ಮಲಯಾಳಂ ಸಿನಿಮಾ ರಂಗದ ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್ ನಿಧನ
Team Udayavani, Feb 22, 2023, 11:19 AM IST
ಕೊಚ್ಚಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ಸಿನಿಮಾ ರಂಗದ ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್ (41) ನಿಧನರಾಗಿದ್ದಾರೆ.
ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ಸುಬಿ ಸುರೇಶ್ ಕಳೆದ ಕೆಲ ಸಮಯದಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಬುಧವಾರ ( ಫೆ.22 ರಂದು) ಕೊನೆಯುಸಿರೆಳೆದಿದ್ದಾರೆ.
ಡ್ಯಾನ್ಸರ್ ಹಾಗೂ ಕಾಮಿಡಿಯನ್ ಆಗಿ ಕೆರಿಯರ್ ಆರಂಭಿಸಿದ ಸುಬಿ ಸುರೇಶ್, ‘ಮೇಡ್ ಫಾರ್ ಈಚ್ ಅದರ್’ ಹಾಗೂ ʼಕುಟ್ಟಿ ಪಟ್ಟಾಳಂʼ ಎಂಬ ಮಕ್ಕಳ ಕಾರ್ಯಕ್ರಮದ ನಿರೂಪಕಿಯಾಗಿ ಖ್ಯಾತಿಯನ್ನು ಪಡೆದುಕೊಂಡಿದ್ದರು.
‘ಗೃಹನಾಥನ್’, ‘ತಸ್ಕರ ಲಹಲಾ’, ‘ಎಲ್ಸಮ್ಮ ಎನ್ನ ಅಂಕುಟ್ಟಿ’, ʼಡ್ರಾಮಾʼ,ʼಕಾರ್ಯಸ್ಥಾನ್ʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.
ಇದಲ್ಲದೆ ಲಾಕ್ ಡೌನ್ ಸಮಯದಲ್ಲಿ ಫಿಟ್ ನೆಸ್ ಕುರಿತು ಇವರು ಮಾಡುತ್ತಿದ್ದ ವಿಡಿಯೋಗಳು ಫ್ಯಾಮಿಲಿ ಅಡಿಯನ್ಸ್ ಗಳ ಗಮನ ಸೆಳೆಯುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?