ದಳಪತಿ ವಿಜಯ್ ʼಲಿಯೋʼ ಚಿತ್ರದಿಂದ ಹೊರಬಂದ ತ್ರಿಷಾ?: ವೈರಲ್‌ ಸುದ್ದಿಗೆ ನಟಿ ತಾಯಿ ಸ್ಪಷ್ಟನೆ


Team Udayavani, Feb 8, 2023, 9:48 AM IST

tdy-3

ಚೆನ್ನೈ: ದಳಪತಿ ವಿಜಯ್‌ ಅವರ 67 ನೇ ಸಿನಿಮಾ ʼಲಿಯೋʼಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚೆಗಷ್ಟೇ ಸಿನಿಮಾದ ಟೈಟಲ್‌ ಟೀಸರ್‌ ರಿಲೀಸ್‌ ಮಾಡಿ ಸದ್ದು ಮಾಡಿದ ʼಲಿಯೋʼ ಇದೀಗ ಶೂಟಿಂಗ್‌ ಹಂತದಲ್ಲೇ ಹೈಪ್‌ ಹೆಚ್ಚಿಸಿದೆ.

ಕಾಶ್ಮೀರದಲ್ಲಿ ʼಲಿಯೋʼ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ವಿಜಯ್‌ ಅವರ ಸಿನಿಮಾ ಅಂದ ಮೇಲೆ ಅಲ್ಲಿ ನಿರೀಕ್ಷೆಗಳು ಇದ್ದೇ ಇರುತ್ತವೆ. ಅದು ಈ ಬಾರಿ ಮತ್ತಷ್ಟು ಹೆಚ್ಚಾಗಿದೆ. ಕಾರಣ ಸಿನಿಮಾದ ನಿರ್ದೇಶಕ ಲೋಕೇಶ್‌ ಕನಕರಾಜ್.‌ ʼಮಾಸ್ಟರ್‌ ಸಿನಿಮಾದ ಬಳಿಕ ವಿಜಯ್‌ ಯೊಂದಿಗೆ ಮತ್ತೆ ಕನಕರಾಜ್ ಸಿನಿಮಾ ಮಾಡುತ್ತಿದ್ದಾರೆ. ರಿಲೀಸ್‌ ಗೂ ಮುನ್ನ ಡಿಜಿಟಲ್ ಹಕ್ಕುಗಳು, ಸ್ಯಾಟಲೈಟ್ ಮತ್ತು ಮ್ಯೂಸಿಕ್ ರೈಟ್ಸ್‌ಗಳಿಂದ ಸಿನಿಮಾ 246 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎನ್ನುವ ವರದಿಯೊಂದು ಹೊರ ಬಿದ್ದಿದೆ.

ಇನ್ನು ಸಿನಿಮಾದಲ್ಲಿ ವಿಜಯ್‌ ಅವರೊಂದಿಗೆ ನಾಯಕಿಯಾಗಿ ತ್ರಿಷಾ ಕೃಷ್ಣನ್‌ ನಟಿಸುತ್ತಿದ್ದಾರೆ. 14 ವರ್ಷದ ಬಳಿಕ ತ್ರಿಷಾ ವಿಜಯ್‌ ಅವರೊಂದಿಗೆ ನಟಿಸುತ್ತಿದ್ದಾರೆ. ಈ ನಡುವೆಯೇ ಸಿನಿಮಾದಿಂದ ತ್ರಿಷಾ ಹೊರ ಬಂದಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

ಚೆನ್ನೈ ಏರ್‌ ಪೋರ್ಟ್‌ ನಲ್ಲಿ ತ್ರಿಷಾ ಅವರು ಕಾಣಿಸಿಕೊಂಡಿದ್ದಾರೆ. ತ್ರಿಷಾ ಅವರಿಗೆ ಕಾಶ್ಮೀರದ ವಾತಾವರಣ ಆಗದ ಕಾರಣ, ಅವರು ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಸಿನಿಮಾ ಅವರು ಹೊರ ಬಂದಿದ್ದಾರೆ ಎನ್ನುವ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ಸಹಿತ ಹರಿದಾಡುತ್ತಿದೆ.

ಈ ಬಗ್ಗೆ ಸ್ವತಃ ತ್ರಿಷಾ ಅವರ ತಾಯಿ ಉಮಾ ಕೃಷ್ಣನ್‌ ಅವರು ಸ್ಥಳೀಯ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ವದಂತಿ, ತ್ರಿಷಾ ಕಾಶ್ಮೀರದಲ್ಲೇ ಇದ್ದಾರೆ. ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರ ತಂಡದೊಂದಿಗೆ ಇದ್ದಾರೆ ಎಂದು ಹೇಳಿ ವದಂತಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಮಿಸ್ಕಿನ್, ಗೌತಮ್ ಮೆನನ್, ಪ್ರಿಯಾ ಆನಂದ್, ಅರ್ಜುನ್ ಸರ್ಜಾ, ಸ್ಯಾಂಡಿ ಮತ್ತು ಮನ್ಸೂರ್ ಅಲಿ ಖಾನ್ ಮುಂತಾದ ಕಲಾವಿದರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ವೈರಲ್‌ ಆದ ಫೋಟೋ..

ಟಾಪ್ ನ್ಯೂಸ್

ಕಾಸರಗೋಡು: ಪುರಾತನ ನೆಲಮಾಳಿಗೆ ಪತ್ತೆ

ಕಾಸರಗೋಡು: ಪುರಾತನ ನೆಲಮಾಳಿಗೆ ಪತ್ತೆ

mousin khan

ಮೊಹ್ಸಿನ್‌ ಖಾನ್‌ ಐಪಿಎಲ್‌ಗೆ ಅನುಮಾನ

arrest 3

10 ಲಕ್ಷ ರೂ. ಕಳ್ಳತನಗೈದ ಆರೋಪಿಯ ಸೆರೆ

arrest

ವಾರಂಟ್‌ ಆರೋಪಿ 1 ವರ್ಷ ಬಳಿಕ ಸೆರೆ

rudranksh

ಶೂಟಿಂಗ್‌ ವಿಶ್ವಕಪ್‌: ಕಂಚು ಗೆದ್ದ ರುದ್ರಾಂಕ್ಷ್‌

ಉಡುಪಿ: ಕೆವೈಸಿ ಅಪ್‌ಡೇಟ್‌ ನೆಪದಲ್ಲಿ ವಂಚನೆ

ಉಡುಪಿ: ಕೆವೈಸಿ ಅಪ್‌ಡೇಟ್‌ ನೆಪದಲ್ಲಿ ವಂಚನೆ

ಬೆಳೆ ವಿಮೆ ಪರಿಹಾರಕ್ಕಾಗಿ ಡಿಜಿಕ್ಲೈಮ್‌ ;  ಸಚಿವ ತೋಮರ್‌ ಸಿಂಗ್‌ ಅವರಿಂದ ಅನಾವರಣ

ಬೆಳೆ ವಿಮೆ ಪರಿಹಾರಕ್ಕಾಗಿ ಡಿಜಿಕ್ಲೈಮ್‌ ; ಸಚಿವ ತೋಮರ್‌ ಸಿಂಗ್‌ ಅವರಿಂದ ಅನಾವರಣ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಟ ಅಜಿತ್ ಕುಮಾರ್ ತಂದೆ ಸುಬ್ರಮಣಿಯಮ್ ಮಣಿ ವಿಧಿವಶ; ಗಣ್ಯರ ಸಂತಾಪ

ನಟ ಅಜಿತ್ ಕುಮಾರ್ ತಂದೆ ಸುಬ್ರಮಣಿಯಮ್ ಮಣಿ ವಿಧಿವಶ; ಗಣ್ಯರ ಸಂತಾಪ

director Pradeep Sarkar passes away

ಇಹಲೋಕ ತ್ಯಜಿಸಿದ ಖ್ಯಾತ ನಿರ್ದೇಶಕ ಪ್ರದೀಪ್ ಸರ್ಕಾರ್

ntr 30

ಜ್ಯೂ. NTR ಅಭಿನಯದ ʻNTR 30ʼ ಗೆ ಮುಹೂರ್ತ ಫಿಕ್ಸ್‌… ಅಭಿಮಾನಿಗಳಲ್ಲಿ ಮೂಡಿದ ನಿರೀಕ್ಷೆ

47ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಲಯಾಳಂ ನಟಿಯ ತಾಯಿ

47ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಲಯಾಳಂ ನಟಿಯ ತಾಯಿ

ಪ್ರತಿನಿತ್ಯ ಈ ಕಾರಣದಿಂದ ಮನೆ ಕೆಲಸದಾಕೆಯ ಪಾದವನ್ನು ಸ್ಪರ್ಶಿಸುತ್ತಾರೆ ಅಂತೆ ನಟಿ ರಶ್ಮಿಕಾ

ಪ್ರತಿನಿತ್ಯ ಈ ಕಾರಣದಿಂದ ಮನೆ ಕೆಲಸದಾಕೆಯ ಪಾದವನ್ನು ಸ್ಪರ್ಶಿಸುತ್ತಾರೆ ಅಂತೆ ನಟಿ ರಶ್ಮಿಕಾ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

ಕಾಸರಗೋಡು: ಪುರಾತನ ನೆಲಮಾಳಿಗೆ ಪತ್ತೆ

ಕಾಸರಗೋಡು: ಪುರಾತನ ನೆಲಮಾಳಿಗೆ ಪತ್ತೆ

mousin khan

ಮೊಹ್ಸಿನ್‌ ಖಾನ್‌ ಐಪಿಎಲ್‌ಗೆ ಅನುಮಾನ

arrest 3

10 ಲಕ್ಷ ರೂ. ಕಳ್ಳತನಗೈದ ಆರೋಪಿಯ ಸೆರೆ

arrest

ವಾರಂಟ್‌ ಆರೋಪಿ 1 ವರ್ಷ ಬಳಿಕ ಸೆರೆ

rudranksh

ಶೂಟಿಂಗ್‌ ವಿಶ್ವಕಪ್‌: ಕಂಚು ಗೆದ್ದ ರುದ್ರಾಂಕ್ಷ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.