Kollywood: ದೀಪಾವಳಿಗೆ ಒಂದೇ ದಿನ 2 ಸಿನಿಮಾ; ಮೋಡಿ ಮಾಡುತ್ತಾ ಜಪಾನ್ – ಜಿಗರ್ತಾಂಡ ಡಬಲ್X?
Team Udayavani, Nov 2, 2023, 6:22 PM IST
ಚೆನ್ನೈ: ಕಾಲಿವುಡ್ ಸಿನಿರಂಗದಲ್ಲಿ ಮತ್ತೆ ಬಾಕ್ಸ್ ಆಫೀಸ್ ಕದನ ಉಂಟಾಗಲಿದೆ. ಎರಡು ದೊಡ್ಡ ಹಾಗೂ ಬಹು ನಿರೀಕ್ಷಿತ ಸಿನಿಮಾಗಳು ಒಂದೇ ದಿನ ರಿಲೀಸ್ ಆಗಲಿದೆ.
ಕಾಲಿವುಡ್ ನಲ್ಲಿ ಒಂದೇ ದಿನ ಎರಡು ಬಿಗ್ ಸಿನಿಮಾಗಳು ರಿಲೀಸ್ ಆಗುವುದು ಹೊಸತಲ್ಲ. ಈ ಹಿಂದೆ ಕೂಡ ಕಾಲಿವುಡ್ ನಲ್ಲಿ ಒಂದೇ ದಿನ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಪ್ರತಿ ಬಾರಿ ಸಂಕ್ರಾಂತಿ ಹಬ್ಬಕ್ಕೆ ಇಂಥದ್ದೊಂದು ಟ್ರೆಂಡ್ ಇರುತ್ತದೆ ಆದರೆ ಈ ಬಾರಿ ದೀಪಾವಳಿ ಹಬ್ಬಕ್ಕೆ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆಗಲಿವೆ.
ʼಜಪಾನ್ʼ ರಿಲೀಸ್ ಡೇಟ್ ಔಟ್:
ಕಾರ್ತಿ ಅಭಿನಯದ ಬಹು ನಿರೀಕ್ಷಿತ ಆ್ಯಕ್ಷನ್ – ಡ್ರಾಮಾ ʼಜಪಾನ್ʼ ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಟ್ರೇಲರ್ ನೋಡಿ ಫ್ಯಾನ್ಸ್ ಗಳು ಫಿದಾ ಆಗಿದ್ದಾರೆ. ಇದೀಗ ಸಿನಿಮಾದ ರಿಲೀಸ್ ಡೇಟ್ ನ್ನು ಚಿತ್ರತಂಡ ರಿವೀಲ್ ಮಾಡಿದೆ. ʼಯುಎʼ ಸರ್ಟಿಫಿಕೇಟ್ ಸಿನಿಮಾಕ್ಕೆ ಸಿಕ್ಕಿದ್ದು, ಇದೇ ದೀಪಾವಳಿ ಅಂದರೆ ನವೆಂಬರ್ 10 ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ.
ರಾಜು ಮುರುಗನ್ ನಿರ್ದೇಶನ ಈ ಸಿನಿಮಾದಲ್ಲಿ ಕಾರ್ತಿ ದರೋಡೆಕೋರನಾಗಿ ಕಾಣಿಸಿಕೊಳ್ಳಲಿದ್ದು, 200 ಕೋಟಿ ಮೌಲ್ಯದ ಚಿನ್ನಾಭರಣವನ್ನು ಕದ್ದಿರುತ್ತಾರೆ.
ಸಿನಿಮಾದಲ್ಲಿ ಅನು ಇಮ್ಯಾನುಯೆಲ್, ಸುನಿಲ್, ಕೆ.ಎಸ್.ರವಿಕುಮಾರ್, ಜಿತನ್ ರಮೇಶ್, ಬಾವ ಚೆಲ್ಲದೊರೈ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ದೀಪಾವಳಿಗೆ ಕಮಾಲ್ ಮಾಡುತ್ತಾ ʼ ಜಿಗರ್ತಾಂಡ ಡಬಲ್ ಎಕ್ಸ್ʼ ?:
ಕಾರ್ತಿಕ್ ಸುಬ್ಬರಾಜ್ ಕಂಬ್ಯಾಕ್ ಮಾಡುವ ನಿರೀಕ್ಷೆ ಇರುವ ʼಜಿಗರ್ತಾಂಡʼ ಸಿನಿಮಾದ ಸೀಕ್ವೆಲ್ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ. 2014 ರಲ್ಲಿ ಬಂದ ʼ ಜಿಗರ್ತಾಂಡʼ ಸಿನಿಮಂದಿಯನ್ನು ರಂಜಿಸಿತ್ತು. ಇದೀಗ ಈ ಸಿನಿಮಾದ ಸೀಕ್ವೆಲ್ ಕೂಡ ಅದೇ ರೀತಿಯ ಮೋಡಿ ಮಾಡುವ ನಿರೀಕ್ಷೆಯಿದೆ.
ರಾಘವ ಲಾರೆನ್ಸ್ ಮತ್ತು ಎಸ್ಜೆ ಸೂರ್ಯ ‘ಜಿಗರ್ತಾಂಡ ಡಬಲ್ ಎಕ್ಸ್’ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸಿನಿಮಾದಲ್ಲಿನ ರ್ಯಾಪ್ ಹಾಡೊಂದು, 70 ದಶಕದ ಕಾಲವನ್ನು ನೆನಪಿಸುವಂತೆ ಮಾಡುತ್ತಿದ್ದು, ವೈರಲ್ ಆಗಿದೆ.
2 ಗಂಟೆ 52 ನಿಮಿಷ ಇರುವ ಈ ಸಿನಿಮಾ ಕೂಡ ನವೆಂಬರ್ 10 ರಂದು ರಿಲೀಸ್ ಆಗಲಿದೆ.
ಒಂದೇ ದಿನ ಎರಡು ದೊಡ್ಡ ಸಿನಿಮಾಗಳು ರಿಲೀಸ್ ಆಗಲಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
#Japan is yours from Nov 10th.#UAforJAPAN #JapanDiwali @Karthi_Offl @ItsAnuEmmanuel @vagaiyaar @ksravikumardir #Sunil @vijaymilton @sanalaman @gvprakash @dop_ravivarman @ActionAnlarasu @philoedit #Banglan @YugabhaarathiYB @Arunrajakamaraj @PraveenRaja_Off @Dir_Rajumurugan… pic.twitter.com/DAZWu7WzSr
— DreamWarriorPictures (@DreamWarriorpic) November 2, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?