ಹಸೆಮಣೆ ಏರಲು ಸಜ್ಜಾದ ʼಶೇರ್ ಷಾʼ ಜೋಡಿ ಸಿದ್ಧಾರ್ಥ್ – ಕಿಯಾರಾ: ಫೆ.6 ಕ್ಕೆ ಅದ್ಧೂರಿ ವಿವಾಹ
Team Udayavani, Feb 2, 2023, 3:56 PM IST
ಮುಂಬಯಿ: ಬಾಲಿವುಡ್ ನ ಮತ್ತೊಂದು ಸ್ಟಾರ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಪ್ರೀತಿಯ ಬಂಧಕ್ಕೆ ಮದುವೆಯ ಮುದ್ರೆಯನ್ನು ಒತ್ತಲು ರೆಡಿಯಾಗಿದ್ದಾರೆ. ಮದುವೆಯ ದಿನಾಂಕ ನಿಗದಿಯಾಗಿದ್ದು, ಸಂಭ್ರಮಕ್ಕೆ ತಯಾರಿ ಜೋರಾಗಿ ನಡೆಯುತ್ತಿದೆ.
ʼಶೇರ್ಷಾʼ ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರ ಕೆಮೆಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆ ಬಳಿಕ ಇಬ್ಬರೂ ಜೊತೆಯಾಗಿ ಅನೇಕ ಬಾರಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಹೊಸ ವರ್ಷವನ್ನೂ ವಿದೇಶದಲ್ಲಿ ಆಚರಿಸಿಕೊಂಡಿದ್ದರು. ಕದ್ದು ಮುಚ್ಚಿ ತಿರುಗುತ್ತಿದ್ದ ಪ್ರೇಮಿಗಳು ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ರಾಜಸ್ಥಾನದ ಜೈಸಲ್ಮೇರ್ ಪ್ಯಾಲೇಸ್ ಹೋಟೆಲ್‌ನಲ್ಲಿ ಫೆ. 6 ರಂದು ಸಿದ್ದ್ – ಕಿಯಾರಾ ಮದುವೆಯಾಗಲಿದ್ದಾರೆ. ಫೆ. 4, 5 ರಂದು ಆತ್ಮೀಯರ ಸಮ್ಮುಖದಲ್ಲಿ ಮೆಹೆಂದಿ, ಹಳದಿ ಶಾಸ್ತ್ರ, ಹಾಗೂ ಸಂಗೀತ್ ಕಾರ್ಯಕ್ರಮಗಳು ನಡೆಯಲಿವೆ ಎಂದು ಇ ಟೈಮ್ಸ್ ವರದಿ ಮಾಡಿದೆ.
ಕರಣ್ ಜೋಹರ್, ಶಾಹೀದ್ ಕಪೂರ್ ದಂಪತಿ, ಇಶಾ ಅಂಬಾನಿ, ಮನೀಶ್ ಮಲ್ಹೋತ್ರಾ, ಕರಣ್ ಜೋಹರ್ ರಂತಹ ಪ್ರಮುಖರು ವಿವಾಹ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ವರದಿ ತಿಳಿಸಿದೆ.
ನಾಳೆಯಿಂದ ಜೈಸಲ್ಮೇರ್ ಪ್ಯಾಲೇಸ್ ನಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಖ್ಯಾತ ನಟಿ ಆಕಾಂಕ್ಷಾ ದುಬೆ
Gossip; AAP ಸಂಸದ ರಾಘವ್ ಛಡ್ಡಾ ಜೊತೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಡೇಟಿಂಗ್!
ಬಾತ್ ರೂಮ್ ನಲ್ಲಿ ಏಕಾಏಕಿ ಕುಸಿದು ಬಿದ್ದು ಖ್ಯಾತ ನಟಿ ನೀಲು ಕೊಹ್ಲಿ ಅವರ ಪತಿ ಮೃತ್ಯು
ʼಆರ್ ಆರ್ ಆರ್ʼಗೆ ʼಆಸ್ಕರ್ʼ ಬಂದದ್ದು ನನ್ನಿಂದಲೇ.. ಅಜಯ್ ದೇವಗನ್ ಮಾತು ವೈರಲ್
ತೆರೆಗೆ ಮತ್ತೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕಮ್‌ಬ್ಯಾಕ್