
ಮೊದಲ ಪತ್ನಿಯಿಂದ ವಿಚ್ಛೇದನ, 2ನೇ ಪತ್ನಿಯ ಭೇಟಿ.. ಮುಕ್ತವಾಗಿ ಮಾತನಾಡಿದ Ashish Vidyarthi
Team Udayavani, May 31, 2023, 12:18 PM IST

ಮುಂಬಯಿ: ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಇತ್ತೀಚೆಗೆ 2ನೇ ಮದುವೆಯಾಗಿದ್ದಾರೆ. ತನ್ನ 60ನೇ ವಯಸ್ಸಿನಲ್ಲಿ ಮತ್ತೊಮ್ಮೆ ಮದುವೆಯಾದ ನಟನ ಬಗ್ಗೆ ನೆಟ್ಟಿಗರು ನಾನಾ ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.
ಈ ಬಗ್ಗೆ ಹಾಗೂ ತನ್ನ ಮೊದಲ ಪತ್ನಿಯ ಬಗ್ಗೆ ನಟ ಆಶಿಶ್ ವಿದ್ಯಾರ್ಥಿ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಪಿಲೂ (ರಾಜೋಶಿ ಬರುವಾ) ಮತ್ತು ನನ್ನ ಮದುವೆಯ ಬಂಧ ಒಂದು ಸುಂದರ ನೆನಪು. ಆಕೆ ನನ್ನ ಮಗನ ತಾಯಿ ಮಾತ್ರವಲ್ಲ, ಆಕೆ ನನ್ನ ಉತ್ತಮ ಸ್ನೇಹಿತೆ, ನನ್ನ ಹೆಂಡತಿಯಾಗಿದ್ದಳು, ಅವಳು ನನ್ನೊಂದಿಗೆ ಇದ್ದವಳು. ನಾವು ದೂರ ಆಗಿದ್ದೇವೆ. ಆದರೆ ಇದು ನೋವಿಲ್ಲದೆ ನಡೆದ ಸಂಗತಿ ಖಂಡಿತವಲ್ಲ. ಪಿಲೂ ಮತ್ತು ನಾನು ನೋವಿನಿಂದ ನೊಂದಿದ್ದೇವೆ. ಜೀವನದಲ್ಲಿ ಸದಾ ನಿಮಗೆ ನಿಮಗೆ ಆಯ್ಕೆಗಳಿರುತ್ತವೆ. ನೀವು ಅದನ್ನು ನಿಭಾಯಿಸಲು ಬಯಸುತ್ತೀರಾ ಅಥವಾ ಅದರೊಂದಿಗೆ ಕಾಲಹರಣ ಮಾಡಲು ಬಯಸುವಿರಾ? ಎಂದು ಹೇಳಿದ್ದಾರೆ.
ಇನ್ನು ತನ್ನ ಎರಡನೇ ಪತ್ನಿ ರೂಪಲಿ ಅವರನ್ನು ಭೇಟಿಯಾದ ಬಗ್ಗೆ ಮಾತನಾಡಿದ ಅವರು, ಪಿಲೂ ಜೊತೆಗಿನ ನೆನಪಿನಿಂದ ಆಚೆ ಬಂದ ಬಳಿಕ ವ್ಲೋಗಿಂಗ್ ಅಸೈನ್‌ಮೆಂಟ್‌ವೊಂದರಲ್ಲಿ ನಾನು ರೂಪಾಲಿ ಅವರನ್ನು ಭೇಟಿಯಾದೆ. ಈ ಭೇಟಿ ಸ್ನೇಹಕ್ಕೆ ತಿರುಗಿತು. ನಾವು ಚಾಟಿಂಗ್ ಮಾಡುತ್ತ ಹೋದೆವು. ಅವರು ತಮ್ಮ ನೋವನ್ನು ಹಂಚಿಕೊಂಡರು. ಅವರ ಗಂಡ ತೀರಿ ಹೋಗಿ 5 ವರ್ಷಗಳು ಕಳೆದಿದೆ. ಮತ್ತೆ ಮದುವೆಯ ಬಗ್ಗೆ ಅವರು ಯೋಚನೆ ಮಾಡಿರಲಿಲ್ಲ. ಆದರೆ ನಮ್ಮಿಬ್ಬರ ನಡುವಿನ ಚಾಟಿಂಗ್ ನಮ್ಮನ್ನು ಹತ್ತಿರವಾಗಿಸಿತು. ಜೀವನವನ್ನು ಹೊಸದಾಗಿ ನೋಡುವ ಮತ್ತು ಮದುವೆಯಾಗುವ ಸಾಧ್ಯತೆಯ ಯೋಚನೆ ಮಾಡಿ ಮುಂದಿನ ಹೆಜ್ಜೆಯನ್ನು ಇಟ್ಟೆ ಎಂದು ಅವರು ಹೇಳಿದರು.
ಆಶಿಶ್ ತನ್ನ ಮೊದಲ ಪತ್ನಿ ರಾಜೋಶಿ ಬರುವಾ ಅವರಿಂದ ಅರ್ಥ ವಿದ್ಯಾರ್ಥಿ ಎಂಬ ಮಗನನ್ನು ಹೊಂದಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Leo 2nd Song ರಿಲೀಸ್: “Badass” ಮೂಲಕ ಹೈಪ್ ಹೆಚ್ಚಿಸಿದ ʼಲಿಯೋದಾಸ್ʼ

Vivek Agnihotri ಅವರ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾಕ್ಕೆ ಪೈರಸಿ ಕಾಟ; HD ಕಾಪಿ ಲೀಕ್

Animal teaser ರಿಲೀಸ್: ʼಡಾರ್ಲಿಂಗ್ʼ ಎಂದು ರಶ್ಮಿಕಾಗೆ ಶುಭಕೋರಿದ ದೇವರಕೊಂಡ

Jawan ತಂಡದಿಂದ ಪ್ರೇಕ್ಷಕರಿಗೆ ʼಬೈ1 ಗೆಟ್ 1 ಫ್ರೀʼ ಟಿಕೆಟ್ ಆಫರ್ ಘೋಷಿಸಿದ ಶಾರುಖ್ ಖಾನ್

Animal Teaser: ಸಿರಿವಂತನ ರಗಡ್ ಕಹಾನಿ; ಮಾಸ್ ಲುಕ್ ನಲ್ಲಿ ಮಿಂಚಿದ ʼರಾಕ್ ಸ್ಟಾರ್ʼ
MUST WATCH
ಹೊಸ ಸೇರ್ಪಡೆ

Baana Daariyalli movie review; ಗಣೇಶ್- ಗುಬ್ಬಿ ಚಿತ್ರ ಹೇಗಿದೆ?

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ

ICC World Cup 2023; ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಆರ್.ಅಶ್ವಿನ್ ಗೆ ಬುಲಾವ್

Karnataka Bandh: ಕಾವೇರಿಗಾಗಿ ಜನಾಕ್ರೋಶ, ಹಲವೆಡೆ ಪ್ರತಿಭಟನೆ; ಬಿಗಿ ಪೊಲೀಸ್ ಭದ್ರತೆ

Sept 29: ವಿಶ್ವ ಹೃದಯ ದಿನ: ಹೃದಯ ಆರೋಗ್ಯಕ್ಕೆ ಸಹಕಾರಿ ಆಹಾರಾಭ್ಯಾಸಗಳು