Big B, ಬಿಗ್‌ ಕೆ ಮಧ್ಯೆ ಬಿಗ್‌ ಎಸ್‌ ಇರಬೇಕಿತ್ತು !ಗೋವಾ ಚಿತ್ರೋತ್ಸವದಲ್ಲಿ ಅನುಪಮ ಸಮಾಗಮ

Team Udayavani, Nov 21, 2019, 12:36 PM IST

IFFI-Big-B

ಪಣಜಿ, ನ. 21: ಗೋವಾದ ಚಿತ್ರೋತ್ಸವದ ಉದ್ಘಾಟನಾ ವೇದಿಕೆಯಲ್ಲಿ ಬುಧವಾರ ಬಿಗ್‌ ಬಿ ಮತ್ತ ಬಿಗ್‌ ಕೆ ಕಂಗೊಳಿಸಿದಾಗ ಕೊರತೆ ಎನಿಸಿದ್ದು ಬಿಗ್‌ ಎಸ್‌!

ಬಾಲಿವುಡ್‌ನ ಶಹೆನ್‌ಷಾ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಚಿತ್ರೋತ್ಸವವನ್ನುಉದ್ಘಾಟಿಸಿದರು. ಜತೆಗೆ ತಮ್ಮ ಗೆಳೆಯ ತಮಿಳು ಚಿತ್ರನಟ ರಜನೀಕಾಂತ್‌ [ಬಿಗ್‌ ಬಿ ಎಂದರೆ ಬಾಲಿವುಡ್‌ನಲ್ಲಿ ಬಿಗ್‌ ಎಂದರ್ಥ. ಬಿಗ್‌ ಟಿ ಎಂದರೆ ಕಾಲಿವುಡ್‌ನಲ್ಲಿ ಬಿಗ್‌ ಎಂದರ್ಥ. ಬಾಲಿವುಡ್‌ ಹಿಂದಿ ಚಿತ್ರರಂಗವಾದರೆ, ಕಾಲಿವುಡ್‌ ತಮಿಳು ಚಿತ್ರರಂಗ] ರಿಗೆ ಸುವರ್ಣ ಮಹೋತ್ಸವ ನೆನಪಿನ ಗೌರವ ನೀಡಿ ಅಭಿನಂದಿಸಿದರು.

ಆಗ ಇಬ್ಬರೂ ಮೊದಲು ನಮಸ್ಕರಿಸಿದ್ದು ತಮ್ಮ ಅಭಿಮಾನಿಗಳಿಗೆ. ಇಬ್ಬರ ಮಾತೂ ಒಂದೇ ತೆರನದ್ದಾಗಿತ್ತು. ‘ನಿಜ, ನಮ್ಮನ್ನು ಬೆಳೆಸಿದ್ದುನಿರ್ದೇಶಕರು, ಚಿತ್ರ ಪರಿಣಿತರು ಎಲ್ಲವೂ ನಿಜ. ಅವರಿಗೆ ನಮ್ಮ ಧನ್ಯವಾದಗಳಿವೆ. ಆದರೂ, ಈ ಸ್ಥಿತಿಗೆ ನಮ್ನನ್ನು ತಂದು ನಿಲ್ಲಿಸಿರುವುದು ನೀವು [ಅಭಿಮಾನಿಗಳು]. ನಿಮ್ಮ ಋಣವೇ ದೊಡ್ಡದು’ ಎಂದು ಹೇಳಿದರು. ಇಬ್ಬರ ಮಾತಿಗೂ ಪ್ರೇಕ್ಷಕರು ತಮ್ಮ ಅಮೋಘ ಕರತಾಡನದ ಮೂಲಕ ಮೊಹರು ಒತ್ತಿದ್ದೂ ನಿಜ.

ಕೊರತೆ ಎನಿಸಿದ್ದು ಬಿಗ್‌ ಎಸ್‌ !

ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರ ಒಟ್ಟಿನ ದೃಶ್ಯವೇ ವಿಶಿಷ್ಟ ಎನ್ನುವಂತಿತ್ತು. ಆಗ ಅಲ್ಲಿ ಕೊರತೆ ಎನಿಸಿದ್ದು ಎಂದರೆ, ಬಿಗ್‌ ಎಸ್‌ !

ಕನ್ನಡ ಚಿತ್ರರಂಗ [ಸ್ಯಾಂಡಲ್‌ವುಡ್‌]ದ ಮೇರು ನಟ ಡಾ. ರಾಜಕುಮಾರ್‌ ಬಿಗ್‌ ಎಸ್‌ ಆಗಿ ಇದೇ ವೇದಿಕೆಯಲ್ಲಿ ಇವರೊಂದಿಗೆ ಇದ್ದಿದ್ದರೆ [ಅವರಿಗೆ ೯೦ ವರ್ಷವಾಗಿರುತ್ತಿತ್ತು. ಅತಿ ಹಿರಿಯ ನಟನೆಂಬ ಖ್ಯಾತಿಗೂ ಒಳಗಾಗಿರುತ್ತಿದ್ದರು]ಆ ದೃಶ್ಯವೇ ಬೇರಾಗುತ್ತಿತ್ತು.

ಈ ಮೂವರೂ ತಮ್ಮ ತಮ್ಮ ಚಿತ್ರರಂಗದಲ್ಲಿ ಗಳಿಸಿದ ಜನಪ್ರಿಯತೆ, ನಿರ್ಮಿಸಿದ ಜನಪ್ರಿಯತೆಯ ಅಲೆ ಅನನ್ಯ. ಕೆಲವು ವಿಷಯಗಳಲ್ಲಿ ನಡೆ ನುಡಿಯ ಮಧ್ಯೆ ಸಮನ್ವಯತೆಯನ್ನೂ ಇಟ್ಟುಕೊಂಡು ಬೆಳೆದವರು. ಪರಸ್ಪರ ಗೌರವ ತೋರುತ್ತಲೇ ಬಾಳಿದವರು. ಕೆಲವು ವಿವಾದದ ಸಂದರ್ಭದಲ್ಲೂ ತಮ್ಮಸಂಬಂಧಗಳನ್ನು ಗೋಜಲು ಮಾಡಿಕೊಳ್ಳದೇ ನಿರ್ವಹಿಸಿದವರು. ಈ ಮೂವರೂ ಒಂದೇ ವೇದಿಕೆಯಲ್ಲಿ, ಅದರಲ್ಲೂ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸುವರ್ಣ ಮಹೋತ್ಸವ ವೇದಿಕೆಯಲ್ಲಿ. ಎಂಥಾ ದೃಶ್ಯವಾಗಿರುತ್ತಿತ್ತು.

ಈ ಮೂರೂ ಚಿತ್ರರಂಗದಲ್ಲಿ ಕಂಡುಬರುತ್ತಿರುವ ಕೊರತೆ ಈಗ ಒಂದೇ ಈ ಮೂರೂ ಬಿಗ್‌ಗಳ ನಂತರ ಹೊಸ ಬಿಗ್‌ಗಳೇ ತೋರುತ್ತಿಲ್ಲ !

ಇಲ್ಲಿ ಬಿಗ್‌ ಎಸ್‌ ಎಂದರೆ ಸ್ಯಾಂಡಲ್‌ವುಡ್‌ನ ಬಿಗ್‌ ಎಂದಷ್ಟೇ ಅಲ್ಲ. ಹಿರಿಯ ನಟನಾಗಿ ಭಾರತೀಯ ಚಿತ್ರರಂಗದ ಷಹೆನ್‌ಷಾ [ಅನಭಿಷಿಕ್ತ ಚಕ್ರವರ್ತಿ] ಆಗಿ ಕಂಗೊಳಿಸುತ್ತಿದ್ದರು ಡಾ. ರಾಜಕುಮಾರ್‌.

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ʼಖಲ್‌ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್‌ನಲ್ಲಿ ಬಿಟೌನ್‌ ಸ್ಟಾರ್ಸ್ ಜೊತೆ ಯಶ್‌, ಅಲ್ಲು?

Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್‌ ಆದ ಮುನ್ನಿ

Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್‌ ಆದ ಮುನ್ನಿ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.