“ಆರ್‌ ಆರ್‌ ಆರ್‌” ಬಗ್ಗೆ .. ʼಛೆಲ್ಲೋ ಶೋʼ ನಿರ್ದೇಶಕ ಹೇಳಿದ್ದೇನು?

ʼದಿ ಕಾಶ್ಮೀರ್‌ ಫೈಲ್ಸ್‌ʼ, ʼಆರ್ ಆರ್‌ ಆರ್‌ʼ ರೇಸ್‌ ನಿಂದ ಹೊರ ಬಿದ್ದಿದೆ

Team Udayavani, Sep 21, 2022, 3:46 PM IST

“ಆರ್‌ ಆರ್‌ ಆರ್‌” ಬಗ್ಗೆ ನಾನೇನು ಹೇಳಲ್ಲ.. ʼಛೆಲ್ಲೋ ಶೋʼ ನಿರ್ದೇಶಕ ಹೇಳಿದ್ದೇನು?

ಮುಂಬಯಿ: 95ನೇ ಆಸ್ಕರ್‌  ಅಕಾಡೆಮಿ ಆವಾರ್ಡ್ಸ್‌ ಗೆ ಭಾರತದಿಂದ ಅಧಿಕೃತವಾಗಿ ಗುಜರಾತಿ ಸಿನಿಮಾ ʼಛೆಲ್ಲೋ ಶೋʼ ಎಂಟ್ರಿ ಪಡೆದುಕೊಂಡಿದೆ. ಭಾರೀ ನಿರೀಕ್ಷೆ ಹುಟ್ಟಿಸಿದ್ದ ʼಆರ್ ಆರ್‌ ಆರ್‌ʼ, ʼದಿ ಕಾಶ್ಮೀರ್‌ ಫೈಲ್ಸ್‌ʼ ಆಸ್ಕರ್‌ ರೇಸ್‌ ನಿಂದ ಹೊರ ಬಿದ್ದಿದೆ.

ರಾಜಮೌಳಿ ಅವರ ʼಆರ್ ಆರ್‌ ಆರ್‌ʼ ಹಾಗೂ ವಿವೇಕ್‌ ಅಗ್ನಿಹೋತ್ರಿ ಅವರ ʼದಿ ಕಾಶ್ಮೀರ್‌ ಫೈಲ್ಸ್‌ʼ ದೊಡ್ಡ ಮಟ್ಟದ ಹಿಟ್‌ ಆಗಿತ್ತು. ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದ ಈ ಚಿತ್ರಗಳು ಭಾರತ ಹಾಗೂ ವಿದೇಶದಲ್ಲೂ ಒಳ್ಳೆಯ ಅಭಿಪ್ರಾಯವನ್ನು ಪಡೆದುಕೊಂಡಿತ್ತು. ಎರಡೂ ಚಿತ್ರಗಳು ಆಸ್ಕರ್‌ ಗೆ ನಾಮಿನೇಟ್‌ ಆಗುತ್ತವೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಮಂಗಳವಾರ ಭಾರತದಿಂದ ಆಸ್ಕರ್‌ ಗೆ ಪಾನ್‌ ನಳಿನ್‌ ನಿರ್ದೇಶನದ ʼಛೆಲ್ಲೋ ಶೋʼ  ಅಧಿಕೃತ ಎಂಟ್ರಿ ಪಡೆದ ಬಳಿಕ ʼದಿ ಕಾಶ್ಮೀರ್‌ ಫೈಲ್ಸ್‌ʼ, ʼಆರ್ ಆರ್‌ ಆರ್‌ʼ ರೇಸ್‌ ನಿಂದ ಹೊರ ಬಿದ್ದಿದೆ.

ʼಛೆಲ್ಲೋ ಶೋʼ ಆಸ್ಕರ್‌ ಗೆ ಎಂಟ್ರಿಯಾದ ಬಳಿಕ ನಿರ್ದೇಶಕ ಪಾನ್‌ ನಳಿನ್‌ ಅವರ ಬಳಿ ಮಾಧ್ಯಮದವರು, ʼಆರ್ ಆರ್‌ ಆರ್‌ʼ ಹಾಗೂ ʼಕಾಶ್ಮೀರ್‌ ಫೈಲ್ಸ್‌ʼ ಚಿತ್ರವನ್ನು ಮೀರಿಸಿದ್ದೀರಿ ಈ ಬಗ್ಗೆ ಏನು ಹೇಳುತ್ತೀರಿ ಎಂದಾಗ ನಳಿನ್‌ , “ಕ್ಷಮಿಸಿ ಈ ಬಗ್ಗೆ ನಾನೇನು ಹೇಳಲ್ಲ. ಇದು 17 ಜನರನ್ನು ಒಳಗೊಂಡ ತೀರ್ಪುಗಾರರ ಅವಿರೋಧ ಆಯ್ಕೆಯಾಗಿತ್ತು. ತೀರ್ಪುಗಾರರು ಮಾಧ್ಯಮದಲ್ಲಿ ಸುದ್ದಿಯಾಗುತ್ತಿರುವ ಇತರ ಎರಡು ಸಿನಿಮಾ (ʼ ಆರ್ ಆರ್‌ ಆರ್‌ʼ ಹಾಗೂ ʼಕಾಶ್ಮೀರ್‌ ಫೈಲ್ಸ್‌ʼ)ವನ್ನು ನೋಡಿದ್ದಾರೆ” ಎಂದು ಪ್ರತಿಕ್ರಿಯೆ ನೀಡಿದರು.

ಇನ್ನು ʼಆರ್ ಆರ್‌ ಆರ್‌ʼ ಗೆ ಆಸ್ಕರ್‌ ಗೆ ಎಂಟ್ರಿಯಾಗಲು ಇನ್ನೊಂದು ಹಾದಿಯೂ ಇದೆ. ಯುಎಸ್‌ ಎಯಲ್ಲಿ ಚಿತ್ರವನ್ನು ವಿತರಿಸಿದ ವೇರಿಯನ್ಸ್ ಫಿಲ್ಮ್ಸ್ ವಿವಿಧ ವಿಭಾಗದಲ್ಲಿ ಆರ್ ಆರ್‌ ಆರ್‌ ನ್ನು ಆಸ್ಕರ್‌ ಗೆ ಕಳುಹಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

‘ಛೆಲ್ಲೋ ಶೋ’ ಚಿತ್ರ 9 ವರ್ಷದ ಬಾಲಕನೊಬ್ಬನಿಗೆ ಸಿನಿಮಾದ ಮೇಲೆ ಉಂಟಾಗುವ ಪ್ರೀತಿಯ ಕಥೆಯನ್ನು ವಿವರಿಸುತ್ತದೆ. ಈ ಸಿನಿಮಾ ಕಳೆದ ವರ್ಷ ಜೂನ್‌ನಲ್ಲಿ ಟ್ರಿಬೆಕಾ ಚಲನಚಿತ್ರೋತ್ಸವದಲ್ಲಿ ಪ್ರೀಮಿಯರ್‌ ಆಗಿತ್ತು. ಭವಿನ್‌ ರಾಬರಿ, ಭವೇಶ್‌ ಶ್ರೀಮಲಿ, ರಿಚಾ ಮೀನಾ ಸೇರಿ ಅನೇಕರು ಅಭಿನಯಿಸಿರುವ ಸಿನಿಮಾ ಸ್ಪೇನ್‌ನ ಚಲನ ಚಿತ್ರೋತ್ಸವದಲ್ಲಿ ಗೋಲ್ಡನ್‌ ಸ್ಪೈಕ್‌ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೇ ಅ.14ರಂದು “ಲಾಸ್ಟ್‌ ಫಿಲಂ ಶೋ'(ಇಂಗ್ಲಿಷ್‌) ಹೆಸರಿನಲ್ಲಿ ವಿಶ್ವಾದ್ಯಂತ ತೆರೆ ಕಾಣಲಿದೆ. ಅದಕ್ಕೂ ಮೊದಲೇ ಈ ಚಿತ್ರ ಆಸ್ಕರ್ ರೇಸ್ ನಲ್ಲಿ ಸ್ಥಾನ ಪಡೆದುಕೊಂಡಿರುವುದು ವಿಶೇಷ.

ಟಾಪ್ ನ್ಯೂಸ್

ಸೇಡಿಗಾಗಿ ಪಕ್ಷ ಸ್ಥಾಪಿಸಿಲ್ಲ, ಯಾರಿಗೂ ಹೆದರಲ್ಲ: ಜನಾರ್ದನ ರೆಡ್ಡಿ

ಸೇಡಿಗಾಗಿ ಪಕ್ಷ ಸ್ಥಾಪಿಸಿಲ್ಲ, ಯಾರಿಗೂ ಹೆದರಲ್ಲ: ಜನಾರ್ದನ ರೆಡ್ಡಿ

ಸೋಮಶೇಖರ ರೆಡ್ಡಿ ವಿರುದ್ಧ ಅತ್ತಿಗೆ ಸ್ಪರ್ಧೆ

ಸೋಮಶೇಖರ ರೆಡ್ಡಿ ವಿರುದ್ಧ ಅತ್ತಿಗೆ ಸ್ಪರ್ಧೆ

ಮತದಾರರೇ ಭ್ರಷ್ಟರಾಗಿದ್ದಾರೆ ನಾನು ಚುನಾವಣೆಗೆ ನಿಲ್ಲಲಾರೆ: ಹಳ್ಳಿ ಹಕ್ಕಿ ಹೊಸ ರಾಗ

ಮತದಾರರೇ ಭ್ರಷ್ಟರಾಗಿದ್ದಾರೆ ನಾನು ಚುನಾವಣೆಗೆ ನಿಲ್ಲಲಾರೆ: ಹಳ್ಳಿ ಹಕ್ಕಿ ಹೊಸ ರಾಗ

ಆರ್‌ಬಿಐ ಸಲಹಾ ಸಮಿತಿ ಸದಸ್ಯರಾಗಿ ವಿ.ರಾಮಚಂದ್ರ ನೇಮಕ

ಆರ್‌ಬಿಐ ಸಲಹಾ ಸಮಿತಿ ಸದಸ್ಯರಾಗಿ ವಿ.ರಾಮಚಂದ್ರ ನೇಮಕ

ರಮೇಶ್‌ ಜಾರಕಿಹೊಳಿ ಬೇನಾಮಿ ಆಸ್ತಿ ಕುರಿತು ತನಿಖೆ ಮಾಡಿಸಲಿ

ರಮೇಶ್‌ ಜಾರಕಿಹೊಳಿ ಬೇನಾಮಿ ಆಸ್ತಿ ಕುರಿತು ತನಿಖೆ ಮಾಡಿಸಲಿ

ಚಿರತೆ ಸೆರೆ ಹಿಡಿಯಲು ಕಾರ್ಯಪಡೆ ರಚನೆ: ಸರ್ಕಾರ ಆದೇಶ

ಚಿರತೆ ಸೆರೆ ಹಿಡಿಯಲು ಕಾರ್ಯಪಡೆ ರಚನೆ: ಸರ್ಕಾರ ಆದೇಶ

ಮಾಜಿ ಕಾನೂನು ಸಚಿವ, ಖ್ಯಾತ ವಕೀಲ ಶಾಂತಿ ಭೂಷಣ್‌ ಇನ್ನಿಲ್ಲ

ಮಾಜಿ ಕಾನೂನು ಸಚಿವ, ಖ್ಯಾತ ವಕೀಲ ಶಾಂತಿ ಭೂಷಣ್‌ ಇನ್ನಿಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shah Rukh Khan’s Film Set To Be Fastest To Make 300 Crore

ಪಠಾಣ್ ಅಬ್ಬರಕ್ಕೆ ನಡುಗಿದ ಬಾಕ್ಸಾಫೀಸ್: ಭಾರತದಲ್ಲೇ 300 ಕೋಟಿ ಗಳಿಸಿದ ಶಾರುಖ್ ಸಿನಿಮಾ

tdy-3

ಮೊದಲ ಬಾರಿ ಮಗಳ ಮುಖ ರಿವೀಲ್‌ ಮಾಡಿದ ಪಿಂಕಿ: ವೈರಲ್‌ ಆಯಿತು ಕ್ಯೂಟ್‌ ಮಾಲ್ತಿ ಫೋಟೋ

1–qw-qwe

ಪಠಾಣ್‌ ಯಶಸ್ಸು; ಜೀವನವನ್ನು ಮತ್ತೆ ಸಿನಿಮಾಕ್ಕೆ ತಂದಿದ್ದಕ್ಕಾಗಿ ಧನ್ಯವಾದಗಳು ಎಂದ ಶಾರುಖ್

rajani-k

ಹೆಸರು ದುರ್ಬಳಕೆ: ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ ರಜನಿಕಾಂತ್

ಪಠಾಣ್‌: ಮೂರು ದಿನದಲ್ಲಿ 313 ಕೋಟಿ ರೂ. ಕಲೆಕ್ಷನ್‌

ಪಠಾಣ್‌: ಮೂರು ದಿನದಲ್ಲಿ 313 ಕೋಟಿ ರೂ. ಕಲೆಕ್ಷನ್‌

MUST WATCH

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಹೊಸ ಸೇರ್ಪಡೆ

ಸೇಡಿಗಾಗಿ ಪಕ್ಷ ಸ್ಥಾಪಿಸಿಲ್ಲ, ಯಾರಿಗೂ ಹೆದರಲ್ಲ: ಜನಾರ್ದನ ರೆಡ್ಡಿ

ಸೇಡಿಗಾಗಿ ಪಕ್ಷ ಸ್ಥಾಪಿಸಿಲ್ಲ, ಯಾರಿಗೂ ಹೆದರಲ್ಲ: ಜನಾರ್ದನ ರೆಡ್ಡಿ

ಸೋಮಶೇಖರ ರೆಡ್ಡಿ ವಿರುದ್ಧ ಅತ್ತಿಗೆ ಸ್ಪರ್ಧೆ

ಸೋಮಶೇಖರ ರೆಡ್ಡಿ ವಿರುದ್ಧ ಅತ್ತಿಗೆ ಸ್ಪರ್ಧೆ

ಮತದಾರರೇ ಭ್ರಷ್ಟರಾಗಿದ್ದಾರೆ ನಾನು ಚುನಾವಣೆಗೆ ನಿಲ್ಲಲಾರೆ: ಹಳ್ಳಿ ಹಕ್ಕಿ ಹೊಸ ರಾಗ

ಮತದಾರರೇ ಭ್ರಷ್ಟರಾಗಿದ್ದಾರೆ ನಾನು ಚುನಾವಣೆಗೆ ನಿಲ್ಲಲಾರೆ: ಹಳ್ಳಿ ಹಕ್ಕಿ ಹೊಸ ರಾಗ

ಆರ್‌ಬಿಐ ಸಲಹಾ ಸಮಿತಿ ಸದಸ್ಯರಾಗಿ ವಿ.ರಾಮಚಂದ್ರ ನೇಮಕ

ಆರ್‌ಬಿಐ ಸಲಹಾ ಸಮಿತಿ ಸದಸ್ಯರಾಗಿ ವಿ.ರಾಮಚಂದ್ರ ನೇಮಕ

ರಮೇಶ್‌ ಜಾರಕಿಹೊಳಿ ಬೇನಾಮಿ ಆಸ್ತಿ ಕುರಿತು ತನಿಖೆ ಮಾಡಿಸಲಿ

ರಮೇಶ್‌ ಜಾರಕಿಹೊಳಿ ಬೇನಾಮಿ ಆಸ್ತಿ ಕುರಿತು ತನಿಖೆ ಮಾಡಿಸಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.