ಬರುತ್ತಿದೆ ‘ಭೂಲ್ ಬುಲಯ್ಯ’ ಪಾರ್ಟ್ 2

Team Udayavani, May 14, 2019, 5:04 PM IST

ಮುಂಬಯಿ: ಮೋಹನ್ ಲಾಲ್, ಶೋಭನಾ, ಸುರೇಶ್ ಗೋಪಿ ಮುಖ್ಯ ಭೂಮಿಕೆಯಲ್ಲಿದ್ದ ಮತ್ತು ಹೆಸರಾಂತ ನಿರ್ದೇಶಕ ಫಾಝಿಲ್ ಅವರ ನಿರ್ದೇಶನದಲ್ಲಿ 1993ರಲ್ಲಿ ಬಿಡುಗಡೆಗೊಂಡ ‘ಮಣಿಚಿತ್ರತ್ತಾಳ್’ ಎಂಬ ಮಲಯಾಳಂ ಚಿತ್ರ ಆ ಕಾಲದಲ್ಲಿ ಭಾರೀ ಸದ್ದು ಮಾಡಿತ್ತು.

ಬಳಿಕ ಈ ಚಿತ್ರ ಕನ್ನಡ, ತಮಿಳು, ಬಂಗಾಲಿ ಮತ್ತು ಹಿಂದಿ ಭಾಷೆಗಳಲ್ಲಿ ರಿಮೇಕ್ ಆಗಿ ಅಲ್ಲಿಯೂ ಭಾರೀ ಸಕ್ಸಸ್ ಕಂಡಿತ್ತು.

ಹಿಂದಿಯಲ್ಲಿ ಭೂಲ್ ಬುಲಯ್ಯಾ ಎಂಬ ಹೆಸರಿನಲ್ಲಿ 2007ರಲ್ಲಿ ಈ ಚಿತ್ರ ತೆರೆಕಂಡು ಭಾರೀ ಯಶಸ್ಸನ್ನು ಗಳಿಸಿತ್ತು. ಅಕ್ಷಯ್ ಕುಮಾರ್, ವಿದ್ಯಾಬಾಲನ್, ಪರೇಶ್ ರಾವಲ್ ಮತ್ತು ಮನೋಜ್ ಜೋಷಿ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

ಇದೀಗ ಹನ್ನೆರಡು ವರ್ಷಗಳ ಬಳಿಕ ಇದರ ಮುಂದುವರಿದ ಭಾಗ ತೆರೆಗೆ ಬರುವ ಸುದ್ದಿ ಬಿ ಟೌನ್ ನಿಂದ ಹೊರಬಿದ್ದಿದೆ. ಭೂಲ್ ಭುಲಯ್ಯಾ ಚಿತ್ರವನ್ನು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಅವರು ನಿರ್ದೇಶಿಸಿದ್ದರು. ಆದರೆ ಇದರ ಮುಂದುವರಿದ ಬಾಗದಲ್ಲಿ ನಿರ್ದೆಶಕರ ಸಹಿತ ಸಂಪೂರ್ಣ ತಾರಾಗಣವೇ ಬದಲಾಗಲಿದೆ.

ಈ ಚಿತ್ರದ ಎರಡನೇ ಭಾಗವನ್ನು ಫರ್ಹಾದ್ ಸಮ್ಜೀ ಅವರು ನಿರ್ದೇಶಿಸಲಿದ್ದಾರೆ. ಇದೀಗ ಕಥೆ ಮತ್ತು ಚಿತ್ರಕಥೆಯ ಕೆಲಸಗಳು ನಡೆಯುತ್ತಿದ್ದು ಇದು ಫೈನಲ್ ಆದ ಬಳಿಕ ತಾರಾ ಬಳಗದ ಆಯ್ಕೆ ನಡೆಯಲಿದೆ. ಬಹುತೇಕ ಹೊಸ ಮುಖಗಳೇ ಈ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ