B’town: ವಿಚ್ಚೇದನ ಕುರಿತ ಪೋಸ್ಟ್‌ಗೆ ಲೈಕ್‌ ಕೊಟ್ಟ ಅಭಿಷೇಕ್ ಬಚ್ಚನ್; ಸಂಬಂಧದಲ್ಲಿ ಬಿರುಕು?

Team Udayavani, Jul 18, 2024, 11:35 AM IST

B’town: ವಿಚ್ಚೇದನ ಕುರಿತ ಪೋಸ್ಟ್‌ಗೆ ಲೈಕ್‌ ಕೊಟ್ಟ ಅಭಿಷೇಕ್ ಬಚ್ಚನ್; ಸಂಬಂಧದಲ್ಲಿ ಬಿರುಕು?

ಮುಂಬಯಿ: ಬಾಲಿವುಡ್‌ ದಂಪತಿ ಅಭಿಷೇಕ್‌ ಬಚ್ಚನ್‌(Abhishek Bachchan) ಹಾಗೂ ಐಶ್ವರ್ಯಾ ರೈ (Aishwarya Rai) ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬಿಗ್‌ ಬಿ ಕುಟುಂಬದ ಸೊಸೆ ಐಶ್ವರ್ಯಾ ರೈ ಕಳೆದ ಕೆಲ ಸಮಯದಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅಭಿಷೇಕ್‌ ಬಚ್ಚನ್‌ ಅವರೊಂದಿಗೆ ಹಾಗೂ ಬಿಗ್‌ ಬಿ ಕುಟುಂಬದ ಜೊತೆ ಐಶ್ವರ್ಯಾ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ.

ಇದಕ್ಕೆ ಇತ್ತೀಚೆಗಿನ ಉದಾಹರಣೆ ಅಂಬಾನಿ ಪುತ್ರನ ಮದುವೆ. ಅನಂತ್‌ – ರಾಧಿಕಾ ಮದುವೆಗೆ ಅಮಿತಾಭ್‌ ಬಚ್ಚನ್‌(Amitabh Bachchan) ಅವರ ಕುಟುಂಬ ಜೊತೆಯಾಗಿ ಬಂದಿತ್ತು. ಆದರೆ ಐಶ್ವರ್ಯಾ ರೈ ಹಾಗೂ ಪುತ್ರಿ ಆರಾಧ್ಯ ಪ್ರತ್ಯೇಕವಾಗಿ ಫೋಟೋಗ್ರಾಫರ್‌ ಗಳಿಗೆ ಪೋಸ್‌ ಕೊಟ್ಟಿದ್ದಾರೆ. ಬಿಗ್‌ ಬಿ ಕುಟುಂಬದ ಜೊತೆ ಐಶ್ವರ್ಯಾ ರೈ ಫೋಟೋಗೆ ನಿಂತಿಲ್ಲ. ಈ ವಿಚಾರ ಅಭಿಷೇಕ್‌ – ಐಶ್ವರ್ಯಾ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ಮಾತಿಗೆ ಪುಷ್ಟಿ ನೀಡಿದೆ.

ಕೆಲವೊಂದು ವರದಿಗಳ ಪ್ರಕಾರ ಅಭಿಷೇಕ್‌ – ಐಶ್ವರ್ಯಾ ಅವರ ನಡುವಿನ ಅಂತರ ಹೆಚ್ಚಾಗಿದ್ದು, ವಿಚ್ಚೇದನದ (Divorce)ಬಗ್ಗೆ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ.

ಈ ಮಾತು ಸುದ್ದಿಯಲ್ಲಿರುವಾಗಲೇ ಅಭಿಷೇಕ್‌ ಬಚ್ಚನ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ವಿಚ್ಚೇದನದ ಕುರಿತ ಪೋಸ್ಟ್‌ ವೊಂದಕ್ಕೆ ಲೈಕ್‌ ಕೊಟ್ಟಿರುವ ಸ್ಕ್ರೀನ್‌ ಶಾಟ್‌ ವೊಂದು ವೈರಲ್‌ ಆಗಿದೆ.

ಲೇಖಕಿಯೊಬ್ಬರು ʼವಿಚ್ಚೇದನ ಬಳಿಕದ ಸವಾಲುʼ ಎನ್ನುವ ವಿಚಾರದ ಬಗ್ಗೆ ಇನ್ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಗೆ ಅಭಿಷೇಕ್‌ ಬಚ್ಚನ್‌ ಅವರು ಲೈಕ್‌ ಕೊಟ್ಟಿದ್ದಾರೆ.

ಅಭಿಷೇಕ್‌ ಬಚ್ಚನ್‌ ಅವರು ಲೈಕ್‌ ಕೊಟ್ಟಿರುವ ಸ್ಕ್ರೀನ್‌ ಶಾಟ್‌ ನ್ನು ಬಳಕೆದಾರನೊಬ್ಬ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ.

“ವಿಚ್ಛೇದನವು ಯಾರಿಗೂ ಸುಲಭವಲ್ಲ” ಎಂದು ಶುರುವಾಗುವ ಪೋಸ್ಟ್‌ ನಲ್ಲಿ  ವಿಚ್ಚೇದನದ ಬಳಿಕದ ಜೀವನ ಅಷ್ಟು ಸುಲಭವಲ್ಲ ಎನ್ನುವ ಸವಾಲುಗಳ ಬಗ್ಗೆ ಹೇಳಲಾಗಿದೆ.

ಸದ್ಯ ಅಭಿಷೇಕ್‌ ಬಚ್ಚನ್‌ ಈ ಪೋಸ್ಟ್‌ ಗೆ ಮೆಚ್ಚುಗೆ ಕೊಟ್ಟಿರುವುದು ಅವರ ದಾಂಪತ್ಯ ಜೀವನದಲ್ಲಿನ ಬಿರುಕಿನ ಬಗ್ಗೆ ಮತ್ತಷ್ಟು ಪ್ರಶ್ನೆ ಹುಟ್ಟುವಂತೆ ಮಾಡಿದೆ.

ಸಿನಿಮಾದ ವಿಚಾರಕ್ಕೆ ಬಂದರೆ ಅಭಿಷೇಕ್‌ ಬಚ್ಚನ್‌ ಶಾರುಖ್‌ ಖಾನ್‌ ಅವರ ʼಕಿಂಗ್‌ʼ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Ad

ಟಾಪ್ ನ್ಯೂಸ್

Train; ವಿಜಯಪುರ-ಮಂಗಳೂರು ರೈಲು ಹೆಚ್ಚುವರಿ ಬೋಗಿಗಳಿಗೆ ಬೇಡಿಕೆ

Train; ವಿಜಯಪುರ-ಮಂಗಳೂರು ರೈಲು ಹೆಚ್ಚುವರಿ ಬೋಗಿಗಳಿಗೆ ಬೇಡಿಕೆ

ಅಕ್ಕಿ ಕೇಂದ್ರ ನೀಡಿದರೂ, ಸಾಗಾಟದ ಹಣ ನೀಡದ ರಾಜ್ಯ ಸರಕಾರ: ಸತೀಶ್‌ ಕುಂಪಲ ಆರೋಪ

ಅಕ್ಕಿ ಕೇಂದ್ರ ನೀಡಿದರೂ, ಸಾಗಾಟದ ಹಣ ನೀಡದ ರಾಜ್ಯ ಸರಕಾರ: ಸತೀಶ್‌ ಕುಂಪಲ ಆರೋಪ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ: ಪರಮೇಶ್ವರ್‌

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ: ಪರಮೇಶ್ವರ್‌

ಹೃದಯಾಘಾತ: ಸುರತ್ಕಲ್‌ ಪರಿಸರದ ಇಬ್ಬರ ಸಾವು

ಹೃದಯಾಘಾತ: ಸುರತ್ಕಲ್‌ ಪರಿಸರದ ಇಬ್ಬರ ಸಾವು

ಸುಜೀರು: ಭಗ್ನ ಪ್ರೇಮಿಯಿಂದ ಚೂರಿ ಇರಿತಕ್ಕೊಳಗಾದ ಯುವತಿ ಚೇತರಿಕೆ

ಸುಜೀರು: ಭಗ್ನ ಪ್ರೇಮಿಯಿಂದ ಚೂರಿ ಇರಿತಕ್ಕೊಳಗಾದ ಯುವತಿ ಚೇತರಿಕೆ

Madikeri: 2 ದನ, ಎಮ್ಮೆ ಕಳ್ಳತನ: ನಾಲ್ವರು ಆರೋಪಿಗಳ ಬಂಧನ

Madikeri: 2 ದನ, ಎಮ್ಮೆ ಕಳ್ಳತನ: ನಾಲ್ವರು ಆರೋಪಿಗಳ ಬಂಧನ

Belthangady: ಹೊಸಂಗಡಿ, ಗರ್ಡಾಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ

Belthangady: ಹೊಸಂಗಡಿ, ಗರ್ಡಾಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramayana Movie: ʼರಾಮಾಯಣʼ ಪಾರ್ಟ್‌ 1,2 ಗೆ ರಣ್ಬೀರ್‌ ಪಡೆಯುವ ಸಂಭಾವನೆ ಎಷ್ಟು?

Ramayana Movie: ʼರಾಮಾಯಣʼ ಪಾರ್ಟ್‌ 1,2 ಗೆ ರಣ್ಬೀರ್‌ ಪಡೆಯುವ ಸಂಭಾವನೆ ಎಷ್ಟು?

1-aa-aa-mras

Sardaar Ji 3; ದಿಲ್ಜಿತ್ ದೋಸಾಂಜ್ ಗೆ ಪಂಜಾಬ್‌ನ ವಿವಿಧ ಪಕ್ಷಗಳ ಸಿಖ್ ನಾಯಕರ ಬೆಂಬಲ

Dhurandhar: ರಕ್ತಸಿಕ್ತ ʼಧುರಂಧರ್‌ʼ‌ ಲುಕ್‌ನಲ್ಲಿ ಮಿಂಚಿದ ರಣ್ವೀರ್; ರಿಲೀಸ್‌ ಡೇಟ್ ಔಟ್

Dhurandhar: ರಕ್ತಸಿಕ್ತ ʼಧುರಂಧರ್‌ʼ‌ ಲುಕ್‌ನಲ್ಲಿ ಮಿಂಚಿದ ರಣ್ವೀರ್; ರಿಲೀಸ್‌ ಡೇಟ್ ಔಟ್

Bollywood: 9000 ಪರದೆಗಳಲ್ಲಿ ರಿಲೀಸ್‌ ಆಗಲಿರುವ ಮೊದಲ ಭಾರತೀಯ ಚಿತ್ರವಾಗಲಿದೆ ʼವಾರ್‌ -2ʼ

Bollywood: 9000 ಪರದೆಗಳಲ್ಲಿ ರಿಲೀಸ್‌ ಆಗಲಿರುವ ಮೊದಲ ಭಾರತೀಯ ಚಿತ್ರವಾಗಲಿದೆ ʼವಾರ್‌ -2ʼ

Jurassic Park: ಡೈನೋಸರ್ ಕುರಿತ ಬಾಲ್ಯದ ಕುತೂಹಲಕ್ಕೆ ಅಳಿಯದ ಸೆಳೆತ

Jurassic Park: ಡೈನೋಸರ್ ಕುರಿತ ಬಾಲ್ಯದ ಕುತೂಹಲಕ್ಕೆ ಅಳಿಯದ ಸೆಳೆತ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಪ್ರೇಮಶೇಖರ್‌, ವಿಕಾಸ ಹೊಸಮನಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ

ಪ್ರೇಮಶೇಖರ್‌, ವಿಕಾಸ ಹೊಸಮನಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ

Train; ವಿಜಯಪುರ-ಮಂಗಳೂರು ರೈಲು ಹೆಚ್ಚುವರಿ ಬೋಗಿಗಳಿಗೆ ಬೇಡಿಕೆ

Train; ವಿಜಯಪುರ-ಮಂಗಳೂರು ರೈಲು ಹೆಚ್ಚುವರಿ ಬೋಗಿಗಳಿಗೆ ಬೇಡಿಕೆ

ಅಕ್ಕಿ ಕೇಂದ್ರ ನೀಡಿದರೂ, ಸಾಗಾಟದ ಹಣ ನೀಡದ ರಾಜ್ಯ ಸರಕಾರ: ಸತೀಶ್‌ ಕುಂಪಲ ಆರೋಪ

ಅಕ್ಕಿ ಕೇಂದ್ರ ನೀಡಿದರೂ, ಸಾಗಾಟದ ಹಣ ನೀಡದ ರಾಜ್ಯ ಸರಕಾರ: ಸತೀಶ್‌ ಕುಂಪಲ ಆರೋಪ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ: ಪರಮೇಶ್ವರ್‌

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ: ಪರಮೇಶ್ವರ್‌

ಹೃದಯಾಘಾತ: ಸುರತ್ಕಲ್‌ ಪರಿಸರದ ಇಬ್ಬರ ಸಾವು

ಹೃದಯಾಘಾತ: ಸುರತ್ಕಲ್‌ ಪರಿಸರದ ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.