
ಚೇತರಿಕೆಯ ಹಾದಿಯಲ್ಲಿ ಅಮಿತಾಭ್: ಗಾಯದ ಬಳಿಕ ಮೊದಲ ಬಾರಿ ಅಭಿಮಾನಿಗಳ ಮುಂದೆ ಬಂದ ಬಿಗ್ ಬಿ
Team Udayavani, Mar 28, 2023, 10:26 AM IST

ಮುಂಬಯಿ: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಗಾಯದ ಬಳಿಕ ಮೊದಲ ಬಾರಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ.
ಕೆಲ ಸಮಯದ ಹಿಂದೆ ಹೈದರಾಬಾದ್ ನಲ್ಲಿ ʼಪ್ರಾಜೆಕ್ಟ್ ಕೆʼ ಚಿತ್ರೀಕರಣದ ವೇಳೆ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಪಕ್ಕೆಲುಬಿಗೆ ಗಾಯವಾಗಿತ್ತು. ಆ ಬಳಿಕ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಮನೆಯಲ್ಲೇ ಇದ್ದು ತಮ್ಮ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು. ಗಾಯ ಗಂಭೀರ ಸ್ವರೂಪದಾಗಿದ್ದರಿಂದ ಅಭಿಮಾನಿಗಳು ತನ್ನ ಮೆಚ್ಚಿನ ನಟನ ಆದಷ್ಟು ಬೇಗ ಚೇತರಿಕೆ ಕಾಣಲಿ ಎಂದು ಆಶಿಸಿದ್ದರು.
ಇದನ್ನೂ ಓದಿ: ಸುಖಾಂತ್ಯ ಕಂಡ ಕ್ರಿಕೆಟಿಗ ಕೇದಾರ್ ಜಾಧವ್ ತಂದೆ ನಾಪತ್ತೆ ಪ್ರಕರಣ
ಆ್ಯಕ್ಷನ್ ದೃಶ್ಯದ ಚಿತ್ರೀಕರಿಸುವಾಗ ಗಾಯಗೊಂಡಿದ್ದ ಬಿಗ್ ಬಿ, ಮೊದಲ ಬಾರಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಭಾನುವಾರ ತಮ್ಮ ನಿವಾಸದ ಎದುರು ಜಮಾಸಿದ ಅಭಿಮಾನಿಗಳ ಮುಂದೆ ಒಂದು ಕೈ ಬೀಸಿ, ನಮಸ್ಕಾರ ಎಂದು ಹೇಳಿ, ನಗುಮುಖದಿಂದ ಅಭಿಮಾನಿಗಳ ಮುಂದೆ ಸಮಯ ಕಳೆದಿದ್ದಾರೆ. ಈ ಬಗ್ಗೆ ತಮ್ಮ ಬ್ಲಾಗ್ ನಲ್ಲಿ ಅಮಿತಾಭ್ ಬರೆದುಕೊಂಡಿದ್ದಾರೆ
ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಭೂಮಿಕೆಯ ʼಪ್ರಾಜೆಕ್ಟ್ ಕೆʼ ಸಿನಿಮಾಕ್ಕೆ ಅಶ್ವಿನಿ ದತ್ ನಿರ್ದೇಶನವಿದೆ. ತೆಲುಗು ಹಾಗೂ ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.
View this post on Instagram
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂಡಿಯನ್ ಪವರ್ ಹೌಸ್ ನಲ್ಲಿ ನಿಖೀಲ್ ಸಿದ್ಧಾರ್ಥ್

Actress: ಮೊದಲ ಮಗುವಿನ ನಿರೀಕ್ಷೆ; ಬಣ್ಣದ ಲೋಕ ತೊರೆಯಲು ನಿರ್ಧರಿಸಿದ ಖ್ಯಾತ ನಟಿ

ನಾನು ಅಲ್ಲಿಗೆ ಹೋದರೆ ನನ್ನನ್ನು ಕೊಲ್ಲುತ್ತಾರೆ.. ʼThe Diary of West Bengal’ ನಿರ್ದೇಶಕ

Bollywood: ಪ್ರಿಯಕರನ ಖಾಸಗಿ ಫೋಟೋ ಹಂಚಿಕೊಂಡ ಮಲೈಕಾ: ನೆಟ್ಟಿಗರಿಂದ ಟ್ರೋಲ್

Car Accident: ಶೀಘ್ರದಲ್ಲಿ ಮದುವೆಯಾಗಲಿದ್ದ ಖ್ಯಾತ ನಟನ ಕಾರು ಅಪಘಾತ