ನಾನು ಮದುವೆ ಆಗಿಲ್ಲ; ಆದಾಗ ಜಗತ್ತಿಗೇ ತಿಳಿಸುತ್ತೇನೆ: ನಟ ಅರ್ಜುನ್‌ ಕಪೂರ್‌

Team Udayavani, May 8, 2019, 12:35 PM IST

ಮುಂಬಯಿ : ತಾನು ಮದುವೆಯಾಗಿದ್ದೇನೆ ಎಂಬ ವದಂತಿಗಳನ್ನು ನಟ ಅರ್ಜುನ್‌ ಕಪೂರ್‌ ಸಾರಾಸಗಟು ತಳ್ಳಿ ಹಾಕಿದ್ದಾರೆ; ‘ನಾನು ಮದುವೆಯಾದಾಗ ಇಡಿಯ ಜಗತ್ತಿಗೇ ತಿಳಿಸುತ್ತೇನೆ’ ಎಂದು ಖಡಕ್‌ ಆಗಿ ಹೇಳಿದ್ದಾರೆ.

ನಟ ಅರ್ಜುನ್‌ ಕಪೂರ್‌, ಬಾಲಿವುಡ್‌ ನಟಿ ಮಲೈಕಾ ಅರೋರಾ ಅವರನ್ನು ವಿವಾಹವಾಗಲು ಸಜ್ಜಾಗಿದ್ದಾರೆ ಎಂಬ ವದಂತಿಗಳು ಬಾಲಿವುಡ್‌ ನಲ್ಲಿ ತೀವ್ರವಾಗಿ ಗರಿಗೆದರಿರುವ ನಡುವೆ,  ಕಪೂರ್‌ ಅವರಿಂದ ಈ ಸ್ಪಷ್ಟೀಕರಣ ಬಂದಿದೆ.

“ನಾನು ಮದುವೆಯಾಗಿಲ್ಲ; ನಾನು ಮದುವೆಯಾಗುವುದಿದ್ದರೆ ಅದನ್ನು ಮುಕ್ತವಾಗಿ ತಿಳಿಸುತ್ತೇನೆ. ನನ್ನ ಮದುವೆಯನ್ನು ಮುಚ್ಚಿಡುವ ಯಾವುದೇ ಅನಿವಾರ್ಯತೆ ನನಗಿಲ್ಲ.  ಜನರಿಂದ ಅಡಗಿಸಿಡುವ ವಿಷಯವೂ ಅದಲ್ಲ; ನಾನು ಯಾವುದನ್ನೂ ಅಡಗಿಸಿಡುತ್ತಿಲ್ಲ ವಾದ್ದರಿಂದ ಮದುವೆ ವಿಷಯವನ್ನೇಕೆ ಅಡಗಿಸಿಡಲಿ’ ಎಂದು ಅರ್ಜುನ್‌ ಪ್ರಶ್ನಿಸಿದ್ದಾರೆ.

“ನಾನೀಗ ಕೆಲಸದಲ್ಲಿ ವ್ಯಸ್ತನಾಗಿದ್ದೇನೆ. ಮದುವೆಯಾಗುವ ಹಂತಕ್ಕಿನ್ನೂ ನಾನು ಬಂದಿಲ್ಲ’ ಎಂದು 33ರ ಹರೆಯದ ಅರ್ಜುನ್‌ ಕಪೂರ್‌ ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ