅದು “ಆಚಾರ್ಯ”ದಲ್ಲಿ ಅದು ಸುಳ್ಳಾಯಿತು. ಚಿತ್ರ ಹೀನಾಯವಾಗಿ ಸೋತಿತು. ಇದರೊಂದಿಗೆ ಪ್ರಭಾಸ್‌ ಅವರ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ “ರಾಧೆಶ್ಯಾಮ್”‌ ಒಂದಷ್ಟು ದಿನ ಥಿಯೇಟರ್‌ ನಲ್ಲಿ ತಿರುಗಿ ಮಾಯಾವಾಯಿತು. ಇದು ಪ್ರಭಾಸ್‌ ಗೆ ಸಾಹೋ ಬಳಿಕ ಮತ್ತೊಂದು ದೊಡ್ಡ ಮಟ್ಟದ ಸೋಲು ತಂದುಕೊಟ್ಟ ಸಿನಿಮಾ. ಇನ್ನೊಂದೆಡೆ ಮೋಹನ್‌ ಲಾಲ್‌ ಅವರ “ಅರಟ್ಟು” ಚಿತ್ರವೂ ಪ್ರೇಕ್ಷಕರ ಮನದಲ್ಲಿ ಅಚ್ಚಾಗಿ ಉಳಿಯಲು ವಿಫಲವಾಯಿತು.

ರಾಮ್‌ ಪೋತಾನಿ ಅವರ “ದಿ ವಾರಿಯರ್”‌, ನಾಗಚೈತನ್ಯ ಅವರ “ಥ್ಯಾಂಕ್ಯೂ” ಕನ್ನಡದ “ಬೈರಾಗಿ” ಚಿತ್ರವೂ ಅಷ್ಟಕಷ್ಟೇ ಎನ್ನುವಷ್ಟರ ಮಟ್ಟಿಗೆ ಗಮನ ಸೆಳೆಯಿತು.

2022 ರಲ್ಲಿ ಇನ್ನೂ ಇದೆ ಬಹುನಿರೀಕ್ಷೆ:  ಸೋಲು – ಗೆಲುವಿನ ಸಾಗುತ್ತಿರುವ ಸೌತ್‌ ಸಿನಿಮಾ ರಂಗದಲ್ಲಿ. ಇತ್ತೀಚೆಗೆ ಕನ್ನಡದ ಪ್ಯಾನ್‌ ಇಂಡಿಯಾ ʼವಿಕ್ರಾಂತ್‌ ರೋಣ”, ವಿಜಯ್‌ ದೇವರಕೊಂಡ ಅವರ ʼಲೈಗರ್”‌ ಹಿಂದಿಯ “ಲಾಲ್‌ ಸಿಂಗ್‌ ಚಡ್ಡಾ”, “ರಕ್ಷಾ ಬಂಧನ್”‌ ಸಿನಿಮಾಗಳು ಇನ್ನು ಥಿಯೇಟರ್‌ ನಲ್ಲಿವೆ. ಅವು ಅಂತಿಮವಾಗಿ ಎಷ್ಟು ಕಲೆಕ್ಷನ್‌ ಮಾಡುತ್ತವೆ ಎನ್ನುವುದನ್ನು ಕಾದು ನೋಡಬೇಕು.ಈ ವರ್ಷ ದೊಡ್ಡ ಸಿನಿಮಾಗಳು ರಿಲೀಸ್‌ ಆಗಲು ಬಾಕಿಯಿದೆ. ಅವುಗಳಲ್ಲಿ ದೊಡ್ಡ ಸಿನಿಮಾವೆಂದರೆ ಮಣಿ ರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್”.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-eqewwqe

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್‌ ಬಿ; ಗಮನ ಸೆಳೆದ ಪಾತ್ರದ ಝಲಕ್

Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್‌ ಬಿ; ಗಮನ ಸೆಳೆದ ಪಾತ್ರದ ಝಲಕ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.