Updated: 09:44 PM IST
Tuesday 12 Aug, 2025
Updated: 09:44 PM IST
Tuesday 12 Aug, 2025
Team Udayavani
ಮುಂಬಯಿ: ಒಂದೇ ಪ್ರಾಜೆಕ್ಟ್ ನಲ್ಲಿ 5 ಬಾಲಿವುಡ್ (Bollywood) ಸೂಪರ್ ಸ್ಟಾರ್ ಕಾಣಿಸಿಕೊಳ್ಳುತ್ತಿರುವ ಸಿನಿಮಾವೊಂದು ಬಾಲಿವುಡ್ ನಲ್ಲಿ ಇತ್ತೀಚೆಗೆ ಅನೌನ್ಸ್ ಆಗಿತ್ತು. ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಖ್ಯಾತಿಯ ಆದಿತ್ಯ ಧಾರ್ (Aditya Dhar) ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ರಣವೀರ್ ಸಿಂಗ್ ಜೊತೆ ಸಂಜಯ್ ದತ್ (Sanjay Dutt), ಆರ್. ಮಾಧವನ್, (R.Madhavan) ಅಕ್ಷಯ್ ಖನ್ನಾ(Akshaye Khanna) ಮತ್ತು ಅರ್ಜುನ್ ರಾಂಪಾಲ್ (Arjun Rampal) ಜೊತೆಯಾಗಿ ನಟಿಸಲಿದ್ದಾರೆ ಎನ್ನುವುದು ಈ ಸಿನಿಮಾದ ವಿಶೇಷ.
ಪೋಸ್ಟರ್ ಮೂಲಕ ಸಿನಿಮಾ ಅನೌನ್ಸ್ ಆಗಿದೆ. ಆದರೆ ಸಿನಿಮಾ ಯಾವ ವಿಶೇಷ ಕುರಿತು ಎನ್ನುವುದನ್ನು ಚಿತ್ರತಂಡ ರಿವೀಲ್ ಮಾಡಿರಲಿಲ್ಲ.
ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಲಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವಿನ ಭೌಗೋಳಿಕ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಬರಲಿದೆ ಎಂದು ʼಬಾಲಿವುಡ್ ಹಂಗಾಮʼ ವರದಿ ಮಾಡಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಅವರ ಜೀವನದ ಕುರಿತು ಸಿನಿಮಾದಲ್ಲಿರಲಿದ್ದು, ಅವರ ಪಾತ್ರವನ್ನು ರಣವೀರ್ ಸಿಂಗ್ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಬಂದಿರುವ ಲೇಟೆಸ್ಟ್ ವರದಿಗಳ ಪ್ರಕಾರ ಆರ್. ಮಾಧವನ್ ಈ ಪಾತ್ರಕ್ಕೆ ಸೂಕ್ತವಾಗಲಿದ್ದು, ಅಜಿತ್ ದೋವಲ್ ಅವರ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ವರದಿ ತಿಳಿಸಿದೆ.
ಆದರೆ ಸಿನಿಮಾದಲ್ಲಿ ಅಜಿತ್ ದೋವಲ್ ಅವರ ಹೆಸರೇ ಇರಲಿದೆಯೇ ಅಥವಾ ಬೇರೆ ಹೆಸರು ಬಳಸಲಾಗುತ್ತದೆಯೇ ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಆದಿತ್ಯ ಧಾರ್ ತಮ್ಮ ಸಿನಿಮಾದಲ್ಲಿ ಅಜಿತ್ ದೋವಲ್ ಅವರ ಬಗ್ಗೆ ತೋರಿಸುತ್ತಿರುವುದು ಇದು ಎರಡನೇ ಬಾರಿ, ಈ ಹಿಂದೆ ಬಂದ ʼಉರಿʼ ಸಿನಿಮಾದಲ್ಲಿ ಪರೇಶ್ ರಾವಲ್ ಗೋವಿಂದ್ ಭಾರದ್ವಾಜ್ ಪಾತ್ರ ಅಜಿತ್ ದೋವಲ್ ಅವರನ್ನು ಆಧರಿಸಿತ್ತು.
ಸದ್ಯ ಸಿನಿಮಾದ ಟೈಟಲ್ ಇನ್ನಷ್ಟೇ ಅನೌನ್ಸ್ ಆಗಬೇಕಿದ್ದು, ಜಿಯೋ ಸ್ಟುಡಿಯೋಸ್‌ನಿಂದ ಜ್ಯೋತಿ ದೇಶಪಾಂಡೆ, ಲೋಕೇಶ್ ಧಾರ್ ಮತ್ತು ಆದಿತ್ಯ ಧಾರ್ ಅವರ ಬ್ಯಾನರ್ B62 ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾಗಲಿದೆ.
21 hours ago
22 hours ago
Yesterday
3 days ago
5 days ago
6 days ago
7 days ago
8 days ago
10 days ago
11 days ago