
ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಖ್ಯಾತ ನಟಿ ಆಕಾಂಕ್ಷಾ ದುಬೆ
ಸಾವಿನ ಕೆಲವೇ ಗಂಟೆಗಳ ಮುನ್ನ ರೀಲ್ಸ್ ಹಂಚಿಕೊಂಡಿದ್ದ ನಟಿ
Team Udayavani, Mar 26, 2023, 3:05 PM IST

ಅಹಮದಾಬಾದ್: ಭೋಜ್ ಪುರಿ ಸಿನಿಮಾ ರಂಗದ ಖ್ಯಾತ ನಟಿ ಆಕಾಂಕ್ಷಾ ದುಬೆ (25) ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ವಾರಣಾಸಿ ಹೊಟೇಲ್ ನಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ.
ಅಕ್ಟೋಬರ್ 21, 1997 ರಲ್ಲಿ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಜನಿಸಿದ ಆಕಾಂಕ್ಷಾ ದುಬೆ ʼ ಮೇರಿ ಜಂಗ್ ಮೇರಾ ಫೈಸ್ಲಾʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.
ಸಿನಿಮಾದ ಶೂಟಿಂಗ್ ಗಾಗಿ ವಾರಣಾಸಿಯ ಖಾಸಗಿ ಹೊಟೇಲ್ ನಲ್ಲಿ ತಂಗಿದ್ದರು. ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ನಟಿ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಂಶಯಾಸ್ಪದ ರೀತಿಯಲ್ಲಿ ನಟಿ ಪತ್ತೆಯಾಗಿದ್ದು, ಆ ಹಂತದಲ್ಲೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನೆಯ ಕೆಲ ಗಂಟೆಗಳ ಮುನ್ನ ಆಕಾಂಕ್ಷಾ ದುಬೆ ಇನ್ಸ್ಟಾಗ್ರಾಮ್ ನಲ್ಲಿ ಬೆಲ್ಲಿ ಡ್ಯಾನ್ಸ್ ಮಾಡುವ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಆಕಾಂಕ್ಷಾ ದುಬೆ ಅವರ ʼ ಯೇ ಆರ ಕಭಿ ಹರ ನಹೀʼ ಹಾಡು ಇಂದು ರಿಲೀಸ್ ಆಗಬೇಕಿತ್ತು.
ʼಮುಜ್ಸೆ ಶಾದಿ ಕರೋಗಿʼ (ಭೋಜ್‌ಪುರಿ), ʼ ಈರಾನ್ ಕೆ ವೀರ್ʼ, ʼಫೈಟರ್ ಕಿಂಗ್ʼ ಮುಂತಾದ ಚಿತ್ರಗಳಲ್ಲಿ ನಟಿಸಿ ಸಣ್ಣ ವಯಸ್ಸಿನಲ್ಲೇ ಬಹಳ ಖ್ಯಾತಿಯನ್ನು ಪಡೆದಿದ್ದರು.
ಇದೇ ವರ್ಷದ ಪ್ರೇಮಿಗಳ ದಿನದಂದು ಸಹನಟ ಸಮರ್ ಸಿಂಗ್ ಅವರೊಂದಿಗಿನ ಸಂಬಂಧದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಆಕಾಂಕ್ಷಾ ಹಂಚಿಕೊಂಡಿದ್ದರು.
View this post on Instagram
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ನಾನು ಇಂಥ ಸಿನಿಮಾಗಳಿಗೆ..” The Kerala Story ಬಗ್ಗೆ ನಟ ಕಮಲ್ ಹಾಸನ್ ಹೇಳಿದ್ದೇನು?

Kerala Story; “ದಿ ಕೇರಳ ಸ್ಟೋರಿ” ಸಿನಿಮಾ ನಿರ್ದೇಶಕ ಸುದಿಪ್ತೋ ಸೇನ್ ಆಸ್ಪತ್ರೆಗೆ ದಾಖಲು

Tollywood ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ವಾಸು ವಿಧಿವಶ

Ileana D’Cruz ತುಂಬು ಗರ್ಭಿಣಿ; ಮಗುವಿನ ತಂದೆ ಯಾರೆಂಬ ಗುಟ್ಟು ಬಿಟ್ಟು ಕೊಟ್ಟಿಲ್ಲ!!

Nithyananda ನೊಂದಿಗೆ ನನ್ನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ: ನಟ ಅಶೋಕ್ ಕುಮಾರ್