ನಾನು ಅಲ್ಲಿಗೆ ಹೋದರೆ ನನ್ನನ್ನು ಕೊಲ್ಲುತ್ತಾರೆ.. ʼThe Diary of West Bengal’ ನಿರ್ದೇಶಕ

Team Udayavani, May 29, 2023, 10:32 AM IST

ನಾನು ಅಲ್ಲಿಗೆ ಹೋದರೆ ನನ್ನನ್ನು ಕೊಲ್ಲುತ್ತಾರೆ.. ʼThe Diary of West Bengal’ ನಿರ್ದೇಶಕ

ಕೋಲ್ಕತ್ತಾ: ದೇಶದಲ್ಲಿ ಸದ್ಯ ʼದಿ ಕೇರಳ ಸ್ಟೋರಿʼ ಸಿನಿಮಾದ ಚರ್ಚೆಗಳು ಹುಟ್ಟಿಕೊಂಡಿದೆ. ಸಿನಿಮಾ ಬಿಡುಗಡೆಯಾಗಿ ನಾಲ್ಕು ವಾರಗಳು ಕಳೆದಿದೆ. ಇದೀಗ ಸತ್ಯ ಘಟನೆಗಳನ್ನು ಇಟ್ಟುಕೊಂಡು ಮತ್ತೊಂದು ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ.

ʼದಿ ಡೈರಿ ಆಫ್‌ ವೆಸ್ಟ್‌ ಬೆಂಗಾಲ್‌ʼ ಎನ್ನುವ ಸಿನಿಮಾ ತೆರೆಗೆ ಬರುವ ಮುನ್ನವೇ ವಿವಾದಕ್ಕೆ ಕಾರಣವಾಗಿದೆ. ಸನೋಜ್ ಮಿಶ್ರಾ ನಿರ್ದೇಶನದ ಸಿನಿಮಾ ಪಶ್ಚಿಮ ಬಂಗಾಳದಲ್ಲಿ ಉಂಟಾದ ಗಲಭೆ, ಘರ್ಷಣೆ, ಸಾಮೂಹಿಕ ಅತ್ಯಾಚಾರ, ಹಿಂದೂಗಳ ಹತ್ಯೆ ರಾಜಕೀಯ ವಿವಾದಗಳ ಸುತ್ತ ಸಾಗುವ ಕಥೆಯನ್ನು ಒಳಗೊಂಡಿದೆ. ಸಿನಿಮಾ ತಂಡ ಇದೊಂದು ಸತ್ಯ ಘಟನೆ ಆಧಾರಿತ ಸಿನಿಮಾವೆಂದು ಹೇಳಿದೆ. ಮೊದಲ ಹಂತವಾಗಿ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡಲಾಗಿದೆ.

ಟ್ರೇಲರ್‌ ನಲ್ಲಿನ ಕೆಲವೊಂದು ಅಂಶಗಳು ವಿವಾದಕ್ಕೆ ಕಾರಣವಾಗಿದೆ. ಮುಖ್ಯವಾಗಿ ಪಶ್ಚಿಮ ಬಂಗಾಳ ಈಗ  ಕಾಶ್ಮೀರಗಿಂತ ಕಠೋರವಾಗಿದೆ ಎನ್ನುವ ಡೈಲಾಗ್‌ ಸೇರಿದಂತೆ ಕೆಲ ಅಂಶಗಳು ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ನಿರ್ದೇಶಕರ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಸನೋಜ್ ಮಿಶ್ರಾ ಅವರಿಗೆ ಮೇ.30ರ ಒಳಗೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದ್ದಾರೆ. ಚಿತ್ರದ ಟ್ರೇಲರ್‌ ನಲ್ಲಿ ಹೇಳಿರುವ ಅಂಶಗಳ ಸತ್ಯಾಸತ್ಯತೆಯನ್ನು ತಿಳಿಯಲು ಅವರನ್ನು ವಿಚಾರಣೆ ಮಾಡಲಾಗುವುದೆಂದು ನೋಟಿಸ್‌ ನೀಡಲಾಗಿದೆ.

ಇದನ್ನೂ ಓದಿ: Bollywood: ಪ್ರಿಯಕರನ ಖಾಸಗಿ ಫೋಟೋ ಹಂಚಿಕೊಂಡ ಮಲೈಕಾ: ನೆಟ್ಟಿಗರಿಂದ ಟ್ರೋಲ್

ನನ್ನ ಧ್ವನಿಯನ್ನು ಮೌನಗೊಳಿಸಲಾಗುತ್ತಿದೆ. ಮೇ 30 ರ ಒಳಗೆ ಕೋಲ್ಕತ್ತಾದ ಆಮ್ಹೆರ್ಸ್ಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗಾಗಿ ಪೊಲೀಸರ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ನನ್ನನು ಬಂಧಿಸಬಹುದು. ನಾನು ಅಲ್ಲಿಗೆ ಹೋದರೆ ನನ್ನನ್ನು ಬಂಗಾಳದಲ್ಲಿ ಕೊಲ್ಲಬಹುದು” ಎಂದು ʼಇಂಡಿಯಾ ಟುಡೇ” ಗೆ ನಿರ್ದೇಶಕ ಸನೋಜ್ ಮಿಶ್ರಾ ಹೇಳಿದ್ದಾರೆ.

“ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿರುವ ಮಾತನಾಡುವ ಹಕ್ಕನ್ನು ಹತ್ತಿಕ್ಕುವ ಯತ್ನ ನಡೆಸಲಾಗುತ್ತಿದೆ. ನಾನು ಯಾವುದೇ ಅಕ್ರಮ ಮಾಡಿಲ್ಲ. “ನಾನು ದೇಶವಿರೋಧಿಯಲ್ಲ. ನಾನು ಸಮಾಜಕ್ಕಾಗಿ ದುಡಿಯುವ ವ್ಯಕ್ತಿ” ಎಂದು ಅವರು ಹೇಳಿದರು.

“ಪಶ್ಚಿಮ ಬಂಗಾಳದಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ. ಸರಕಾರ ನನ್ನ ವಿರುದ್ಧ ಪ್ರಕರಣ ದಾಖಲಿಸುವ ಬದಲು ಈ ವಿಷಯಗಳತ್ತ ಗಮನ ಹರಿಸಬೇಕು” ಎಂದು ಮಿಶ್ರಾ ಹೇಳಿದರು.

ತಮ್ಮ ಸಿನಿಮಾ ಬಂಗಾಳದ ರಾಜಕೀಯವನ್ನು ಆಧರಿಸಿದ್ದು, ಯಾವುದೂ ಅಕ್ರಮವಲ್ಲ ಎಂದು ಹೇಳಿದ್ದಾರೆ. ಸ್ಕ್ರಿಪ್ಟ್ ಕೆಲವು ನೈಜ ಕಥೆಗಳನ್ನು ಆಧರಿಸಿದೆ ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

1-csadasd

Cauvery Water; ಕಾಂಗ್ರೆಸ್‌ ಸರ್ಕಾರ ಅಸಮರ್ಥ: ಬಿಜೆಪಿ- ಜೆಡಿಎಸ್ ಜಂಟಿ ಪ್ರತಿಭಟನೆ

vatal

September 29 ರಂದು ಕರ್ನಾಟಕ ಬಂದ್‌ ; ನೂರಾರು ಸಂಘಟನೆಗಳ ಬೆಂಬಲ

Goa; ಈ ಕಾರಣಕ್ಕೆ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿಲ್ಲ: ತಾನಾವಡೆ

Goa; ಈ ಕಾರಣಕ್ಕಾಗಿ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿಲ್ಲ: ತಾನಾವಡೆ

1-sasad-s

Muslim ಮಹಿಳೆಯರ ಪರವಾಗಿ ಏಕೆ ನಿಲ್ಲಲಿಲ್ಲ?: ವಿಪಕ್ಷಗಳ ವಿರುದ್ಧ ಪ್ರಧಾನಿ ಕಿಡಿ

1-fs-sad

Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!

BYJU’s Lay Off:  ಆತಂಕದಲ್ಲಿ ಬೈಜೂಸ್‌ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

BYJU’s Lay Off:  ಆತಂಕದಲ್ಲಿ ಬೈಜೂಸ್‌ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

1-saadsad

India-Canada ಸಂಬಂಧ ಹದಗೆಡಿಸಲು ನಿಜ್ಜರ್‌ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

Sreeleela: ಪ್ರಭಾಸ್‌ಗೆ ಶ್ರೀಲೀಲಾ ನಾಯಕಿ!

TDY-11

Academy Awards: ಭಾರತದಿಂದ ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದ ಮಲಯಾಳಂನ “2018”

‘Leo’ ಆಡಿಯೋ ಬಿಡುಗಡೆ ಕಾರ್ಯಕ್ರಮ ರದ್ದು; ರಾಜಕೀಯ ಒತ್ತಡವೇ ಕಾರಣವೆಂದ ದಳಪತಿ ಫ್ಯಾನ್ಸ್

‘Leo’ ಆಡಿಯೋ ಬಿಡುಗಡೆ ಕಾರ್ಯಕ್ರಮ ರದ್ದು; ರಾಜಕೀಯ ಒತ್ತಡವೇ ಕಾರಣವೆಂದ ದಳಪತಿ ಫ್ಯಾನ್ಸ್

MM Keeravani: “ಭಾರತದಲ್ಲಿ ಸಂಗೀತ ತಾರೆಯರಿಲ್ಲ…” ಆಸ್ಕರ್‌ ವಿಜೇತ ಎಂಎಂ ಕೀರವಾಣಿ

MM Keeravani: “ಭಾರತದಲ್ಲಿ ಸಂಗೀತ ತಾರೆಯರಿಲ್ಲ…” ಆಸ್ಕರ್‌ ವಿಜೇತ ಎಂಎಂ ಕೀರವಾಣಿ

waheeda-raheem

Dadasaheb Phalke: ಹಿರಿಯ ನಟಿ ವಹೀದಾ ರೆಹಮಾನ್‌ ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಗೌರವ

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

1-csadasd

Cauvery Water; ಕಾಂಗ್ರೆಸ್‌ ಸರ್ಕಾರ ಅಸಮರ್ಥ: ಬಿಜೆಪಿ- ಜೆಡಿಎಸ್ ಜಂಟಿ ಪ್ರತಿಭಟನೆ

vatal

September 29 ರಂದು ಕರ್ನಾಟಕ ಬಂದ್‌ ; ನೂರಾರು ಸಂಘಟನೆಗಳ ಬೆಂಬಲ

Goa; ಈ ಕಾರಣಕ್ಕೆ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿಲ್ಲ: ತಾನಾವಡೆ

Goa; ಈ ಕಾರಣಕ್ಕಾಗಿ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿಲ್ಲ: ತಾನಾವಡೆ

1-sasad-s

Muslim ಮಹಿಳೆಯರ ಪರವಾಗಿ ಏಕೆ ನಿಲ್ಲಲಿಲ್ಲ?: ವಿಪಕ್ಷಗಳ ವಿರುದ್ಧ ಪ್ರಧಾನಿ ಕಿಡಿ

1-fs-sad

Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.