ʼಪಠಾಣ್ʼ ಟ್ರೇಲರ್ ರಿಲೀಸ್ ಡೇಟ್ ಔಟ್: ಹೆಚ್ಚಾಯಿತು ಫ್ಯಾನ್ಸ್ ಕುತೂಹಲ
Team Udayavani, Jan 4, 2023, 4:41 PM IST
ಮುಂಬಯಿ: ಬಿಟೌನ್ ನಲ್ಲಿ ಟ್ರೆಂಡ್ ಸೃಷ್ಟಿಸಿರುವ ʼಪಠಾಣ್ʼ ಸಿನಿಮಾ ಇದೇ ತಿಂಗಳಿನಲ್ಲಿ ತೆರಗೆ ಬರಲಿದೆ. ಶಾರುಖ್ ಖಾನ್ – ದೀಪಿಕಾ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆಯನ್ನು ಕಿಂಗ್ ಖಾನ್ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.
ʼಬೇಷರಂ ರಂಗ್ʼ ಹಾಗೂ ʼಜೂಮೇ ಜೋ ಪಠಾಣ್ʼ ಹಾಡುಗಳನ್ನು ರಿಲೀಸ್ ಮಾಡಿ ಸುದ್ದಿಯಾಗಿರುವ ಸಿನಿಮಾ ತಂಡ ಚಿತ್ರದ ಟ್ರೇಲರ್ ರಿಲೀಸ್ ಮಾಡುವ ಯೋಜನೆಯಲ್ಲಿದ್ದು, ಟ್ರೇಲರ್ ರಿಲೀಸ್ ಡೇಟ್ ಹೊರ ಬಿದ್ದಿದೆ.
ಸಿನಿ ಮಾರುಕಟ್ಟೆಯ ವಿಶ್ಲೇಷಕ ತರಣ್ ಆದರ್ಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪಠಾಣ್ ಸಿನಿಮಾದ ಪೋಸ್ಟರ್ ಹಂಚಿಕೊಂಡು, ಇದೇ ಜ.10 ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ ಎಂದು ಬರೆದುಕೊಂಡಿದ್ದಾರೆ.
ಹಿಟ್ ಜೋಡಿ ಶಾರುಖ್, ದೀಪಿಕಾ ಜೊತೆ ಜಾನ್ ಅಬ್ರಹಾಂ ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದಾರ್ಥ್ ಆನಂದ್ ʼಪಠಾಣ್ʼ ನಿರ್ದೇಶನ ಮಾಡಿದ್ದು, ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಇದೇ ಜ.25 ರಂದು ಸಿನಿಮಾ ತೆರೆಗೆ ಬರಲಿದ್ದು, ಟಿಕೆಟ್ ಖರೀದಿಗಾಗಿ ಶಾರುಖ್ ಫ್ಯಾನ್ಸ್ ಕಾಯುತ್ತಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Movie: ʼರಾವಣʼನ ಪತ್ನಿಯಾಗಿ ಯಶ್ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?
ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ
ಮೀಟಿಂಗ್ ಮಾಡೋಕ್ಕೂ ರೇಟ್ ಫಿಕ್ಸ್: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ
Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?
Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ