ಮನೆಗೆಲಸ ಮಾಡುವುದರಲ್ಲಿ ನನಗೆ ಹೆಮ್ಮೆ ಇದೆ: ದೀಪಿಕಾ ಪಡುಕೋಣೆ
Team Udayavani, Jan 22, 2021, 9:00 PM IST
ಮುಂಬೈ: ಬಾಲಿವುಡ್ ಅಂಗಳದ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆಯ ಜೀವನ ಶೈಲಿ ಹೇಗಿರಬಹುದು? ಅವರಿಗೆ ಕೈಗೊಬ್ಬರು ಕಾಲಿಗೊಬ್ಬರು ಸೇವಕರಿರಬಹುದಾ? ಎಂದು ಹಲವರು ಅಂದುಕೊಂಡಿರಬಹುದು. ಆದರೆ ಆ ಯೋಚನೆ ಸುಳ್ಳಂತೆ, ದೀಪಿಕಾ ತಮ್ಮ ಎಲ್ಲಾ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರಂತೆ. ಈ ಕುರಿತಾಗಿ ಆಕೆಯ ಪತಿ ರಣವೀರ್ ಸಿಂಗ್ “ನೀನು ಯಾಕೆ ಅಷ್ಟು ಕೆಲಸ ಮಾಡುತ್ತಿಯಾ” ಎಂದು ಪ್ರಶ್ನಿಸಿದ್ದಾರಂತೆ.
ಈ ಕುರಿತಾಗಿ ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿರುವ ದೀಪಿಕಾ, ತನಗೆ ತನ್ನ ವೃತ್ತಿ ಜೀವನದ ಜೊತೆಗೆ ಮನೆ ನಿರ್ವಹಣೆಯನ್ನೂ ಮಾಡಬೇಕು. ಅದು ನನಗೆ ತುಂಬಾ ಸಂತೋಷವನ್ನು ಉಂಟು ಮಾಡುತ್ತದೆ ಎಂದಿದ್ದಾರೆ.
ನಾನು ಪ್ರತಿ ನಿತ್ಯ ಮನೆಯ ಕೆಲಸಗಳನ್ನು ಮಾಡುತ್ತೇನೆ, ನನ್ನ ಬಟ್ಟೆಗಳನ್ನು ಮಡಚಿ ಇಡುತ್ತೇನೆ , ಹೊರಗಡೆ ಹೋಗಿ ಬಂದ ನಂತರ ನನ್ನ ಲಗೇಜ್ ನಲ್ಲಿರುವ ಬಟ್ಟೆಗಳನ್ನು ತೆಗೆದು ರೂಮ್ ನಲ್ಲಿ ಆಯಾ ಜಾಗದಲ್ಲಿ ಜೋಡಿಸುತ್ತೇನೆ, ಮನೆಯಲ್ಲಿ ಯಾವುದೇ ಕಾರ್ಯಕ್ರಮಗಳಿದ್ದಾಗ ಬೇರೆಯವರಿಗೆ ಕೆಲಸಗಳನ್ನು ವಹಿಸದೆ ನಾನೇ ಯೋಜನೆ ರೂಪಿಸಿ ಕೆಲಸ ಮಾಡುತ್ತೇನೆ. ಅಡುಗೆಯನ್ನೂ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ಪೊಕೊ ಸಿ3 : ಒಂದು ಮಿಲಿಯನ್ ಯೂನಿಟ್‌ಗಳ ಮಾರಾಟ
ಸಿನಿಮಾದ ಜೊತೆಗೆ ಮನೆಯಲ್ಲಿಯೂ ಕೆಲಸ ಮಾಡುವುದನ್ನು ಕಂಡು ಪತಿ ರಣವೀರ್ ಸಿಂಗ್, “ನೀನು ಯಾಕೆ ಅಷ್ಟು ಕೆಲಸ ಮಾಡುತ್ತಿಯಾ” ಎಂಬುದಾಗಿ ಪ್ರಶ್ನಿಸಿದ್ದು, ಇದಕ್ಕೆ ನಾನೂ ಈ ಕೆಲಸಗಳನ್ನು ಮಾಡುವುದರಲ್ಲಿ ನನಗೆ ಸಂತೋಷವಿದೆ, ಹೆಮ್ಮೆ ಇದೆ ಎಂದಿರುವುದಾಗಿ ತಿಳಿಸಿದ್ದಾರೆ,
ರಣವೀರ್ ಕುರಿತು ದೀಪಿಕಾ ಮಾತು
ಪತಿ ರಣವೀರ್ ಕುರಿತಾಗಿ ದೀಪಿಕಾ ಮಾತನಾಡಿದ್ದು, ನನ್ನ ಮತ್ತು ರಣವೀರ್ ವ್ಯಕ್ತಿತ್ವ ಬೇರೆ ಬೇರೆ. ಆದರೆ ನಾವು ಕಳೆದ ಎಂಟು ವರ್ಷಗಳಿಂದ ಜೊತೆಯಲ್ಲಿದ್ದೇವೆ. ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಿದ್ದೇವೆ. ಅದೇ ನಮ್ಮ ದಾಂಪತ್ಯದ ಗುಟ್ಟು ಎಂದು ಹೇಳಿದ್ದಾರೆ. ನನಗೆ ರಣವೀರ್ ಮನಸ್ಸಿನ ಕುರಿತು ಎಲ್ಲ ತಿಳಿದಿದೆ. ಅವರು ಒಬ್ಬ ಅದ್ಭುತ ವ್ಯಕ್ತಿ ಎಂದಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಈವರೆಗೆ 1.38 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ: ಡಾ.ಕೆ.ಸುಧಾಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿಕೆ ತಪ್ಪುನಿರ್ಧಾರ; ಆದರೆ RSS ಇಂದು.. :ರಾಹುಲ್ ಗಾಂಧಿ
ನಿತ್ಯಭವಿಷ್ಯ: ಈ ರಾಶಿಯವರು ಇಂದು ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ವಹಿಸಿ !
ಕಾಂಗ್ರೆಸ್ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್ ಪ್ರಯತ್ನ
ನಾಳೆಯಿಂದ ಬಜೆಟ್ ಅಧಿವೇಶನ : ಸಿ.ಡಿ. ಬಾಂಬ್, ಮೀಸಲಾತಿ ಸದ್ದಿನ ನಿರೀಕ್ಷೆ
ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ