Btown: ಅಂದು ಹಣಕ್ಕಾಗಿ ಬಟರ್‌ ಚಿಕನ್‌ ಮಾರಾಟ ಮಾಡುತ್ತಿದ್ದವ ಇಂದು ಬಾಲಿವುಡ್‌ನ ಸ್ಟಾರ್‌ ನಟ

ʼಗಲ್ಲಿ ಬಾಯ್‌ʼ ರಣ್ ವೀರ್ ಸಿಂಗ್ ಅವರ ಬದುಕಿನ ವಿಶೇಷ ಸಂಗತಿಗಳು

Team Udayavani, Jul 6, 2023, 12:44 PM IST

Btown: ಅಂದು ಹಣಕ್ಕಾಗಿ ಬಟರ್‌ ಚಿಕನ್‌ ಮಾರಾಟ ಮಾಡುತ್ತಿದ್ದವ ಇಂದು ಬಾಲಿವುಡ್‌ನ ಸ್ಟಾರ್‌ ನಟ

ಮುಂಬಯಿ: ಬಾಲಿವುಡ್‌ ನಟ ರಣವೀರ್ ಸಿಂಗ್ ಅವರಿಗಿಂದು 38ನೇ ಹುಟ್ಟುಹಬ್ಬದ ಸಂಭ್ರಮ. ಬಿಟೌನ್‌ ನಲ್ಲಿ ನಟನೆ ಮೂಲಕ ತನ್ನದೇ ಆದ ಛಾಪು ಮೂಡಿಸಿ ಅಭಿಮಾನಿಗಳ ವರ್ಗವನ್ನು ಸೃಷ್ಟಿಸಿಕೊಂಡ ʼಗಲ್ಲಿ ಬಾಯ್‌ʼ ಅವರ ಜರ್ನಿ ಅಷ್ಟು ಸುಲಭದಾಗಿರಲಿಲ್ಲ. ಅವರು ಬಣ್ಣದ ಲೋಕಕ್ಕೆ ಕಾಲಿಡುವ  ಹಿಂದಿನ ಹಾಗೂ ಸಿನಿಮಾರಂಗದಲ್ಲಿ ಕಾಣಿಸಿಕೊಂಡ ಬಳಿಕ ಅವರ ಜೀವನದ ಹಲವು ಸ್ವಾರಸ್ಯ ಸಂಗತಿಗಳನ್ನು ಅವರು ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ. ಸಾಮಾನ್ಯ ಪ್ರೇಕ್ಷಕರಿಗೆ ತಿಳಿಯದ ಕೆಲವೊಂದಿಷ್ಟು ಸಂಗತಿಗಳು ಇಲ್ಲಿವೆ.

ರಣವೀರ್ ಸಿಂಗ್ ಅವರ ಬದುಕಿನ ಕೆಲ ವಿಶೇಷ ಸಂಗತಿಗಳು ಇಲ್ಲಿವೆ..

  1. ಇಂದು ರಣ್ವೀರ್‌ ಸಿಂಗ್‌ ಬಾಲಿವುಡ್‌ ನಲ್ಲಿ ಒಬ್ಬ ಸ್ಟಾರ್‌ ನಟನಾಗಿದ್ದಾರೆ. ರಣವೀರ್ ಸಿಂಗ್ ಪ್ರತಿಷ್ಠಿತ ಇಂಡಿಯಾನಾ ವಿಶ್ವವಿದ್ಯಾನಿಲಯ, ಬ್ಲೂಮಿಂಗ್ಟನ್, ಯುಎಸ್ಎಯಿಂದ ಪದವಿಯನ್ನು ಪಡೆದರು. ಅವರು ಅಲ್ಲಿಂದ ಕಲಾ ಪದವಿಯನ್ನು ಪಡೆದಿದ್ದಾರೆ.
  2. ರಣ್‌ ವೀರ್‌ ಸಿಂಗ್‌ ಇಂದು ಬಣ್ಣದ ಲೋಕದಲ್ಲಿ ಮಿಂಚುವ ತಾರೆಯಾಗಿದ್ದಾರೆ. ಅವರ ಸಿನಿಮಾಗಳಿಗಾಗಿಯೇ ಕಾದು ಕೂರುವ ಪ್ರೇಕ್ಷಕರಿದ್ದಾರೆ. ಆದರೆ ಅವರು ನಟನೆಗೆ ಬರುವ ಮುನ್ನ ಸ್ಟಾರ್‌ ಸ್ಟಾರ್‌ಬಕ್ಸ್ ಆಹಾರ ಪರಿಚಾರಕನಾಗಿ (food attendant) ಕೆಲಸವನ್ನು ಮಾಡುತ್ತಿದ್ದರು. ಇದಲ್ಲದೇ ಎಕ್ಸ್ ಟ್ರಾ ಹಣ ಸಂಪಾದಿಸಲು ಬಟರ್ ಚಿಕನ್ ತಯಾರಿಸಿ ಮಾರಾಟ ಮಾಡುತ್ತಿದ್ದರು.ಬಟರ್‌ ಚಿಕನ್‌ ಇಂದಿಗೂ ರಣ್‌ ವೀರ್‌ ಅವರು ಇಷ್ಟಪಡುವ ಭಕ್ಷ್ಯವಾಗಿದೆ.
  3. ರಣವೀರ್ ಸಿಂಗ್ ಅವರ ಪೂರ್ಣ ಹೆಸರು ರಣವೀರ್ ಸಿಂಗ್ ಭಾವನಾನಿ. ಬಣ್ಣದ ಲೋಕಕ್ಕೆ ಬಂದ ಬಳಿಕ ಅವರು ತನ್ನ ಹೆಸರಿನಿಂದ ಭಾವನಾನಿ ಎನ್ನುವ ಉಪನಾಮವನ್ನಯ ತೆಗೆದರು.
  4. ರಣವೀರ್ ಸಿಂಗ್ ‘ಬ್ಯಾಂಡ್ ಬಾಜಾ ಬಾರಾತ್’ಸಿನಿಮಾದಲ್ಲಿ ಬಿಟ್ಟೂ ಶರ್ಮಾ ಪಾತ್ರವನ್ನು ನಿರ್ವಹಿಸಿದರು. ಬಿಟ್ಟೂ ಪಾತ್ರ ಪರ್ಫೆಕ್ಟ್‌ ಆಗಿ ಮೂಡಿಬರಲು ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಅವರು ಬಿಟ್ಟೂ ಶರ್ಮಾ ಎಂಬ ಹೆಸರಿನಲ್ಲಿ ತರಗತಿಗಳಿಗೆ ಹಾಜರಾಗಿದ್ದರು.
  5. ತನ್ನ ಸ್ನೇಹಿತರಿಗಾಗಿ ಸದಾ ಮಿಡಿಯಯುವ ರಣ್‌ ವೀರ್‌ ಸಿಂಗ್‌ ಅವರು ‘ಇಂಕ್‌ಇಂಕ್ ರೆಕಾರ್ಡ್ಸ್’ ಹೆಸರಿನಲ್ಲಿ ತಮ್ಮದೇ ಆದ ಇಂಡಿಪೆಂಡೆಂಟ್ ಮ್ಯೂಸಿಕ್ ಲೇಬಲ್ ನ್ನು ಪ್ರಾರಂಭಿಸಿದ್ದಾರೆ. ರಣವೀರ್ ಸಿಂಗ್ ತಮ್ಮ ಸ್ನೇಹಿತ ನವ್ಜಾರ್ ಎರಾನಿ ಅವರೊಂದಿಗೆ ಇದನ್ನು ಪ್ರಾರಂಭಿಸಿದ್ದಾರೆ.
  6. ರಣ್‌ ವೀರ್‌ ನಟನಾ ಕ್ಷೇತ್ರಕ್ಕೆ ಕಾಲಿಡುವ ಬಹು ಸಮಯಯದ ಹಿಂದೆ , ಜಾಹೀರಾತು ಏಜೆನ್ಸಿಯಲ್ಲಿ ಕಾಪಿರೈಟರ್ ಆಗಿ ಕೆಲಸ ಮಾಡುತ್ತಿದ್ದರು.
  7. ಅನುರಾಗ್ ಕಶ್ಯಪ್ ಅವರ ‘ಬಾಂಬೆ ವೆಲ್ವೆಟ್ʼಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದು, ರಣ್‌ ವೀರ್‌ ಸಿಂಗ್‌ ಅವರು. ಆದರೆ ಆ ಬಳಿಕ ರಣ್ಬೀರ್‌ ಕಪೂರ್ ಅವರನ್ನು ಚಿತ್ರದ ಪ್ರಧಾನ ಪಾತ್ರಕ್ಕೆ ಆಯ್ಕೆ ಮಾಡಲಾಯಿತು.
  8. ‘ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ’ ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ರಣವೀರ್ ಸಿಂಗ್ ಅವರು ವಿಶ್ವ-ಪ್ರಸಿದ್ಧ ಲಾಯ್ಡ್ ಸ್ಟೀವನ್ಸ್ ಅವರೊಂದಿಗೆ 12 ವಾರಗಳ ಸಂಪೂರ್ಣ ರೂಪಾಂತರ ಕಾರ್ಯಕ್ರಮಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
  9. ‘ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ’ ಚಿತ್ರದ ಸೂಪರ್‌ಹಿಟ್ ಟ್ರ್ಯಾಕ್ ‘ತತ್ತಡ್ ತತ್ತಡ್ ‘. ಚಿತ್ರೀಕರಣದ ಸಮಯದಲ್ಲಿ, ರಣವೀರ್ ಸಿಂಗ್ 30 ‘ಕೆಡಿಯಾಸ್’ (ರಾಜಸ್ಥಾನಿ ಉಡುಗೆ) ಧರಿಸಲು ಪ್ರಯತ್ನಿಸಿದ್ದರು. ಆದರೆ ಅಂತಿಮವಾಗಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರು ರಣ್‌ ವೀರ ಅವರಿಗೆ ಒಂದು ಜಾಕೆಟ್ ಮಾತ್ರವಿರಲಿ ಎಂದಿದ್ದರು.
  10. ರಣ್‌ ವೀರ್‌ ಸಿಂಗ್‌ ಅವರು ಪಾತ್ರಕ್ಕಾಗಿ ಎಂತಹ ಡೆಡಿಕೇಟ್ ಆಗಬಲ್ಲರು ಮಾಡಬಲ್ಲರು ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಅವರು ನಟಿಸಿರುವ ʼಪದ್ಮಾವತ್‌ʼ ಚಿತ್ರ. ಈ ಚಿತ್ರದಲ್ಲಿ ರಣ್‌ ವೀರ್‌ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ನಟಿಸಿದ್ದಾರೆ. ಪಾತ್ರ ಪರ್ಫೆಕ್ಟ್ ಆಗಿ ಮೂಡಿಬರಲು ಮೂರು ವಾರಗಳ ಕಾಲ ಅಪಾರ್ಟ್ಮೆಂಟ್ ನಲ್ಲಿ ತನ್ನನ್ನು ತಾನೇ ಲಾಕ್ ಮಾಡಿಕೊಂಡು ದಿನಕ್ಕೆ ಮೂರು ಬಾರಿ ಮಾಂಸವನ್ನು ಸೇವಿಸುತ್ತಿದ್ದರು ಎಂದು ವರದಿಗಳು ಹೇಳಿವೆ.
  11. ಒಂದು ಬಾರಿ ರಣವೀರ್ ಸಿಂಗ್ ಅವರು ತರಗತಿಯಿಂದ ಅಮಾನತುಗೊಂಡಿದ್ದರು. ಅದಕ್ಕೆ ಕಾರಣ ಅವರು ತರಗತಿ ನಡೆಯುತ್ತಿರುವಾಗ ಶಾರುಖ್ ಖಾನ್-ಮನೀಶಾ ಕೊಯಿರಾಲಾ-ಪ್ರೀತಿ ಜಿಂಟಾ ಅಭಿನಯದ ‘ದಿಲ್ ಸೇ’ ಚಿತ್ರದ ‘ಚೈಯಾ ಚೈಯಾ’ ಹಾಡನ್ನು ಕೇಳುತ್ತಿದ್ದರು ಎನ್ನುವುದು.

ಸದ್ಯ ರಣ್‌ ವೀರ್‌ ಸಿಂಗ್‌ ಅವರು ʼ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾದಲ್ಲಿ ಆಲಿಯಾ ಭಟ್‌ ನಾಯಕಿಯಾಗಿ ನಟಿಸಿದ್ದಾರೆ. ಇದೇ ಜು.28 ರಂದು ಸಿನಿಮಾ ತೆರೆಗೆ ಬರಲಿದೆ.

ಟಾಪ್ ನ್ಯೂಸ್

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ

Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ

Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!

Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!

Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್‌ ಶಾ ಮನವಿ

Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್‌ ಶಾ ಮನವಿ

ವೇಷ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

ವೇಷದ ಬಣ್ಣ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ

Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

Lok Sabha Election: ಕಾಂಗ್ರೆಸ್‌ ಅಭ್ಯರ್ಥಿಗೆ ಸೋಲಿನ ಭೀತಿ: ಗಾಯತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ ಅಭ್ಯರ್ಥಿಗೆ ಸೋಲಿನ ಭೀತಿ: ಗಾಯತ್ರಿ ಸಿದ್ದೇಶ್ವರ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.