ಪತಿಯನ್ನು ಕಳೆದುಕೊಂಡಿಲ್ಲ, ಗಳಿಸಿಕೊಂಡಿದ್ದೇನೆ
Team Udayavani, May 4, 2020, 11:20 AM IST
ಬಾಲಿವುಡ್ ನ ಕ್ರಿಯಾಶೀಲ ನಟ ಇರ್ಫಾನ್ ಖಾನ್ ತೀರಿಕೊಂಡ ನಂತರ ಅವರ ಪತ್ನಿ ಸುತಾಪ ಸಿಕ್ದರ್ ಭಾವನಾತ್ಮಕ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ರೋಗದಿಂದ 2 ವರ್ಷಕ್ಕೂ ಹೆಚ್ಚು ಕಾಲ ಹೋರಾಡಿ ಇರ್ಫಾನ್ ಖಾನ್ ಕಳೆದ ಬುಧವಾರ ಇಹಲೋಕ ತ್ಯಜಿಸಿದ್ದರು. ಇರ್ಫಾನ್ ಪತ್ನಿ ಸುತಾಪಾ ಮತ್ತು ಇಬ್ಬರು ಪುತ್ರರಾದ ಬಬಿಲ್ ಮತ್ತು ಅಯಾನ್ ಅವರನ್ನು ಅಗಲಿದ್ದಾರೆ. ಸುತಾಪಾ ಫೇಸ್ ಬುಕ್ ನಲ್ಲಿ ಫೋಟೋವೊಂದನ್ನು ಷೇರ್ ಮಾಡಿದ್ದು ಅದರಲ್ಲಿ ತಮ್ಮ ತೋಳುಗಳನ್ನು ಇರ್ಫಾನ್ ಅವರ ಸುತ್ತ ಬಳಸಿ ಇಬ್ಬರೂ ಕ್ಯಾಮರಾ ನೋಡಿ ನಗುತ್ತಿದ್ದಾರೆ. ಈ ಫೋಟೋಗೆ ನಾನು ಏನೂ ಕಳೆದುಕೊಂಡಿಲ್ಲ, ಸಾಧ್ಯವಾದದ್ದನ್ನೆಲ್ಲಾ ಪ್ರತಿಯೊಂದು ಗಳಿಗೆಯಲ್ಲಿ ಜೀವನದಲ್ಲಿ ಪಡೆದುಕೊಂಡಿದ್ದೇನೆ ಎಂದು ಬರೆದಿದ್ದಾರೆ.