
47ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಲಯಾಳಂ ನಟಿಯ ತಾಯಿ
Team Udayavani, Mar 23, 2023, 3:20 PM IST

ಕೊಚ್ಚಿ: ಮಲಯಾಳಂ ನಟಿ ಆರ್ಯ ಪಾರ್ವತಿ ಅವರ ತಾಯಿ 47ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ವಿಚಾರವನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ನಟಿ ಆರ್ಯ ಪಾರ್ವತಿ ʼಹ್ಯೂಮನ್ಸ್ ಆಫ್ ಬಾಂಬೆʼ ಜೊತೆ ಈ ಕುರಿತು ಮಾತನಾಡಿದ್ದರು. ನನ್ನ ತಾಯಿ ಗರ್ಭಿಣಿ ಎಂದು ತಿಳಿದಾಗ ನನಗೆ ಮೊದಲು ತುಂಬಾ ಶಾಕ್ ಆಗಿತ್ತು.ಈ ವಿಷಯ ತಿಳಿಸಿದರೆ ಮುಜುಗರವಾಗುತ್ತದೆ ಎನ್ನುವ ಕಾರಣದಿಂದ ನನ್ನಿಂದ ಅಪ್ಪ – ಅಮ್ಮ ಇದನ್ನು ಮುಚ್ಚಿಟ್ಟಿದ್ದರು ಎಂದು ಹೇಳಿದ್ದರು.
ಇದನ್ನೂ ಓದಿ: ಪ್ರತಿನಿತ್ಯ ಈ ಕಾರಣದಿಂದ ಮನೆ ಕೆಲಸದಾಕೆಯ ಪಾದವನ್ನು ಸ್ಪರ್ಶಿಸುತ್ತಾರೆ ಅಂತೆ ನಟಿ ರಶ್ಮಿಕಾ
ಕಳೆದ ವರ್ಷ ಬಂದ ಒಂದು ಕರೆ ನನ್ನ ಜೀವನವನ್ನು ಬದಲಾಯಿಸಿತು. ನಾನು ರಜೆಗಾಗಿ ಮನೆಗೆ ತಲುಪಬೇಕಿತ್ತು. ನನ್ನ ಅಪ್ಪ ಕರೆ “ನಿನ್ನ ಅಮ್ಮ ಪ್ರೆಗ್ನೆಂಟ್” ಎಂದರು. ಇದನ್ನು ಕೇಳಿದ ನನಗೆ ಏನು ಹೇಳಬೇಕೆಂದೇ ಗೊತ್ತಾಗಿಲ್ಲ. ಕಾರಣ 23ನೇ ವಯಸ್ಸಿನಲ್ಲಿ ಮಕ್ಕಳು ಯಾವ ಅಪ್ಪ – ಅಮ್ಮನಿಂದ ಇಂಥ ಮಾತನ್ನು ಕೇಳಲು ಇಷ್ಟಪಡುವುದಿಲ್ಲ. ನಿನ್ನ ಅಮ್ಮನಿಗ ಈಗ 8 ತಿಂಗಳು. ಅವಳಿಗೆ ಈ ವಿಚಾರ ಗೊತ್ತಾದಾಗ 7 ತಿಂಗಳಾಗಿತ್ತು ಎಂದರು. ನೀನು ಏನು ಅಂದುಕೊಳ್ಳುತ್ತೀಯ ಎನ್ನುವ ಕಾರಣಕ್ಕೆ ನಿನ್ನಿಂದ ಈ ವಿಚಾರವನ್ನು ಮುಚ್ಚಿಡಬೇಕಾಯಿತು ಎಂದು ಹೇಳಿದರು. ಆದರೆ ನಾನ್ಯಾಕೆ ಮುಜುಗರಕ್ಕೆ ಒಳಗಾಗಬೇಕೆಂದು ಅಪ್ಪ- ಅಮ್ಮನ ಬಳಿ ಹೇಳಿದೆ ಎಂದು ಹಳೆಯ ಘಟನೆ ಬಗ್ಗೆ ಹೇಳಿದ್ದಾರೆ.
ಇತ್ತೀಚೆಗಷ್ಟೇ ತನ್ನ ಅಮ್ಮನ ಹೊಟ್ಟೆಯನ್ನು ಅಪ್ಪಿಕೊಂಡು ಅಕ್ಕನಾಗುವ ಸಂತಸವನ್ನು ಹಂಚಿಕೊಂಡಿದ್ದರು. ನಟಿಯ ತಾಯಿ ಇದೀಗ ಹೆಣ್ಣಿ ಮಗುವಿಗೆ ಜನ್ಮ ನೀಡಿದ್ದಾರೆ. ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BOLLYWOOD: ದೇವಸ್ಥಾನಗಳಿಗೆ ಸಾರಾ ಆಲಿಖಾನ್ ಭೇಟಿ; ಟ್ರೋಲ್ ಗಳಿಗೆ ಪ್ರತಿಕ್ರಿಯಿಸಿದ ನಟಿ

ಮಲೈಕಾ ಆರೋರಾ ಗರ್ಭಿಣಿ ಗಾಸಿಪ್: “ನಮ್ಮ ವೈಯಕ್ತಿಕ ಜೀವನ..” ಮೌನ ಮುರಿದ ಪ್ರಿಯಕರ Arjun

Malayalam actor: ಮಲಯಾಳಂನ ಖ್ಯಾತ ಪೋಷಕ ನಟ ಹರೀಶ್ ಪೆಂಗನ್ ನಿಧನ

83ರ ದಿಗ್ಗಜ ನಟನ 29ರ ಪ್ರೇಯಸಿ ಗರ್ಭಿಣಿ: 4ನೇ ಬಾರಿ ತಂದೆಯಾಗಲಿದ್ದಾರೆ Al Pacino

ಮೊದಲ ಪತ್ನಿಯಿಂದ ವಿಚ್ಛೇದನ, 2ನೇ ಪತ್ನಿಯ ಭೇಟಿ.. ಮುಕ್ತವಾಗಿ ಮಾತನಾಡಿದ Ashish Vidyarthi