
ಮಲೈಕಾ ಆರೋರಾ ಗರ್ಭಿಣಿ ಗಾಸಿಪ್: “ನಮ್ಮ ವೈಯಕ್ತಿಕ ಜೀವನ..” ಮೌನ ಮುರಿದ ಪ್ರಿಯಕರ Arjun
ಅರ್ಜುನ್ ಕಪೂರ್ ಅವರ ಅರೆ ಬೆತ್ತಲೆ ಫೋಟೋವೊಂದನ್ನು ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.
Team Udayavani, Jun 1, 2023, 10:26 AM IST

ಮುಂಬಯಿ: ಮಲೈಕಾ ಆರೋರಾ – ಅರ್ಜುನ್ ಕಪೂರ್ ನಡುವಿನ ರಿಲೇಷನ್ ಶಿಪ್ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಯಲ್ಲಿರುತ್ತದೆ. ಇತ್ತೀಚೆಗಷ್ಟೇ ಬಾಲಿವುಡ್ ʼಮುನ್ನಿʼ ತನ್ನ ಪ್ರಿಯಕರ ಅರ್ಜುನ್ ಕಪೂರ್ ಅವರ ಅರೆ ಬೆತ್ತಲೆ ಫೋಟೋವೊಂದನ್ನು ಸ್ಟೋರಿಯಲ್ಲಿ ಹಂಚಿಕೊಂಡಿದ್ದು ಭಾರೀ ವೈರಲ್ ಆಗಿತ್ತು.
ಕಳೆದ ಕೆಲ ವರ್ಷಗಳಿಂದ ಅರ್ಜುನ್ – ಮಲೈಕಾ ಪ್ರೀತಿಸುತ್ತಿದ್ದಾರೆ. ಇಬ್ಬರ ನಡುವೆ 12 ವರ್ಷಗಳ ಅಂತರವಿದ್ದರೂ ಅದು ಅವರ ರಿಲೇಷನ್ ಶಿಪ್ ಗೆ ಅಡ್ಡಿಯಾಗಿಲ್ಲ. ಇಬ್ಬರ ನಡುವಿನ ಸಂಬಂಧ ಮದುವೆಯವರೆಗೂ ಬಂದಿದೆ ಎನ್ನುವ ಗಾಸಿಪ್ ಬಿಟೌನ್ ನಲ್ಲಿ ಕೆಲ ದಿನಗಳಿಂದ ಹರಿದಾಡುತ್ತಿದೆ.
ಇದನ್ನೂ ಓದಿ: BJP MLA: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿದ ಬಿಜೆಪಿ ಶಾಸಕ
ಕಳೆದ ನವೆಂಬರ್ ನಲ್ಲಿ ವೆಬ್ ಸೈಟ್ ವೊಂದು ಮಲೈಕಾ ಆರೋರಾ ಗರ್ಭಿಣಿ ಎನ್ನುವ ಸುದ್ದಿಯೊಂದನ್ನು ಬಿತ್ತರಸಿತ್ತು. ಅರ್ಜುನ್ ಅವರ ಮಗುವಿಗೆ ಮಲೈಕಾ ತಾಯಿ ಆಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇದು ಸುಳ್ಳೆಂದು ಆ ಬಳಿಕ ಗೊತ್ತಾಗಿತ್ತು. ಇದಕ್ಕೆ ನಟ ಅರ್ಜುನ್ ಕಪೂರ್ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಮತ್ತೊಮ್ಮೆ ಅರ್ಜುನ್ ಕಪೂರ್ ಇದೇ ವಿಚಾರವಾಗಿ ಮಾತನಾಡಿದ್ದಾರೆ. “ನೆಗೆಟಿವಿಟಿಯನ್ನು ಹರಡುವುದು ಸುಲಭ. ಎಲ್ಲೆಡೆ ನೆಗೆಟಿವ್ ವಿಚಾರಗಳ ಬಹುಬೇಗನೇ ಹರಡುವುದರಿಂದ ಜನ ಅದರತ್ತ ಹೆಚ್ಚು ಗಮನ ಹರಿಸುತ್ತಾರೆ. ನಾವು ನಟರು, ನಮ್ಮ ವೈಯಕ್ತಿಕ ಜೀವನ ಯಾವಾಗಲೂ ತುಂಬಾ ಖಾಸಗಿಯಾಗಿರುವುದಿಲ್ಲ. ನಾವೆಲ್ಲರೂ ಮನುಷ್ಯರು ಎಂಬ ಕನಿಷ್ಠ ಅರಿವು ನಮಗಿರಬೇಕು. ಆದ್ದರಿಂದ, ನೀವು ಬಹಳ ಮುಖ್ಯವಾದದ್ದನ್ನು ಬರೆಯಲು ಹೊರಟಿದ್ದರೆ ಒಮ್ಮೆ ಪರಿಶೀಲಿಸಿ. ಹಾಗೆ ಮಾಡಿದರೆ ನಮಗೂ ನಾವು ಮಾಡಿದ್ದು ಸರಿ ಎಂದು ಭಾಸವಾಗುತ್ತದೆ. ಸುಮ್ಮನೆ ನೀವು ಊಹಿಸಿ ಎಲ್ಲವನ್ನೂ ಬರೆಯಬೇಡಿ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CBFC ವಿರುದ್ಧ ನಟ ವಿಶಾಲ್ ಲಂಚ ಆರೋಪ: ತನಿಖೆಗೆ I&B ಸಚಿವಾಲಯ ಆದೇಶ

Leo 2nd Song ರಿಲೀಸ್: “Badass” ಮೂಲಕ ಹೈಪ್ ಹೆಚ್ಚಿಸಿದ ʼಲಿಯೋದಾಸ್ʼ

Vivek Agnihotri ಅವರ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾಕ್ಕೆ ಪೈರಸಿ ಕಾಟ; HD ಕಾಪಿ ಲೀಕ್

Animal teaser ರಿಲೀಸ್: ʼಡಾರ್ಲಿಂಗ್ʼ ಎಂದು ರಶ್ಮಿಕಾಗೆ ಶುಭಕೋರಿದ ದೇವರಕೊಂಡ

Jawan ತಂಡದಿಂದ ಪ್ರೇಕ್ಷಕರಿಗೆ ʼಬೈ1 ಗೆಟ್ 1 ಫ್ರೀʼ ಟಿಕೆಟ್ ಆಫರ್ ಘೋಷಿಸಿದ ಶಾರುಖ್ ಖಾನ್