
ಬಾಲಿವುಡ್ ನಲ್ಲಿ ಈ ಅಂಶಗಳ ಕೊರತೆಯಿದೆ.. ಕಾಜಲ್ ಹೇಳಿಕೆಗೆ ಹಲವರ ಬೆಂಬಲ, ಟ್ರೋಲ್
Team Udayavani, Apr 1, 2023, 10:59 AM IST

ಮುಂಬಯಿ: ಭಾರತ ಚಿತ್ರರಂಗದಲ್ಲಿ ಖ್ಯಾತನಾಮ ನಟಿಯರಲ್ಲಿ ಒಬ್ಬರಾಗಿರುವ ಕಾಜಲ್ ಅಗರ್ವಾಲ್ ಬಾಲಿವುಡ್ ಸಿನಿಮಾರಂಗದ ಇತ್ತೀಚೆಗೆ ಮಾತನಾಡಿರುವ ವಿಚಾರ ಬಿಟೌನ್ ನಲ್ಲಿ ಸದ್ದು ಮಾಡುತ್ತಿದೆ.
ಬಾಲಿವುಡ್ ನಲ್ಲಿ ‘ಸ್ಪೆಷೆಲ್ 26ʼ, ʼಸಿಂಗಂʼನಂತಹ ಸಿನಿಮಾದಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿರುವ ಕಾಜಲ್ ಸೌತ್ ಸಿನಿಮಾದಲ್ಲಿ ಕಾಣಿಸಿಕೊಂಡದ್ದೆಚ್ಚು. ಸಂದರ್ಶನವೊಂದರಲ್ಲಿ ಬಾಲಿವುಡ್ ನಲ್ಲಿರುವ ಕೊರತೆಗಳ ಬಗ್ಗೆ ನಟಿ ಮಾತನಾಡಿದ್ದಾರೆ.
ದಕ್ಷಿಣ ಸಿನಿಮಾರಂಗದಲ್ಲಿ ಸ್ನೇಹಮಯ ವಾತಾವರಣವಿದೆ. ಇಲ್ಲಿ ಯಾವ ಪ್ರತಿಭೆ ಬಂದರೂ ಅವರನ್ನು ಆತ್ಮೀಯವಾಗಿ ಒಪ್ಪಿಕೊಳ್ಳುತ್ತಾರೆ. ಅದ್ಭುತ ತಂತ್ರಜ್ಞರು ಮತ್ತು ನಿರ್ದೇಶಕರು ಇಲ್ಲಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಂನಲ್ಲಿ ಬರುವ ಕಂಟೆಂಟ್ ಗಳು ಜನರನ್ನು ಹೆಚ್ಚು ಸೆಳೆಯುತ್ತದೆ ಎಂದಿದ್ದಾರೆ.
ಇದನ್ನೂ ಓದಿ: “ಬಿಗ್ ಬಾಸ್ ಒಂದು ಸ್ಕ್ರಿಪ್ಟ್ ಕಾರ್ಯಕ್ರಮ..” ಮಾಜಿ ಸ್ಪರ್ಧಿಯ ವ್ಲಾಗ್ ವೈರಲ್
ಇನ್ನು ಬಾಲಿವುಡ್ ಬಗ್ಗೆ ಮಾತನಾಡಿದ ಅವರು, ಹಿಂದಿ ಉದ್ಯಮವು ವ್ಯಾಪಕವಾಗಿ ಗುರುತಿಸಲ್ಪಟ್ಟ ಭಾಷೆಯಾಗಿರುವುದರಿಂದ ಬಹಳಷ್ಟು ಕಲಾವಿದರು ಬಾಲಿವುಡ್ ನಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುತ್ತಾರೆ. ಹಿಂದಿ ಚಿತ್ರರಂಗ ನನ್ನನು ಆತ್ಮೀಯವಾಗಿ ಒಪ್ಪಿಕೊಂಡಿದೆ. ನಾನು ಹಿಂದಿ ಸಿನಿಮಾಗಳನ್ನು ನೋಡುತ್ತಲೇ ಬೆಳೆದಿದ್ದೇನೆ. ನಾನು ಉತ್ತಮವಾದ ಸ್ನೇಹಮಯ ವಾತಾವಾರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ನೈತಿಕತೆ, ಮೌಲ್ಯಗಳು ಮತ್ತು ಶಿಸ್ತು ದಕ್ಷಿಣಕ್ಕೆ ಹೋಲಿಸಿದರೆ ಬಾಲಿವುಡ್ ನಲ್ಲಿ ಅಷ್ಟಾಗಿ ಇಲ್ಲ ಎಂದು ʼಮಗಧೀರʼ ಬೆಡಗಿ ಹೇಳಿದ್ದಾರೆ.
ಕಾಜಲ್ ಅವರ ಹೇಳಿಕೆಗೆ ಬೆಂಬಲದೊಂದಿಗೆ, ಟ್ರೋಲ್ ಗಳು ವ್ಯಕ್ತವಾಗುತ್ತಿದೆ.
ಸದ್ಯ ಕಾಜಲ್ ಕಮಲ್ ಹಾಸನ್ ಅವರ ʼಇಂಡಿಯನ್ -2ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು,ಬಾಲಕೃಷ್ಣ ಅವರ ʼಎನ್ ಬಿಕೆ 108ʼ ಸಿನಿಮಾದಲ್ಲೂ ನಟಿಸಲಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam actor: ಮಲಯಾಳಂನ ಖ್ಯಾತ ಪೋಷಕ ನಟ ಹರೀಶ್ ಪೆಂಗನ್ ನಿಧನ

83ರ ದಿಗ್ಗಜ ನಟನ 29ರ ಪ್ರೇಯಸಿ ಗರ್ಭಿಣಿ: 4ನೇ ಬಾರಿ ತಂದೆಯಾಗಲಿದ್ದಾರೆ Al Pacino

ಮೊದಲ ಪತ್ನಿಯಿಂದ ವಿಚ್ಛೇದನ, 2ನೇ ಪತ್ನಿಯ ಭೇಟಿ.. ಮುಕ್ತವಾಗಿ ಮಾತನಾಡಿದ Ashish Vidyarthi

ನಟಿ Akanksha Dubey Case: ನಟಿಯ ಒಳ ಉಡುಪಿನಲ್ಲಿ ವೀರ್ಯ ಪತ್ತೆ; ತನಿಖೆ ಚುರುಕು

Ira Khan: ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ಆಮಿರ್ ಪುತ್ರಿ; ಫ್ಯಾನ್ಸ್ ಖುಷ್