ಮಲೈಕಾ ಅರೋರಾ ಗ್ಲ್ಯಾಮರಸ್ ಭಂಗಿಗೆ ನೆಟ್ಟಿಗರ ಭರ್ಜರಿ ರಿವರ್ಸ್ ಸ್ವೀಪ್!

Team Udayavani, Jan 23, 2020, 8:40 PM IST

ಮುಂಬಯಿ: ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಝ್ ಖಾನ್ ನ ಮಾಜೀ ಪತ್ನಿ, ನಟ ಅರ್ಜುನ್ ಕಪೂರ್ ನ ಹಾಲೀ ಲವರ್ ಹಾಗೂ ಸಲ್ಮಾನ್ ಅವರ ದಬಾಂಗ್ ಚಿತ್ರದಲ್ಲಿ ‘ಮುನ್ನಿ ಬದ್ನಾಮ್ ಹುಯೀ’ ಎಂಬ ಹಾಡಿಗೆ ಕುಣಿದು ಪಡ್ಡೆಗಳ ನಿದ್ದೆಗೆಡಿಸಿದ್ದ ನಟಿ, ಡ್ಯಾನ್ಸರ್ ಮಲೈಕಾ ಅರೋರಾ ತನ್ನ ಈ 46ನೇ ವಯಸ್ಸಿನಲ್ಲೂ ಗ್ಲ್ಯಾಮರ್ ಕಾಪಾಡಿಕೊಳ್ಳಲು ನಾನಾ ಕಸರತ್ತುಗಳನ್ನು ಮಾಡುತ್ತಲೇ ಇದ್ದಾರೆ. ಮತ್ತು ತಾನು ಗ್ಲ್ಯಾಮರಸ್ ಆಗಿ ಕಾಣಿಸುಕೊಳ್ಳುವ ಹಾಗೆಯೇ ಫೊಟೋಗಳನ್ನು ತೆಗೆಸಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಲೈಕಾ ಹರಿಯಬಿಡುತ್ತಿರುತ್ತಾರೆ.

ಇದೇ ರೀತಿಯಲ್ಲಿ ಒಂದು ಮಾದಕ ಭಂಗಿಯಲ್ಲಿರುವ ಫೊಟೋ ಒಂದನ್ನು ತನ್ನ ಇನ್ ಸ್ಟಾ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ಮಲೈಕಾ ಅವರು ಇದೀಗ ತನ್ನ ಈ ಫೊಟೋಕ್ಕೆ ನೆಟ್ಟಿಗರಿಂದ ಕಾಲೆಳೆಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಬುಧವಾರದಂದು ಮಲೈಕಾ ಅವರು ಬಿಳಿ ಫ್ರಾಕ್, ಕಾಲಿಗೆ ಕಪ್ಪು ಬಣ್ಣದ ಲಾಂಗ್ ಶೂ ಧರಿಸಿ ಸೋಫಾ ಮೇಲೆ ಮಾದಕ ರೀತಿಯಲ್ಲಿ ಒಂದು ಪಕ್ಕಕ್ಕೆ ಮಲಗಿಕೊಂಡಿರುವ ಫೊಟೋವನ್ನು ಅಪ್ಲೋಡ್ ಮಾಡಿದ್ದರು ಮತ್ತು ‘ಹಾಗೇ ಸುಮ್ಮನೇ ಬಿದ್ದುಕೊಂಡಿರುವುದು’ ಎಂಬರ್ಥದ ಕ್ಯಾಪ್ಷನ್ ನೀಡಿದ್ದರು.

ಮಲೈಕಾ ಅವರ ಈ ಫೊಟೋವನ್ನು ಅವರ ತಾರಾ ಗೆಳೆಯರ ಬಳಗ ಮತ್ತು ಅವರ ಕೆಲವು ಅಭಿಮಾನಿಗಳು ಇಷ್ಟಪಟ್ಟಿದ್ದರೆ, ನೆಟ್ಟಿಗರ ಇನ್ನೊಂದು ವರ್ಗ ಮಲೈಕಾ ಅವರ ಕಾಲೆಳೆದಿವೆ. ‘ಮಲೈಕಾ ಅವರೇ, ನೀವು ಪ್ರಕೃತಿಗೆ ಸವಾಲು ಹಾಕಲು ಸಾಧ್ಯವಿಲ್ಲ. ಇಂತಹ ಬಕ್ವಾಸ್ ಫೋಸುಗಳನ್ನು ನೀಡುವ ಮೂಲಕ ನೀವು ಯುವತಿಯರಂತೆ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಷ್ಟೇ. ಆದರೆ ನಿಮಗೆ ವಯಸ್ಸಾಗಿದೆ ಮತ್ತು ದಿನಕಳೆದಂತೆ ಇನ್ನಷ್ಟು ವಯಸ್ಸಾಗುತ್ತಿದೆ, ಮತ್ತು ನೀವು ಅರ್ಜುನ್ ವಯಸ್ಸಿಗೆ ಸಮನಾಗಲಾರಿರಿ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

View this post on Instagram

Yes jus lounging around very casually …… 🤣🤣 GUTSSSSS

A post shared by Malaika Arora (@malaikaaroraofficial) on


ತಾನು ಧರಿಸುವ ಉಡುಗೆ ತೊಡುಗೆಗಳ ಕಾರಣದಿಂದ ಹಲವಾರು ಬಾರಿ ಟ್ರೋಲ್ ಗೆ ಒಳಗಾಗುತ್ತಿರುವ ನಟಿ ಮಲೈಕಾ ಇತ್ತೀಚೆಗಂತೂ ಯುವ ನಟ ಅರ್ಜುನ್ ಕಪೂರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ವಿಚಾರದಲ್ಲಿ ಸಖತ್ ಟ್ರೋಲ್ ಗೀಡಾಗುತ್ತಿದ್ದಾರೆ.

ಹೊಸ ವರ್ಷದ ಸಂದರ್ಭದಲ್ಲಿ ಅರ್ಜುನ್ ಜೊತೆ ಕ್ಲೋಸ್ ಭಂಗಿಯಲ್ಲಿರುವ ಫೊಟೋ ಒಂದನ್ನು ತನ್ನ ಇನ್ ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಮಲೈಕಾ ಅವರು ಈ ವಿಚಾರದಲ್ಲಿ ನೆಟ್ಟಿಗರಿಂದ ವಿವಿಧ ರೀತಿಯ ಕಮೆಂಟ್ ಗಳನ್ನು ಎದುರಿಸಬೇಕಾಯಿತು.

View this post on Instagram

Sun,star,light,happiness,peace,tolerance …….2020✨

A post shared by Malaika Arora (@malaikaaroraofficial) on


ಅರ್ಬಾಝ್ ಅವರೊಂದಿಗಿನ ದಾಂಪತ್ಯದಲ್ಲಿ ಮಲೈಕಾ ಅವರು ಅರ್ಹಾನ್ ಹೆಸರಿನ ಪುತ್ರನನ್ನು ಹೊಂದಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಸಹ ತೀರ್ಪುಗಾರರಾಗಿ ಪರದೆ ಮೇಲೆ ಕಾಣಿಸಿಕೊಳ್ಳುವ ಮಲೈಕಾ ಯೋಗ ಸ್ಟುಡಿಯೋ ಒಂದನ್ನೂ ಸಹ ನಡೆಸುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ